ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಅಮೆರಿಕದ ನಡುವೆ 'ಹಾಟ್ ಲೈನ್' ನಿರ್ಮಾಣ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜ. 26 : ಭಾರತ ಮತ್ತು ಅಮೆರಿಕದ ನಡುವೆ ಹಾಟ್ ಲೈನ್ ನಿರ್ಮಾಣವಾಗುತ್ತಿರುವುದು ಪ್ರಪಂಚದ ದೃಷ್ಟಿಯಲ್ಲಿ ಮಹತ್ವ ಪಡೆದುಕೊಂಡಿದೆ. ರಕ್ಷಣಾ ಕ್ವೇತ್ರ ಮತ್ತು ಅಭಿವೃದ್ಧಿ ಕುರಿಯತಾಗಿ ಈ ಹಾಟ್ ಲೈನ್ ಪ್ರಮುಖವಾಗುತ್ತದೆ.

ಹಾಟ್ ಲೈನ್ ಎಂದರೇನು?
ಇದೊಂದು ಸಂಬಂಧಗಳನ್ನು ಗಟ್ಟಿಹೊಳಿಸುವ ಸಾಧನ. ರಾಷ್ಟ್ರ ರಾಷ್ಟ್ರಗಳ ನಡುವೆ ಬೇರೊಂದು ದೇಶ ಮಧ್ಯಸ್ಥಿಕೆ ಮಾಡಬೇಕಾಗಿರುವುದಿಲ್ಲ. ಯಾವುದೇ ಕ್ಷಣದಲ್ಲೂ ಎರಡೂ ದೇಶಗಳು ನೇರವಾಗಿ ವಿದೇಶಾಂಗ ಸಂಬಂಧಗಳ ಕುರಿತು ಚರ್ಚೆ ಮಾಡಬಹುದು. ಈ ರೀತಿಯ ಸಂಬಂಧಗಳ ಗಟ್ಟಿಗೊಳಿಸುವಿಕೆಯನ್ನು ಒಟ್ಟಾಗಿ ಹಾಟ್ ಲೈನ್ ಎಂದು ಕರೆಯಬಹುದು.(ಗಣರಾಜ್ಯೋತ್ಸವ ಪರೇಡ್ ನಲ್ಲಿ ಮಹಿಳಾ ಶಕ್ತಿ ಅನಾವರಣ)

india

ಹಾಟ್ ಲೈನ್ ರಾಷ್ಟ್ರಗಳು
ಯುಎಸ್ಎ-ರಷ್ಯಾ
ಯುಎಸ್ಎ-ಯುಕೆ
ರಷ್ಯಾ-ಚೀನಾ
ರಷ್ಯಾ-ಫ್ರಾನ್ಸ್
ರಷ್ಯಾ-ಯುಕೆ
ಯುಎಸ್ಎ-ಚೀನಾ
ಚೀನಾ-ಭಾರತ
ಚೀನಾ-ಜಪಾನ್
ಭಾರತ-ಅಮೆರಿಕ

ಹಾಟ್ ಲೈನ್ ಯಾಕೆ ಮುಖ್ಯವಾಗುತ್ತದೆ?
ಇದೊಂದು ಸುರಕ್ಷಿತ ಮತ್ತು ನೇರ ಸಂವಹನ ಸಾಧನ. ಎರಡು ದೇಶದ ನಾಯಕರು ಅಥವಾ ರಕ್ಷಣಾ ಅಧಿಕಾರಿಗಳು ಯಾವ ಸಮಯದಲ್ಲಿ ಬೇಕಾದರೂ ಮಾತನಾಡಬಹುದು.
ಭಾರತ ಮತ್ತು ಅಮೆರಿಕ ನಡುವಿನ ಹಾಟ್ ಲೈನ್ ನಿರ್ಮಾಣ ಎರಡೂ ದೇಶಗಳ ನಡುವಿನ ಬಾಂಧವ್ಯ ವೃದ್ಧಿಸಲಿದ್ದು ಹೊಸ ಸಂಚಲನಕ್ಕೆ ದಾರಿ ಮಾಡಿಕೊಡಲಿದೆ. ವ್ಯಾಪಾರ , ವಾಣಿಜ್ಯ, ಬಂಡವಾಳ ಹೂಡಿಕೆ ಈ ರೀತಿ ಪ್ರತಿಯೊಂದು ಕ್ಷೇತ್ರದ ಬೆಳವಣಿಗೆಗೆ ಇದು ನೆರವಾಗಲಿದೆ.

ಯಾವ ವಿಷಯಗಳು ಚರ್ಚಿತ?
ಮುಖ್ಯವಾಗಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಮಾತುಕತೆಗಳಿಗೆ ಹಾಟ್ ಲೈನ್ ದಾರಿ ಮಾಡಿಕೊಡುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಗುಪ್ತಚರದಳಗಳ ಮೂಲಕ ಎರಡು ದೇಶಗಳ ನಡುವೆ ಹಂಚಿಕೆಯಾದರೂ ಆಶ್ಚರ್ಯವಿಲ್ಲ.

ಒಟ್ಟಿನಲ್ಲಿ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿ ಮತ್ತು ಅಂತಾರಾಷ್ಟ್ರೀಯ ಶಾಂತಿ ಕಾಪಾಡಲು ಈ ಹಾಟ್ ಲೈನ್ ಒಂದು ಮಾರ್ಗವೆಂದೇ ಕರೆಯಬಹುದು.

English summary
The setting up of a hotline between the Prime Minister of India and the President of the United States of America is significant on several fronts. What makes this even more significant is that a hotline has been set up between the two national security advisors as well. To put it in simple words, the two leaders and the National Security Advisors can talk to each other at anytime and the calls will not go through several channels as was done.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X