ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ಪೈಲಟ್‍‍ಗಳಿಗೆ ಸ್ಕಾಲರ್‍‍ಶಿಪ್, ಹೋಂಡಾದಿಂದ 'ಉಡಾನ್'

|
Google Oneindia Kannada News

ಬೆಂಗಳೂರು, ಜುಲೈ 19: ವಾಣಿಜ್ಯ ಪೈಲಟ್ ಆಗುವ ಯುವ ಮಹಿಳೆಯರ ಕನಸು ನನಸುಗೊಳಿಸಲು ಕನಸಿಗೆ ರೆಕ್ಕೆ ನೀಡುವ ಪ್ರಯತ್ನವಾಗಿ ಹೋಂಡಾ ಮೋಟರ್‍ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇಂದು ಸಪ್ನೋ ಕಿ ಉದಾನ್ ಎಂಬ ವಿಶಿಷ್ಟ ಯೋಜನೆಯನ್ನು ಘೋಷಿಸಿದೆ. ಇದು ಮಹಿಳೆಯ ಸಬಲೀಕರಣದ ನಿಟ್ಟಿನಲ್ಲಿ ಹೋಂಡಾದ ವಿಶಿಷ್ಟ ಸಿಎಸ್‍ಆರ್ ಉಪಕ್ರಮವಾಗಿದೆ. ಕರ್ನಾಟಕದ ಐವರು ಯುವ ಮಹಿಳೆಯರನ್ನು ಆಯ್ಕೆಮಾಡಲಾಗುತ್ತದೆ.

ಮಹಿಳೆಯರ ಸಬಲೀಕರಣವೆಂದರೆ ಇಡೀ ಪೀಳಿಗೆಯನ್ನು ಬಲಗೊಳಿಸುವುದು ಎಂಬ ತತ್ವದಲ್ಲಿ ಹೋಂಡಾ ದೃಢವಾದ ನಂಬಿಕೆ ಇರಿಸಿದ್ದು, ಈ ಸಿದ್ಧಾಂತದೊಂದಿಗೆ ಹೋಂಡಾ ಯುವ ಮಹಿಳೆಯರಿಗೆ ವಾಣಿಜ್ಯ ಪೈಲಟ್ ಶಿಕ್ಷಣ ಪಡೆಯಲು ಅಗತ್ಯ ನೆರವು ನೀಡುತ್ತಿದೆ. ವಾಣಿಜ್ಯ ಪೈಲಟ್ ಆಗುವ ಅವರ ಪಯಣ ಹೋಂಡಾದೊಂದಿಗೆ ಆರಂಭವಾಗುತ್ತದೆ.

ಯುದ್ಧ ವಿಮಾನದ ಮೊದಲ ಮಹಿಳಾ ಪೈಲೆಟ್ ಅವನಿ ಚತುರ್ವೇದಿ ಯುದ್ಧ ವಿಮಾನದ ಮೊದಲ ಮಹಿಳಾ ಪೈಲೆಟ್ ಅವನಿ ಚತುರ್ವೇದಿ

ಹೋಂಡಾದ ಅತಿದೊಡ್ಡ ಸಿಎಸ್‍ಆರ್ ಉಪಕ್ರಮವನ್ನು ಘೋಷಿಸಿದ ಹೋಂಡಾ ಮೋಟರ್ ಸೈಕಲ್ & ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಸಾಮಾನ್ಯ & ಕಾರ್ಪೊರೇಟ್ ವ್ಯವಹಾರಗಳ ವಿಭಾಗದ ನಿರ್ದೇಶ ಹರ್ಭಜನ್ ಸಿಂಗ್ ಅವರು, "ಜವಾಬ್ದಾರಿಯುತ ಕಾರ್ಪೊರೇಟ್ ಪ್ರಜೆಯಾಗಿ, ಹೋಂಡಾ 2ವ್ಹೀಲರ್ಸ್ ಸದಾ ನಮ್ಮ ಸಮಾಜದಲ್ಲಿ ಧನಾತ್ಮಕ ಬದಲಾವಣೆಯನ್ನು ತರಲು ಬದ್ಧವಾಗಿದೆ.

 Honda 2Wheelers India gives wings to young females in realising their dream

ಹೋಂಡಾ 2ನ ವ್ಹೀಲರ್ಸ್ ಇಂಡಿಯಾಗೆ ಗುಜರಾತ್ ಅತ್ಯಂತ ವಿಶೇಷ ರಾಜ್ಯವಾಗಿದ್ದು, ಏಕೆಂದರೆ ಇಲ್ಲಿ ನಾವು ಜತೆಯಾಗಿ ಪ್ರಗತಿ ಹಾಗೂ ಅಭಿವೃದ್ಧಿಯ ಸುಧೀರ್ಘ ಪಯಣವನ್ನು ಕಂಡುಕೊಂಡಿದ್ದೇವೆ. ನಮ್ಮ ಬದ್ಧತೆಯ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ಸಪ್ನೋ ಕಿ ಉದಾನ್ ಎಂಬ ಹೋಂಡಾದ ವಿಶಿಷ್ಟ ಸಿಎಸ್‍ಆರ್ ಉಪಕ್ರಮವನ್ನು ಘೋಷಿಸಲು ಅತೀವ ಸಂತಸವಾಗುತ್ತಿದೆ.

ಹಲವಾರು ಮಂದಿ ಪ್ರತಿಭಾವಂತ ಯುವ ಮಹಿಳೆಯರಿಗೆ ಹಣಕಾಸು ಬೆಂಬಲದ ಕೊರತೆಯಿಂದಾಗಿ ತಮ್ಮ ಕನಸುಗಳನ್ನು ನನಸುಗೊಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವಿಶಿಷ್ಟ ಉಪಕ್ರಮದಲ್ಲಿ, ವಾಣಿಜ್ಯ ಪೈಲಟ್ ಕೋರ್ಸ್ ಕಲಿಯುವ ಸಲುವಾಗಿ ಹೋಂಡಾ ಶೇಕಡ 100ರಷ್ಟು ವಿದ್ಯಾರ್ಥಿ ವೇತನವನ್ನು 20 ಅರ್ಹ ಯುವ ಮಹಿಳೆಯರಿಗೆ ನೀಡುತ್ತಿದೆ. ಈ ಯುವ ಮಹಿಳೆಯರು ಅತ್ಯಂತ ಗೌರವಾರ್ಹ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದು ಮಾತ್ರವಲ್ಲದೇ, ಲಕ್ಷಾಂತರ ಮಹಿಳೆಯರು ತಮ್ಮ ಕನಸುಗಳ ಶಕ್ತಿಯನ್ನು ನನಸುಗೊಳಿಸಿಕೊಳ್ಳಲು ಸ್ಫೂರ್ತಿ ನೀಡಲಿದೆ" ಎಂದು ಹೇಳಿದರು.

ಚಿಕ್ಕಮಗಳೂರಿನ ಬೆಡಗಿ ಮೇಘನಾ ಯುದ್ಧ ವಿಮಾನದ ಪೈಲಟ್ಚಿಕ್ಕಮಗಳೂರಿನ ಬೆಡಗಿ ಮೇಘನಾ ಯುದ್ಧ ವಿಮಾನದ ಪೈಲಟ್

ಭಾರತದಲ್ಲಿ, ಶೇಕಡ 12ರಷ್ಟು ವಾಣಿಜ್ಯ ಪೈಲಟ್‍ಗಳು ಮಾತ್ರ ಮಹಿಳೆಯರಾಗಿದ್ದಾರೆ. ಈ ಅತ್ಯಂತ ಗೌರವಾರ್ಹ ವೃತ್ತಿಯನ್ನು ಕೈಗೊಳ್ಳಲು ಅನುವಾಗುವಂತೆ ಯುವಮಹಿಳೆಯರನ್ನು ಉತ್ತೇಜಿಸುವ ಸಲುವಾಗಿ, ಹೋಂಡಾ ಇದೀಗ ತನ್ನ ಅತಿದೊಡ್ಡ ಸಿಎಸ್‍ಆರ್ ಯೋಜನೆ ಎನಿಸಿದ ಸಪ್ನೋ ಕಿ ಉದಾನ್ ಘೋಷಿಸಿದೆ. ಹೋಂಡಾ ಈ ಉಪಕ್ರಮಕ್ಕಾಗಿ ಗುಜರಾತ್, ಹರ್ಯಾಣ, ರಾಜಸ್ಥಾನ ಮತ್ತು ಕರ್ನಾಟಕದ ಎಲ್ಲ ಯುವ ಮಹಿಳೆಯರಿಂದ ಅರ್ಜಿ ಆಹ್ವಾನಿಸುತ್ತಿದೆ. ಯುವ ಮಹಿಳೆಯರು ತಮ್ಮ ವಾಣಿಜ್ಯ ಪೈಲಟ್ ವೃತ್ತಿಯನ್ನು ಕೈಗೊಳ್ಳಲು ಅನುವಾಗುವಂತೆ 20 ಮಹಿಳೆಯರಿಗೆ ಶೇಕಡ 100ರಷ್ಟು ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.

ವಾಣಿಜ್ಯ ಪೈಲಟ್ ಆಗುವ ತಮ್ಮ ಕನಸು ನನಸುಗೊಳಿಸಿಕೊಳ್ಳಲು ಅರ್ಹ ಮಹಿಳೆಯರಿಗೆ ನೆರವು ನೀಡುವ ಮೂಲಕ, ಹೋಂಡಾ ಈ ಜೀವಮಾನದ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಭಾರತದ ಪ್ರತಿಷ್ಠಿತ ವಾಯುಯಾನ ಶಾಲೆಗಳಲ್ಲಿ 18 ತಿಂಗಳ ಅವಧಿಯ ತರಬೇತಿಗೆ ಅವರ ಆಯ್ಕೆಯಿಂದ ಹಿಡಿದು ಅವರ ತರಬೇತಿಯ ಸಂಪೂರ್ಣ ವೆಚ್ಚವನ್ನು ಹೋಂಡಾ ಭರಿಸಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹೋಂಡಾ, ವಾಣಿಜ್ಯ ಪೈಲಟ್ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಕೂಡಾ ನೆರವಾಗಲಿದೆ.

ವಿಸ್ತøತವಾದ ಆಯ್ಕೆ ಪ್ರಕ್ರಿಯೆಯ ಮೂಲಕ ಅಂತಿಮವಾಗಿ 20 ಯುವ ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಪ್ರತಿಭೆ ಮತ್ತು ಆದಾಯದ ಮಟ್ಟವನ್ನು ಪರಿಗಣಿಸಲಾಗುತ್ತದೆ. ರಾಜ್ಯ ಶಿಕ್ಷಣ ಮಂಡಳಿಯ 12ನೇ ತರಗತಿ ಪರೀಕ್ಷೆಯಲ್ಲಿ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕವನ್ನು ಗಳಿಸಿದ ಯುವತಿಯರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇದಲ್ಲದೇ ಸಲ್ಲಿಕೆಯಾದ ಅರ್ಜಿಗಳನ್ನು ವಿವಿಧ ಮಾನದಂಡಗಳಡಿ ಪರಿಶೀಲನೆ ನಡೆಸಲಾಗುತ್ತದೆ. ಪ್ರಮುಖವಾಗಿ ಇದರಲ್ಲಿ ಸಹ ಪಠ್ಯ ಚಟುವಟಿಕೆಗಳಲ್ಲಿನ ಸಾಧನೆ, ಲಿಖಿತ ಪರೀಕ್ಷೆ, ಮಾನಸಿಕಮ್ಯಾಟ್ರಿಕ್ಸ್ ಪರೀಕ್ಷೆ ಸೇರಿರುತ್ತದೆ. ಅಂತಿಮವಾಗಿ 20 ಮಂದಿ ಅತ್ಯಂತ ಅರ್ಹ ಯುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ತಾಂತ್ರಿಕ ಮೌಲ್ಯಮಾಪನ ನಡೆಸಲಾಗುತ್ತದೆ. ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವ ಮೂಲಕ ಹೀಗೆ ಅರ್ಹತೆ ಪಡೆದ ಯುವತಿಯರು, ವಿಶೇಷ ತರಬೇತಿ ಕೋರ್ಸ್ ಪಡೆಯಲಿದ್ದಾರೆ. ಇದಕ್ಕೆ ಕೂಡಾ ಹೋಂಡಾ ನೆರವು ನೀಡಲಿದೆ.

English summary
Giving wings to young women’s dream of becoming a commercial pilot, Honda Motorcycle and Scooter India Pvt. Ltd. today announced project SAPNO KI UDAAN - Honda’s unique CSR initiative on women empowerment. Five girls from Karnataka will be selected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X