ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

43 ದೇಶಗಳ ಪ್ರವಾಸಿಗರಿಗೆ ಇ ವೀಸಾ ಸೌಲಭ್ಯ

By Mahesh
|
Google Oneindia Kannada News

ನವದೆಹಲಿ, ನ. 27: ಯುಎಸ್, ಜರ್ಮನಿ, ಇಸ್ರೇಲ್, ಆಸ್ಟ್ರೇಲಿಯಾದ ಸೇರಿದಂತೆ 43 ರಾಷ್ಟ್ರಗಳ ಪ್ರವಾಸಿಗರಿಗೆ ಗುರುವಾರದಿಂದ ವೀಸಾ ಆನ್ ಅರೈವಲ್ ಸೌಲಭ್ಯ ಸಿಗಲಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ.ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಪ್ರವಾಸೋದ್ಯಮ ಸಚಿವ ಡಾ.ಮಹೇಶ್ ಶರ್ಮಾ ದೆಹಲಿಯಲ್ಲಿ ಇ ವೀಸಾ ಸೌಲಭ್ಯವನ್ನು ಲೋಕಾರ್ಪಣೆ ಮಾಡಿದ್ದಾರೆ.

ಎಲೆಕ್ಟ್ರಾನಿಕ್ ಟ್ರಾವೆಲ್ ಅಥರೈಜೈಷನ್(ಈಟಿಎ) ಸೌಲಭ್ಯದ ಮೂಲಕ ಪ್ರವಾಸಿ ವೀಸಾವನ್ನು 43 ರಾಷ್ಟ್ರಗಳ ನಾಗರಿಕರು ಪಡೆದುಕೊಳ್ಳಬಹುದು. ಮೊದಲ ಹಂತದಲ್ಲಿ ಭಾರತದ 9 ವಿಮಾನ ನಿಲ್ದಾಣಗಳಲ್ಲಿ ಇ ವೀಸಾ ಸೌಲಭ್ಯ ಲಭ್ಯವಿರುತ್ತದೆ. ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಹೈದರಾಬಾದ್, ಕೊಚ್ಚಿ, ತಿರುವನಂತಪುರ ಹಾಗೂ ಗೋವಾದಲ್ಲಿ ಸುಮಾರು 76 ಪ್ರತ್ಯೇಕ ಕೌಂಟರ್ ಗಳನ್ನು ತೆರೆಯಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ? : ವಿದೇಶಿ ಪ್ರವಾಸಿಗರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ, ತಮ್ಮ ಭಾವಚಿತ್ರ, ಪಾಸ್ ಪೋರ್ಟ್ ವಿವರಗಳನ್ನು ದಾಖಲಿಸಬೇಕು, ಶುಲ್ಕವನ್ನು ಆನ್ ಲೈನ್ ಮೂಲಕವೇ ಪಾವತಿಸಬಹುದು. ಅರ್ಜಿ ಸಲ್ಲಿಸಿದ 72 ಗಂಟೆಗಳ ನಂತರ ಈಟಿಎನಿಂದ ಇಮೇಲ್ ಕಳಿಸಲಾಗುತ್ತದೆ.

ಏನೇನು ಅನುಮತಿ ಸಿಗಲಿದೆ: ಪ್ರವಾಸಿ ವೀಸಾ ಮೂಲಕ ದೇಶದ ಪ್ರವಾಸಿ ತಾಣಗಳ ವೀಕ್ಷಣೆ, ಗೆಳೆಯರು, ಆಪ್ತ ಬಳಗವನ್ನು ಭೇಟಿ ಮಾಡುವುದು, ಕಡಿಮೆ ಅವಧಿಯ ವೈದ್ಯಕೀಯ ನೆರವು ಪಡೆದುಕೊಳ್ಳುವುದು, ಸಣ್ಣಪುಟ್ಟ ವ್ಯಾಪಾರ ವಹಿವಾಟಿಗೂ ಅನುಮತಿ ಸಿಗಲಿದೆ.

Home Minister Rajnath Singh launches e-visa facility for 43 countries
ಯಾವ ಯಾವ ದೇಶಕ್ಕೆ ಅನುಮತಿ: ಮೊದಲ ಹಂತದಲ್ಲಿ ಇಸ್ರೇಲ್, ಪ್ಯಾಲೆಸ್ಟೈನ್, ಜರ್ಮನಿ, ಯುಎಸ್, ಆಸ್ಟ್ರೇಲಿಯಾ ಸೇರಿದಂತೆ 40ಕ್ಕೂ ಅಧಿಕ ದೇಶದ ನಾಗರಿಕರಿಗೆ ಇವೀಸಾ ಸೌಲಭ್ಯ ಸಿಗಲಿದೆ. [40 ದೇಶದ ಪ್ರವಾಸಿಗರಿಗೆ ಇ-ವೀಸಾ ಭಾಗ್ಯ]

ಮುಂದಿನ ಹಂತದ ಯೋಜನೆ: ಮುಂದಿನ ಹಂತದಲ್ಲಿ ಇ ವೀಸಾ ಸೌಲಭ್ಯವನ್ನು ಮೆಕ್ಸಿಕೋ, ಕೀನ್ಯಾ, ಫಿಜಿ ಮುಂತಾದ ದೇಶಗಳಿಗೆ ನೀಡಲಾಗುವುದು ಎಂದು ಗೃಹ ಇಲಾಖೆ ಹೇಳೀದೆ. ಪ್ರವಾಸೋದ್ಯಮ, ಶಿಕ್ಷಣ, ಸಾಂಸ್ಕೃತಿಕ ವಿನಿಯಮ ಹೆಚ್ಚಳಕ್ಕೆ ಈ ಸೌಲಭ್ಯ ಅನುಕೂಲಕರ ಎಂದು ಇಂಡಿಯನ್ ಅಸೋಸಿಯೇಷನ್ ಆಫ್ ಟೂರ್ ಅಪರೇಟರ್ಸ್ ಅಧ್ಯಕ್ಷ ಸುಭಾಷ್ ಗೋಯಲ್ ಪ್ರತಿಕ್ರಿಯಿಸಿದ್ದಾರೆ. ಕಳೆದ ಹತ್ತು ತಿಂಗಳಿನಲ್ಲಿ ಭಾರತ ಸುಮಾರು 51.79 ಲಕ್ಷಕ್ಕೂ ಅಧಿಕ ವಿದೇಶಿ ಪ್ರವಾಸಿಗರನ್ನು ಕಂಡಿದೆ.

ವೀಸಾ ಆನ್ ಅರೈವಲ್ : ಈಗಾಗಲೇ ದಕ್ಷಿಣ ಕೊರಿಯಾ, ಜಪಾನ್, ಫಿನ್ ಲ್ಯಾಂಡ್, ಸಿಂಗಪುರ, ನ್ಯೂಜಿಲೆಂಡ್, ಇಂಡೋನೇಷಿಯಾ, ಮ್ಯಾನ್ಮಾರ್, ವಿಯೆಟ್ನಾಂ ಹಾಗೂ ಲಾವೋಸ್ ದೇಶಗಳಿಗೆ ವೀಸಾ ಆನ್ ಅರೈವಲ್(VoA) ಸೌಲಭ್ಯ ಸಿಕ್ಕಿದೆ. ಈಗ ಇದರ ಜೊತೆಗೆ ಇ ವೀಸಾ ಸೌಲಭ್ಯವೂ ಲಭಿಸಲಿದೆ.

ಇ ವೀಸಾ ವಂಚಿತ ರಾಷ್ಟ್ರಗಳು: ಪಾಕಿಸ್ತಾನ, ಸೂಡನ್, ಅಫ್ಘಾನಿಸ್ತಾನ, ಇರಾನ್, ಇರಾಕ್, ನೈಜೀರಿಯಾ, ಶ್ರೀಲಂಕಾ, ಸೋಮಾಲಿಯಾ ದೇಶಗಳಿಗೆ ಸದ್ಯಕ್ಕೆ ಇ ವೀಸಾ ಸೌಲಭ್ಯ ನೀಡಲಾಗಿಲ್ಲ.

English summary
Visitors from over 40 countries, including Germany, the US, Israel and Palestine, will soon be able to avail the much-awaited electronic visa facility which is launched on November 27 by Home Minister Rajnath Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X