ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಲಾ ಕ್ಯಾಬ್ ಚಾಲಕನಿಗೆ ಪ್ರಯಾಣಿಕರೇ 91 ಸಾವಿರ ನಾಮವಿಟ್ಟ ಸುದ್ದಿ ಕೇಳಿದ್ರಾ...

|
Google Oneindia Kannada News

Recommended Video

ಓಲಾ ಕ್ಯಾಬ್ ಚಾಲಕನಿಗೆ ಪ್ರಯಾಣಿಕರೇ 91 ಸಾವಿರ ನಾಮವಿಟ್ಟ ಸುದ್ದಿ ಕೇಳಿದ್ರಾ... | Oneindia Kannada

ಕೇರಳ ರಾಜ್ಯದ ಕೊಚ್ಚಿಯ ಓಲಾ ಕ್ಯಾಬ್ ಚಾಲಕ ರಾಜೀವ್ ಎಂಬುವರೊಬ್ಬರ ಕರುಣಾಜನಕ ಕಥೆಯಿದು. ಅಲ್ಲಿಂದ ಕರ್ನಾಟಕದ ಬೆಳಗಾವಿಗೆ ತಮ್ಮ ಕ್ಯಾಬ್ ನಲ್ಲಿ ಐದು ಮಂದಿಯನ್ನು ಕರೆತಂದಿದ್ದರು. ಇಲ್ಲಿ ಹೋಟೆಲ್ ನ ಹಣ ಪಾವತಿಸಲಿಲ್ಲ ಅನ್ನೋ ಕಾರಣಕ್ಕೆ ಆ ಐದು ಜನರನ್ನು ಬಂಧಿಸಿದ್ದಾರೆ. ಅಷ್ಟು ಹೊತ್ತಿಗೆ 3,200 ಕಿಲೋಮೀಟರ್ ಸುತ್ತಾಡಿಯಾಗಿತ್ತು. 91 ಸಾವಿರ ರುಪಾಯಿ ಕೊಡಬೇಕಿತ್ತು.

ಆದರೆ, ಆ ಹಣ ಇಲ್ಲದೆ ಬರಿಗೈಲಿ ರಾಜೀವ್ ವಾಪಸಾಗಿದ್ದಾರೆ. ಜುಲೈ ಒಂದನೇ ತಾರೀಕು ಶಹನ್ ಶಾ ಮತ್ತು ವಿನು, ದಂಪತಿ ಅಂತ ಹೇಳಿಕೊಂಡವರು, ಜತೆಗೆ ಶಹನ್ ಶಾರ ಸೋದರಿ ಹಾಗೂ ಆಕೆಯ ಇಬ್ಬರು ವಯಸ್ಕರ ಮಕ್ಕಳು ಪ್ರಯಾಣಿಕರು. ಓಲಾ ಅಪ್ಲಿಕೇಷನ್ ನಲ್ಲಿ ಬುಕ್ ಮಾಡಿದ್ದರು.

ಕದ್ದ ಫೋನಿನಲ್ಲಿ ಓಲಾ ಬುಕ್ ಮಾಡಿ, ಚಾಲಕನನ್ನೂ ದೋಚಿದ ಖದೀಮ!ಕದ್ದ ಫೋನಿನಲ್ಲಿ ಓಲಾ ಬುಕ್ ಮಾಡಿ, ಚಾಲಕನನ್ನೂ ದೋಚಿದ ಖದೀಮ!

ತುಂಬ ಸಭ್ಯ ಸಂಸಾರಸ್ಥರಂತಿದ್ದ ಅವರ ಬಗ್ಗೆ ಮೊದಲಿಗೆ ಅನುಮಾನ ಬಂದಿಲ್ಲ. ಅವರ ವಿರುದ್ಧ ನಾನಾ ನಗರಗಳಲ್ಲಿ ಪ್ರಕರಣಗಳು ಇವೆ ಎಂದು ಆ ನಂತರ ರಾಜೀವ್ ಗೆ ತಿಳಿದಿದೆ.

How 5 passengers cheated an Ola driver of Rs 91000

ಆ ಹನ್ನೊಂದು ದಿನಗಳಲ್ಲಿ ಕೊಚ್ಚಿಯಿಂದ ಕೊಯಮತ್ತೂರು, ಅಲ್ಲಿಂದ ಬೆಂಗಳೂರು ಮತ್ತು ಅಂತಿಮವಾಗಿ ಬೆಳಗಾವಿಗೆ ಹೋಗಿದ್ದಾರೆ. ಇಡೀ ಪ್ರಯಾಣದಲ್ಲಿ ಐದು ಮಂದಿ ಎಲ್ಲೂ ಹಣ ಪಾವತಿಸಿಲ್ಲ. ಯಾವುದೇ ಹೋಟೆಲ್ ಗೆ ಹೋದಾಗಲೂ ಆನ್ ಲೈನ್ ನಲ್ಲಿ ಪಾವತಿಸುವುದಾಗಿ ಹೇಳಿದ್ದಾರೆ. ಮೆರಿಯಟ್ ಹೋಟೆಲ್ ನಲ್ಲಿ ಎಪ್ಪತ್ತು ಸಾವಿರ ಬಿಲ್ ಆಗಿದೆ.

ಆದರೆ, ಆನ್ ಲೈನ್ ವ್ಯವಹಾರ ಪೂರ್ತಿ ಆಗಿ, ಹೋಟೆಲ್ ಖಾತೆಗೆ ಹಣ ಜಮೆ ಆದ ಮೇಲೇ ಹೊರಡುವುದಕ್ಕೆ ಬಿಡ್ತೀವಿ ಅಂದಿದ್ದಾರೆ. ಆಗ ಒಂದು ದಿನ ಹೆಚ್ಚುವರಿಯಾಗಿ ಹೋಟೆಲ್ ನಲ್ಲಿ ಉಳಿದುಕೊಳ್ಳುವಂತಾಗಿದೆ. ಅಲ್ಲಿ ಮೆರಿಯಟ್ ಹೋಟೆಲ್ ನಲ್ಲಿ ಉಳಿದುಕೊಂಡ ಈ ಕುಟುಂಬಕ್ಕೆ ಪಾವತಿಸಲು ಏನೂ ಉಳಿದಿಲ್ಲ. ಜತೆಗೆ ರಾಜೀವ್ ರ ಬಾಡಿಗೆ ಕೊಡಲು ಸಹ ಏನಿಲ್ಲ ಅಂದಾಗ ಪೊಲೀಸರಿಗೆ ಕರೆ ಮಾಡಿದ್ದಾರೆ.

ಅಂದಹಾಗೆ ಶಹನ್ ಶಾ ಮೇಲೆ ಅತ್ಯಾಚಾರ ಪ್ರಕರಣ ಹಾಗೂ ವಿನು ಅವರ ಪೋಷಕರು ನಾಪತ್ತೆ ಪ್ರಕರಣವೊಂದನ್ನು ಹೈದರಾಬಾದ್ ನಲ್ಲಿ ದಾಖಲಿಸಿದ್ದರು. ಕೊನೆಗೆ ತನ್ನ ಹಣ ಸಿಗದೆ ರಾಜೀವ್ ಬರಿಗೈಲಿ ಹಿಂತಿರುಗಿದ್ದಾರೆ.

ಬೆಂಗಳೂರಿನ ಕ್ಯಾಬ್ ಡ್ರೈವರ್ ಹೇಳಿಕೊಂಡ ಬದುಕು-ಬವಣೆಬೆಂಗಳೂರಿನ ಕ್ಯಾಬ್ ಡ್ರೈವರ್ ಹೇಳಿಕೊಂಡ ಬದುಕು-ಬವಣೆ

ಕೊಚ್ಚಿಯಲ್ಲಿ ಓಲಾದವರ ಬಳಿ ಹೋಗಿ, ತಮ್ಮ ದುಃಖ ಹೇಳಿಕೊಂಡಿದ್ದಾರೆ. ಆದರೆ ಯಾವುದೇ ನೆರವು ಸಿಕ್ಕಿಲ್ಲ. ಆ ನಂತರ ಸ್ಥಳೀಯ ಪೊಲೀಸರ ನೆರವು ಪಡೆದು ಓಲಾದವರೇ ತಮ್ಮ ಹಣವನ್ನು ಪಾವತಿಸಬೇಕು ಎಂದು ಒಪ್ಪಂದವಾಗಿದೆ. ಆದರೆ ಇನ್ನೂ ಹಣ ಪಾವತಿಸಿಲ್ಲ.

ಕ್ಯಾಬ್ ಸೇವೆ ಒದಗಿಸುವ ಅಪ್ಲಿಕೇಷನ್ ಆಧಾರಿತ ಕಂಪೆನಿಗಳು ಅದರ ಚಾಲಕರಿಗೆ ಯಾವುದೇ ರೀತಿಯಲ್ಲಿ ನೆರವಿಗೆ ನಿಲ್ಲುವುದಿಲ್ಲ. ಅದರಲ್ಲೂ ಪ್ರಾಣವೇ ಹೋದರೂ ಅದಕ್ಕೆ ಅವರು ಜವಾಬ್ದಾರರಲ್ಲ. ಈ ನಿಯ್ಮ ಬದಲಾಗಬೇಕು. ಅದರಲ್ಲೂ ಯಾವುದೇ ನಗರದ ಹೊರಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಬಹಳ ಕಷ್ಟವಾಗುತ್ತದೆ ಎಂದು ರಾಜೀವ್ ತಮ್ಮ ದುಃಖ ಹೇಳಿಕೊಂಡಿದ್ದಾರೆ.

English summary
Rajeev KV, a Kochi-based Ola driver, had a nightmare of a trip when the five people he had transported from Kochi to Belgaum in Karnataka were arrested by the police for non-payment of hotel dues. Rajeev had travelled 3,200 km and his passengers owed him Rs 91,000 for the trip but he had to return to Kochi empty-handed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X