ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ಮನೆಯಲ್ಲಿ ಮಕ್ಕಳಿದ್ದರೆ ನಿಮ್ಮ ಕ್ವಾರಂಟೈನ್ ಹೇಗಿರಬೇಕು?

|
Google Oneindia Kannada News

ನವದೆಹಲಿ, ಆಗಸ್ಟ್ 25: ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಶಂಕಿತ ಅಥವಾ ದೃಢಪಟ್ಟಿರುವ ಕೊರೊನಾ ಸೋಂಕಿತರಿಗೆ ಗೃಹ ಬಂಧನದಲ್ಲಿರಲು ತಿಳಿಸಲಾಗಿದೆ.

Recommended Video

DK Shivakumar, ಕನಕಪುರ ಬಂಡೆನು ಬಿಡಲಿಲ್ಲ ಕೊರೋನ! | Oneindia Kannada

ಕೆಲವು ಲಕ್ಷಣಗಳಿಲ್ಲದ ಕೊರೊನಾ ಸೋಂಕಿತರಿಗೂ ಕೂಡ ಮನೆಯಲ್ಲಿರಲು ಹೇಳಲಾಗಿದೆ. ಆದರೆ ಮನೆಯಲ್ಲಿ ಮಗು, ಚಿಕ್ಕಮಕ್ಕಳು ಇದ್ದರೆ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು, ಈ ಕುರಿತು ವೈದ್ಯರು ಏನೆನ್ನುತ್ತಾರೆ ನೋಡೋಣ..

ಭಾರತದಲ್ಲಿ ವರ್ಷಾಂತ್ಯಕ್ಕೆ ಕೊವಿಡ್ ಲಸಿಕೆ ಲಭ್ಯ: ಆರೋಗ್ಯ ಸಚಿವ ಮಾಹಿತಿಭಾರತದಲ್ಲಿ ವರ್ಷಾಂತ್ಯಕ್ಕೆ ಕೊವಿಡ್ ಲಸಿಕೆ ಲಭ್ಯ: ಆರೋಗ್ಯ ಸಚಿವ ಮಾಹಿತಿ

ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಅರಿವಿರುವುದಿಲ್ಲ, ತಮ್ಮ ಕಣ್ಣಿಗೆ ಕಂಡ ವಸ್ತುವನ್ನು ಕೈಗೆತ್ತಿಕೊಳ್ಳುತ್ತವೆ.

ಮನೆಯಲ್ಲಿ ಮಕ್ಕಳಿದ್ದಾಗ ನಿಮ್ಮ ಕ್ವಾರಂಟೈನ್ ಹೇಗಿರಬೇಕು

ಮನೆಯಲ್ಲಿ ಮಕ್ಕಳಿದ್ದಾಗ ನಿಮ್ಮ ಕ್ವಾರಂಟೈನ್ ಹೇಗಿರಬೇಕು

ದೊಡ್ಡವರಿಗೆ ಹರಡಿದಷ್ಟು ಬೇಗ ಮಕ್ಕಳಿಗೆ ಕೊರೊನಾ ಸೋಂಕು ತಗುಲುವುದಿಲ್ಲ ಎಂದು ವೈದ್ಯರ ಹೇಳಿದ್ದಾರೆ. ಮನೆಯಲ್ಲಿ ಮಕ್ಕಳಿದ್ದರೆ, ನೀವು ಕೊರೊನಾ ಸೋಂಕಿತರಾಗಿದ್ದರೆ, ಅಥವಾ ಯಾವುದೇ ಲಕ್ಷಣಗಳು ನಿಮ್ಮಲ್ಲಿದ್ದರೆ ನೀವು ನಿಮ್ಮ ರೂಂ ಬಿಟ್ಟು ಯಾವುದೇ ಕಾರಣಕ್ಕೂ ಹೊರಗೆ ಬರಬೇಡಿ, ನೀವು ಬಳಸಿದ ವಸ್ತುಗಳು ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಿ, ನಿಮ್ಮ ಒಂದು ಅಜಾಗರೂಕತೆಯಿಂದ ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲದು ಎಂದು ಡಾ. ನಿಖಿಲ್ ಮೋದಿ ತಿಳಿಸಿದ್ದಾರೆ.

ಮನೆ ಸಣ್ಣದಾಗಿದ್ದರೆ ಏನು ಮಾಡಬೇಕು

ಮನೆ ಸಣ್ಣದಾಗಿದ್ದರೆ ಏನು ಮಾಡಬೇಕು

ಒಂದೊಮ್ಮೆ ಮನೆ ಸಣ್ಣದಾಗಿದ್ದರೆ ಏನು ಮಾಡಬೇಕು ಎಂಬುದೇ ದೊಡ್ಡ ತಲೆನೋವಿನ ಸಂಗತಿಯಾಗಿದೆ. ಒಂದೊಮ್ಮೆ ಇಂತಹ ಪರಿಸ್ಥಿತಿ ಬಂದರೆ ಮಕ್ಕಳನ್ನು ಬೇರೆಡೆಗೆ ಕೊಂಡೊಯ್ಯಬೇಕು ಅಥವಾ ರೋಗಿಗೆ ಬೇರೊಂದು ಕಡೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಮಾಸ್ಕ್ ಬಳಸಿ, ಕೈವಸುಗಳನ್ನು ಬಳಕೆ ಮಾಡಿ, ಮೂಗು ಹಾಗೂ ಬಾಯಿಯನ್ನೂ ಸಂಪೂರ್ಣವಾಗಿ ಮಾಸ್ಕ್‌ನಿಂದ ಮುಚ್ಚಿರಬೇಕು.

ಕೊರೊನಾ ಸೋಂಕಿತ ತಾಯಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು

ಕೊರೊನಾ ಸೋಂಕಿತ ತಾಯಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು

ಮಗುವನ್ನು ಮುಟ್ಟುವ ಮುನ್ನ ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು, ಮಾಸ್ಕ್ ಧರಿಸಲೇಬೇಕು, 1 ಸಾವಿರ ತಾಯಂದಿರಲ್ಲಿ ಕೇವಲ ಶೇ.13 ರಷ್ಟು ಮಗುವಿಗೆ ಸೋಂಕು ವರ್ಗಾವಣೆಯಾಗಿದೆ. ಇದೂ ಕೂಡ ಮಾಸ್ಕ್ ಧರಿಸದೆ ಇರುವುದು, ಸ್ವಚ್ಛತೆ ಕಾಪಾಡಿಕೊಳ್ಳದಿರುವುದರಿಂದಲೇ ಆಗಿದೆ. ವೈರಸ್ ತಾಯಿಯ ಎದೆಹಾಲಿನ ಮೂಲಕ ಬರುವುದಿಲ್ಲ.

ಕುಟುಂಬದವರು ಅನುಸರಿಸಬೇಕಾದ ಕ್ರಮ

ಕುಟುಂಬದವರು ಅನುಸರಿಸಬೇಕಾದ ಕ್ರಮ

ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಪ್ರಕಾರ , ಕುಟುಂಬದ ಕೆಲವೇ ಕೆಲವು ಮಂದಿ ಮಾತ್ರ ಕೊರೊನಾ ಸೋಂಕಿತನನ್ನು ನೋಡಿಕೊಳ್ಳಬೇಕು.

-ಕೈಯಿಂದ ಕಣ್ಣು, ಕಿವಿ, ಮೂಗು, ಬಾಯಿಯನ್ನು ಮುಟ್ಟುವುದನ್ನು ನಿಲ್ಲಿಸಿ

-ಕೈಗವಸುಗಳನ್ನು ತೆಗೆದು ಬಳಿಕ ಕೈಯನ್ನು ತೊಳೆದುಕೊಳ್ಳಿ-ಮನೆಗೆ ಹೊರಗಿನವರು ಯಾರೂ ಬರುವಂತಿಲ್ಲ-ಗೃಹ ಬಂಧನದಲ್ಲಿದ್ದರೆ 14 ದಿನಗಳ ಕಾಲ ಯಾರನ್ನೂ ಭೇಟಿಯಾಗುವಂತಿಲ್ಲ, ಯಾರ ಬಳಿಯೂ ಮಾತನಾಡುವಂತಿಲ್ಲ. ರೋಗಿ ಇರುವ ಕೋಣೆಯನ್ನು ಸ್ವಚ್ಛವಾಗಿಡಬೇಕು.

English summary
As per the Health Ministry guidelines, people who come in contact with suspect or confirmed case of COVID-19 should be in home quarantine. Meanwhile, some asymptomatic people are also being advised to quarantine themselves at home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X