ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 1 ರಿಂದ ಮನೆ ಸಮೀಕ್ಷೆ: 31 ರೀತಿಯ ವಿವರ ನೀವು ನೀಡ್ಬೇಕು

|
Google Oneindia Kannada News

ನವದೆಹಲಿ, ಜನವರಿ 10: ಏಪ್ರಿಲ್ 1ರಿಂದ ಮನೆ ಸಮೀಕ್ಷೆ ನಡೆಯಲಿದ್ದು, 31 ರೀತಿಯ ವಿವರಗಳನ್ನು ನೀವು ನೀಡಬೇಕಾಗುತ್ತದೆ.

ಪೌರತ್ವ ಮಸೂದೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಬಗ್ಗೆ ದೇಶವ್ಯಾಪಿ ಹೋರಾಟ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಏಪ್ರಿಲ್ 1ರಿಂದ ದೇಶವ್ಯಾಪಿ ಮನೆ ಗಣತಿಗೆ ಗುರುವಾರ ಅಧಿಸೂಚನೆ ಹೊರಡಿಸಿದೆ.

ಕೋಲಾರ: ಸಿಎಎ-ಎನ್‌ಆರ್‌ಸಿ ಪರ ಮೆರವಣಿಗೆ ಮಾಡುತ್ತಿದವರಿಗೆ ಲಾಠಿ ಏಟುಕೋಲಾರ: ಸಿಎಎ-ಎನ್‌ಆರ್‌ಸಿ ಪರ ಮೆರವಣಿಗೆ ಮಾಡುತ್ತಿದವರಿಗೆ ಲಾಠಿ ಏಟು

ಈ ವೇಳೆ ಮನೆಗೆ ಆಗಮಿಸಲಿರುವ ಗಣತಿದಾರರು, ಮನೆಯ ಯಜಮಾನರ ಮೊಬೈಲ್ ಸೇರಿದಂತೆ ಒಟ್ಟು 31 ಬಗೆಯ ಮಾಹಿತಿಗಳನ್ನು ಕಲೆಹಾಕಲಿದ್ದಾರೆ.

Home Survey From April 1

ಏನೇನು ಮಾಹಿತಿ ಸಂಗ್ರಹ: ಮನೆ ಮಾಲಿಕನ ಮೊಬೈಲ್ ನಂಬರ್, ಮನೆಯಲ್ಲಿನ ಶೌಚಾಲಯ, ಸ್ನಾನ ಗೃಹ, ತ್ಯಾಜ್ಯ ನಿರ್ವಹಣೆ, ಟಿವಿ, ಮೊಬೈಲ್, ರೇಡಿಯೋ, ಲ್ಯಾಪ್‌ಟಾಪ್, ಕಂಪ್ಯೂಟರ್, ಸೈಕಲ್ , ವಾಹನಗಳ ನೋಂದಣಿ ಸಂಖ್ಯೆ, ಮನೆ ನಂಬರ್, ಮನೆಯಲ್ಲಿರುವ ಸದಸ್ಯರ ಸಂಖ್ಯೆ, ವಿವಾಹಿತರ ಸಂಖ್ಯೆ, ಜಾತಿ, ಕುಡಿಯುವ ನೀರಿನ ಮೂಲ, ಅಡುಗೆ ಮನೆ ನೆಲದ ವಿಧ, ಮನೆಯ ಸ್ಥಿತಿ, ವಿದ್ಯುತ್ ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತದೆ.

ಈ ಕುರಿತು ಅಧಿಸೂಚನೆ ಹೊರಡಿಸಿರುವ ರಿಜಿಸ್ಟ್ರಾರ್ ಜನರಲ್ ಮತ್ತು ಗಣತಿ ಆಯುಕ್ತರು, ಗಣತಿ ಅಧಿಕಾರಿಗಳು ಏಪ್ರಿಲ್ 1ರಿಂದ ಸೆಪ್ಟೆಂಬರ್ ವರೆಗೆ ದೇಶವ್ಯಾಪಿ ಮನೆಗಣತಿ ಮಾಡಲಿದ್ದಾರೆ.

2021ರಲ್ಲಿ ನಡೆಸಲು ಉದ್ದೇಶಿರುವ ಜನಗಣತಿಗೆ ಪೂರ್ವವಾಗಿ ಸರ್ಕಾರ ಈ ಮನೆ ಗಣತಿ ನಡೆಸುತ್ತಿದೆ. ಇದರಲ್ಲಿ ಮನೆಯ ಯಜಮಾನರ ಮೊಬೈಲ್ ನಂಬರ್ ಸೇರಿ ವಿವಿಧ ರೀತಿಯ ಮಾಹಿತಿ ಸಂಗ್ರಹಿಸಲಾಗುತ್ತದೆ. ಜನಗಣತಿ ಸಂಬಂಧ ಮಾಹಿತಿ ಹಂಚಿಕೊಳ್ಳಲು ಮಾತ್ರ ಮೊಬೈಲ್ ನಂಬರ್ ಉಪಯೋಗಿಸಿಕೊಳ್ಳಲಾಗುತ್ತಿದೆ. ಉಳಿದಂತೆ ಯಾವುದೇ ವಿಷಯಕ್ಕೆ ನಂಬರ್ ಬಳಸಿಕೊಳ್ಳಲಾಗುತ್ತದೆ.

English summary
The home survey will take place from April 1 and you will need to provide 31 types of details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X