ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನಿ ಟ್ರ್ಯಾಪ್ : ಭಾರತ ಸೇನೆಯ ಯೋಧನ ಬಂಧನ

|
Google Oneindia Kannada News

ನವದೆಹಲಿ, ಜನವರಿ 13: ಜೈಸಲ್ಮೇರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಸೇನಾ ಯೋಧರೊಬ್ಬರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರು. ಪಾಕಿಸ್ತಾನ ಮೂಲದ ಐಎಸ್ಐನವರ ಹನಿ ಟ್ರ್ಯಾಪ್ ಜಾಲಕ್ಕೆ ಈ ಯೋಧ ಸಿಲುಕಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಈ ಸುದ್ದಿಯನ್ನು ಖಚಿತಪಡಿಸಿರುವ ರಕ್ಷಣಾ ಇಲಾಖೆ ವಕ್ತಾರರಾದ ಕರ್ನಲ್ ಸಂಬೀತ್ ಘೋಶ್ ಅವರು, ತನಿಖಾ ಸಂಸ್ಥೆಗೆ ಆರ್ಮಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳೀದ್ದಾರೆ.

ಸಲಿಂಗಕಾಮಕ್ಕೆ ‌ಸೈನ್ಯದಲ್ಲಿ ಅವಕಾಶ ನೀಡುವುದಿಲ್ಲ: ಬಿಪಿನ್ ರಾವತ್ಸಲಿಂಗಕಾಮಕ್ಕೆ ‌ಸೈನ್ಯದಲ್ಲಿ ಅವಕಾಶ ನೀಡುವುದಿಲ್ಲ: ಬಿಪಿನ್ ರಾವತ್

ಬಂಧಿತ ಯೋಧನನ್ನು ಸೊಂಬೀರ್ ಎಂದು ಗುರುತಿಸಲಾಗಿದೆ. ಹರ್ಯಾಣದ ಮೂಲದವರು ಎಂದು ತಿಳಿದು ಬಂದಿದೆ.

Honey Trap Jaisalmer : Haryana Indian Army Jawan arrested

ಪಾಕಿಸ್ತಾನದ ಐಎಸ್ಐಗಳು ಫೇಸ್ ಬುಕ್ ನಲ್ಲಿ ಅನಿಕಾ ಛೋಪ್ರಾ ಹೆಸರಿನ ನಕಲಿ ಐಡಿ ಮೂಲಕ ಸೊಂಬೀರ್ ಜತೆ ಚಾಟ್ ಮಾಡುತ್ತಿದ್ದರು. ಯೋಧ ತನ್ನ ವೃತ್ತಿ ಕುರಿತ ಹಲವು ಮಾಹಿತಿಯನ್ನು ಹಂಚಿಕೊಂಡಿರುವುದು ಕಂಡು ಬಂದಿದೆ.

ಉದ್ಯಮಿಗಳನ್ನು ಮಂಚಕ್ಕೆ ಕರೆದು ಹನಿಟ್ರ್ಯಾಪ್ ಮಾಡುತ್ತಿದ್ದ ಯುವತಿ ಬಲೆಗೆ ಉದ್ಯಮಿಗಳನ್ನು ಮಂಚಕ್ಕೆ ಕರೆದು ಹನಿಟ್ರ್ಯಾಪ್ ಮಾಡುತ್ತಿದ್ದ ಯುವತಿ ಬಲೆಗೆ

ಪಾಕಿಸ್ತಾನದ ಗೂಢಚಾರಿಗಳು ಇನ್ನು ಯಾವ ಯಾವ ಯೋಧರನ್ನು ಈ ರೀತಿ ಜಾಲಕ್ಕೆ ಬೀಳಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬ್ರಹ್ಮೋಸ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರನ್ನು ಬಲೆಗೆ ಬೀಳಿಸಿಕೊಳ್ಳಲು ಪಾಕಿಸ್ತಾನದ ಐಎಸ್ಐ ಇದೇ ರೀತಿ ಮಾರ್ಗ ಅನುಸರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Indian Army jawan arrested by Rajasthan Police after he was allegedly found to be virtually honey trapped by Pakistan-based ISI operatives on social media and passing critical military information to them
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X