ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ಪರ ಬೇಹುಗಾರಿಕೆ, ಬಿಎಸ್‌ಎಫ್‌ ಜವಾನ ಬಂಧನ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 19 : ಪಾಕಿಸ್ತಾನದ ಐಎಸ್‌ಐ ಪರವಾಗಿ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಿಎಸ್‌ಎಫ್‌ ಜವಾನನ್ನು ಬಂಧಿಸಲಾಗಿದೆ. ಗೂಢಚಾರಿಕೆ ನಡೆಸುವಂತೆ ಹನಿ ಟ್ರ್ಯಾಪ್ ಮಾಡಿ ಜವಾನನ ಮೇಲೆ ಒತ್ತಡ ಹಾಕಲಾಗಿತ್ತು.

ಬಂಧಿತನನ್ನು ಅಚ್ಯುತಾನಂದ ಮಿಶ್ರಾ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ಪಡೆ ಪೊಲೀಸರು ನೋಯ್ಡಾದಲ್ಲಿ ಬುಧವಾರ ಮಿಶ್ರಾನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಚ್ಯುತಾನಂದ ಮಿಶ್ರಾ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು.

ವಾಯುಸೇನೆಯ ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಗ್ರೂಪ್ ಕ್ಯಾಪ್ಟನ್ ಬಂಧನವಾಯುಸೇನೆಯ ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಗ್ರೂಪ್ ಕ್ಯಾಪ್ಟನ್ ಬಂಧನ

ಫೇಸ್‌ಬುಕ್ ಮೂಲಕ ಅಚ್ಯುತಾನಂದ ಪರಿಚಯ ಮಾಡಿಕೊಂಡಿದ್ದ ಐಎಸ್‌ಐಗೆ ಸೇರಿದ ಯುವತಿ ಬೇಹುಗಾರಿಗೆ ಮಾಡುವಂತೆ ಒತ್ತಡ ಹಾಕಿದ್ದಳು. ಅಚ್ಯುತಾನಂದ ಹನಿಟ್ರ್ಯಾಪ್‌ಗೆ ಒಳಗಾಗಿದ್ದ ಎಂದು ಎಟಿಎಸ್ ಮುಖ್ಯಸ್ಥ ಓ.ಪಿ.ಸಿಂಗ್ ಹೇಳಿದ್ದಾರೆ.

ಛೋಟಾ ಶಕೀಲ್ ಕತೆ ಮುಗೀತು, ಐಎಸ್ಐ ವಶದಲ್ಲಿ ಡಿ ಗ್ಯಾಂಗ್ ಆಸ್ತಿಛೋಟಾ ಶಕೀಲ್ ಕತೆ ಮುಗೀತು, ಐಎಸ್ಐ ವಶದಲ್ಲಿ ಡಿ ಗ್ಯಾಂಗ್ ಆಸ್ತಿ

Honey trapped by ISI, BSF jawan arrested for spying

ತನ್ನನ್ನು ವರದಿಗಾರ್ತಿ ಎಂದು ಹೇಳಿಕೊಂಡಿದ್ದ ಯುವತಿ ಜೊತೆ ಅಚ್ಯುತಾನಂದ 2016ರಿಂದ ಫೇಸ್‌ಬುಕ್ ಮೂಲಕ ಸಂಪರ್ಕದಲ್ಲಿದ್ದ. ಅಚ್ಯುತಾನಂದ ಇ-ಮೇಲ್, ಎಸ್‌ಎಂಎಸ್ ಮುಂತಾದವುಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಎನ್‌ಐಎ ಅಧಿಕಾರಿಗಳು ಅತ್ಯುತಾನಂದ ವಿಚಾರಣೆನಡೆಸುವ ಸಾಧ್ಯತೆ ಇದೆ.

English summary
The anti terrorist squad of the Uttar Pradesh police have arrested a BSF jawan Achyutanand Mishra on charges of spying for the ISI Pakistan. The constable Achyutanand Mishra was posted at the BSF Composite hospital in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X