• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಸ್ಸಾಂ ಪ್ರವಾಹ ಸಮಸ್ಯೆ ನಿವಾರಣೆಗೆ ಏರ್‌ಟೆಲ್ ಹೇಗೆ ಸಹಾಯ ಮಾಡುತ್ತಿದೆ ಗೊತ್ತೆ?

By ಅನಿಲ್ ಆಚಾರ್
|

ಅಸ್ಸಾಂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಉಂಟಾದ ವಿಧ್ವಂಸಕಾರಿ ಪ್ರಭಾವದಿಂದ ಪ್ರಸ್ತುತ ನಲುಗಿಹೋಗಿದೆ. ಹಲವಾರು ಜಿಲ್ಲೆಗಳು ಇನ್ನೂ ಮುಳುಗಿಯೇ ಇದ್ದು, ಸಾವಿರಾರು ಕುಟುಂಬಗಳು ನಿರಂತರವಾಗಿ ತೊಂದರೆ ಅನುಭವಿಸುತ್ತಿವೆ. ಈಶಾನ್ಯ ರಾಜ್ಯದಲ್ಲಿ ಪ್ರವಾಹ ಪರಿಹಾರ ಕಾರ್ಯಗಳಿಗೆ ಕೊಡುಗೆ ನೀಡಲು ಅಸ್ಸಾಂನಲ್ಲಿರುವ ಪ್ರಮುಖ ಮೊಬೈಲ್ ಆಪರೇಟರ್ ಆಗಿರುವ ಏರ್‌ಟೆಲ್ ಮತ್ತು ಅದರ ನೆಟ್‌ವರ್ಕ್ ತಂಡಗಳು ಹಗಲು ರಾತ್ರಿ ಕಾರ್ಯ ನಿರ್ವಹಿಸುತ್ತಿವೆ.

ಅಸ್ಸಾಂನಲ್ಲಿ ಪ್ರಸ್ತುತ ಪರಿಸ್ಥಿತಿ

ನೀರಿನ ಮಟ್ಟವು ಇಳಿಮುಖವಾಗಲು ಪ್ರಾರಂಭಿಸಿದ್ದರೂ ಸಹ 268 ಗ್ರಾಮಗಳಲ್ಲಿ ಸುಮಾರು 1,65,763 ಜನರು ಸುಮಾರು 12 ಜಿಲ್ಲೆಗಳಲ್ಲಿ ಇನ್ನೂ ಪ್ರವಾಹದಿಂದಾಗಿ ಬಳಲುತ್ತಿದ್ದಾರೆ ಎಂಬುದನ್ನು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಗಳು ಸೂಚಿಸುತ್ತವೆ. ಹೊಸ ಸಾವು- ನೋವುಗಳು ಇನ್ನೂ ವರದಿಯಾಗುತ್ತಿದ್ದು, ಒಟ್ಟು ಸಾವಿನ ಸಂಖ್ಯೆ ಈಗ 91ಕ್ಕೆ ಏರಿಕೆಯಾಗಿದೆ.

ಪ್ರಸ್ತುತ, 615 ಪರಿಹಾರ ಶಿಬಿರಗಳು 99,000 ಕ್ಕೂ ಹೆಚ್ಚು ಜನರಿಗೆ ಆಶ್ರಯವನ್ನು ಒದಗಿಸುತ್ತಿವೆ. 12 ಜಿಲ್ಲೆಗಳಲ್ಲಿ ಈ ಶಿಬಿರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ವರದಿ ಮಾಡಿದೆ. ಐದು ಜಿಲ್ಲೆಗಳಲ್ಲಿ 49 ಪರಿಹಾರ ವಿತರಣಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಅನೇಕ ಸೆಲೆಬ್ರೆಟಿಗಳು ಮತ್ತು ಕಾರ್ಪೊರೇಟ್ ಘಟಕಗಳು ಸಹಾಯವನ್ನು ವಿಸ್ತರಿಸಲು ಸಾಗರೋಪಾದಿಯಲ್ಲಿ ಕಾರ್ಯೋನ್ಮುಖವಾಗಿವೆ.

ಸಂಪರ್ಕವನ್ನು ಖಚಿತಪಡಿಸುವುದು

ರಾಜ್ಯದ ಸಾವಿರಾರು ಕುಟುಂಬಗಳು ಅತ್ಯಂತ ಗಂಭೀರವಾಗಿ ಸಂಕಷ್ಟಕ್ಕೆ ಒಳಗಾದ ಕಾರಣದಿಂದ ಅವರು ತಮ್ಮ ಮನೆ-ಮಾರುಗಳನ್ನು ತೊರೆದು, ದೂರ ಹೋಗಬೇಕಾಗಿದೆ. ಸ್ಥಳಾಂತರಗೊಂಡ ಅನೇಕರಿಗೆ ತಮ್ಮ ಪ್ರೀತಿಪಾತ್ರರ ಜೊತೆಗೆ ಸಂಪರ್ಕ ಸಾಧಿಸಲು ಇನ್ನೂ ಸಾಧ್ಯವಾಗುತ್ತಿಲ್ಲ.

ಸಹಾಯ ಹಸ್ತ ನೀಡಲು ಮತ್ತು ಸಂವಹನ ತೊಂದರೆಗಳನ್ನು ಸರಾಗಗೊಳಿಸುವ ಪ್ರಯತ್ನದಲ್ಲಿರುವ ಏರ್‌ಟೆಲ್ ನೀವು ಒಳಾಂಗಣದಲ್ಲಿ ಸಿಲುಕಿಕೊಂಡಿದ್ದರೂ ಕೂಡ ನಿಮಗೆ ನೆಟ್‌ವರ್ಕ್ ಅನ್ನು ಒದಗಿಸುವ ನಿಟ್ಟಿನಲ್ಲಿ ತನ್ನ LTE-900 ತಂತ್ರಜ್ಞಾನದ ಸಹಾಯದೊಂದಿಗೆ ಪ್ರವಾಹ ಪೀಡಿತ ಪ್ರದೇಶಗಳಾದ್ಯಂತ ಉತ್ತಮ ನೆಟ್‌ವರ್ಕ್ ಸಂಪರ್ಕವನ್ನು ನಿರ್ವಹಿಸುವುದನ್ನು ಖಚಿತಪಡಿಸುತ್ತದೆ.

ಭಾರತದ ಅತೀ ದೊಡ್ಡ ಸಮಗ್ರ ದೂರಸಂಪರ್ಕ ಸೇವೆಯನ್ನು ಒದಗಿಸುವವರಾಗಿ ರಾಜ್ಯದಾದ್ಯಂತ 30 ಜಿಲ್ಲೆಗಳಲ್ಲಿ ಇರುವ ತನ್ನ ಗ್ರಾಹಕರಿಗೆ ಉಚಿತ ಕರೆ ಮತ್ತು ಡೇಟಾ ಪ್ರಯೋಜನಗಳನ್ನು ಕೂಡ ವಿಸ್ತರಣೆ ಮಾಡಿದೆ. ಪ್ರವಾಹದಿಂದ ಬಾಧಿತವಾಗಿರುವ ಪ್ರದೇಶಗಳಲ್ಲಿ ಪ್ರೀಪೇಯ್ಡ್ ಮತ್ತು ಪೋಸ್ಟ್-ಪೇಯ್ಡ್ ಗ್ರಾಹಕರು ಹೆಚ್ಚುವರಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಸಂಪರ್ಕದಲ್ಲಿ ಇರುವುದು

ಗ್ರಾಹಕರು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಡನೆ ಸಂಪರ್ಕದಲ್ಲಿ ಇರುವುದನ್ನು ಖಾತರಿಪಡಿಸಿಕೊಳ್ಳಲು, ಏರ್‌ಟೆಲ್ 100MB ಯಿಂದ 500GB ವರೆಗಿನ 3G /4G ಡೇಟಾದ ಜೊತೆಗೆ ಉಚಿತ ಸಂಭಾಷಣೆಯ ಸಮಯವನ್ನು ಘೋಷಣೆ ಮಾಡಿದೆ. ಈ ಪ್ರಯೋಜನಗಳ ಜೊತೆಗೆ, ಪ್ರೀಪೇಯ್ಡ್ ಬಳಕೆದಾರರು ರೀಚಾರ್ಜ್ ಮಾಡಲು ಹೆಣಗಾಡುವ ಅಗತ್ಯವಿಲ್ಲ. ಪೋಸ್ಟ್-ಪೇಯ್ಡ್ ಗ್ರಾಹಕರಿಗೆ ಬಿಲ್ ಪಾವತಿ ದಿನಾಂಕಗಳನ್ನು ವಿಸ್ತರಣೆ ಮಾಡಲಾಗಿದೆ.

"ಅಸ್ಸಾಂನ ಪ್ರಮುಖ ಮೊಬೈಲ್ ಆಪರೇಟರ್ ಮತ್ತು ಜವಾಬ್ದಾರಿಯುತ ಕಾರ್ಪೊರೇಟ್ ಪ್ರಜೆಯಾಗಿ, ಸರ್ಕಾರ ಮತ್ತು ಆಡಳಿತದ ಪ್ರಯತ್ನಗಳನ್ನು ಬೆಂಬಲಿಸಲು ಮತ್ತು ಈ ನೈಸರ್ಗಿಕ ವಿಪತ್ತಿನ ಸಮಯದಲ್ಲಿ ನಾಗರಿಕರು ನಿರಂತರ ಸಂಪರ್ಕದಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಈ ಪ್ರಯತ್ನವನ್ನು ಕೈಗೆತ್ತಿಕೊಂಡಿದ್ದೇವೆ" ಎಂದು ಭಾರತೀ ಏರ್‌ಟೆಲ್‌ನ ಈಶಾನ್ಯ ಮತ್ತು ಅಸ್ಸಾಂ ರಾಜ್ಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO) ಆಗಿರುವ ಶ್ರೀಯುತ ಸೋವನ್ ಮುಖರ್ಜಿ ಅವರು ಹೇಳುತ್ತಾರೆ.

ಏರ್‌ಟೆಲ್ -ಆಗತ್ಯದ ಸ್ನೇಹಿತ

ದೇಶವು ನೈಸರ್ಗಿಕ ವಿಪತ್ತುಗಳನ್ನು ಎದುರಿಸಿದ ಎಲ್ಲಾ ಸಂದರ್ಭಗಳಲ್ಲಿ ಏರ್‌ಟೆಲ್ ಯಾವಾಗಲೂ ಸಹಾಯ ಹಸ್ತವನ್ನು ಚಾಚಿದೆ. ಇತ್ತೀಚಿನ ದಿನಗಳಲ್ಲಿ ಫನಿ ಚಂಡಮಾರುತವು ಒಡಿಶಾದಲ್ಲಿ ವಿಪತ್ತಿನಿಂದಾಗಿ ಜೀವ ಮತ್ತು ಆಸ್ತಿಪಾಸ್ತಿಗಳನ್ನು ಹಾನಿಗೊಳಿಸಿದಾಗ, ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯ ಮಾಡಲು ಏರ್‌ಟೆಲ್ ಬಾಧಿತ ಪ್ರದೇಶಗಳಲ್ಲಿ ಯುದ್ಧ ಕೋಣೆಗಳನ್ನು ಸ್ಥಾಪಿಸಿತ್ತು.

ದೇಶದ ಪ್ರಮುಖ ಟೆಲಿಕಾಂ ಆಪರೇಟರ್ ಆಗಿ ಯಾವಾಗಲೂ ತನ್ನ ಚಂದಾದಾರರಿಗೆ ತಮ್ಮ ಪ್ರೀತಿಪಾತ್ರರೊಡನೆ ಅನೇಕ ಕಠಿಣ ಸಂದರ್ಭಗಳಲ್ಲಿ ಸಂಪರ್ಕದಲ್ಲಿ ಇರಲು ಏರ್‌ಟೆಲ್ ಸಹಾಯ ಮಾಡಿದೆ ಮತ್ತು ಸಾಧ್ಯವಾದಷ್ಟೂ ರೀತಿಯಲ್ಲಿ ಸಹಾಯ ಮಾಡುವುದನ್ನು ತನ್ನ ಸಾಮಾಜಿಕ ಜವಾಬ್ದಾರಿಯಾಗಿಸಿಕೊಂಡಿದೆ.

English summary
Bharti Airtel helping flood victims in Assam. Here is the details how it is helping.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X