• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರ ಸಂಪುಟ: ಹೋಳಿ ಸಡಗರ ಆರಂಭ, ನಟ ವರುಣ್ ಗೆ ಆಲಿಯಾ ಸಿಹಿಮುತ್ತು

|

ಸೋಮವಾರದ ಸುದ್ದಿ ಸಂತೆಯಲ್ಲಿ ಅರ್ಧದಿನದಷ್ಟು ಭರ್ಜರಿ ವ್ಯಾಪಾರ ನಡೆಸಿದ್ದು (ಹೆಚ್ಚಿನ ಮಟ್ಟಕ್ಕೆ ಓದುಗರನ್ನು ಸೆಳೆದಿದ್ದು) ಸುದೀಪ್- ದರ್ಶನ್ ವಿವಾದ. ಸೋಮವಾರದ ಬಹುಪಾಲು ಅವಧಿಯಲ್ಲಿ ಆ ಸುದ್ದಿಗೇ ಹೆಚ್ಚಿನ ಓದುಗರು ಸ್ಪಂದಿಸಿದ್ದರು. ಆದರೆ, ಸಂಜೆ ಹೊತ್ತಿಗೆ ಕೊಂಚ ಪರಿಸ್ಥಿತಿ ಬದಲಾಯಿತು.

ಬೆಂಗಳೂರು ಟೆಸ್ಟ್ ಪಂದ್ಯದ ದಿನದಾಟದ ವರದಿ, ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ವರುಣನ ಆಗಮನದಂಥ ಸುದ್ದಿಗಳು ಕೊಂಚ ಹೆಚ್ಚು ಬಿತ್ತರಗೊಂಡವು.

ಆದರೆ, ಅದರ ಬೆನ್ನಿಗೇ ಬಂದ ಹಿರಿಯ ನಟಿ ಪದ್ಮಾ ಕುಮುಟ ಅವರ ನಿಧನದ ಸುದ್ದಿ ರಾತ್ರಿ ಓದುಗರನ್ನು ಕೊಂಚ ಡಿಸ್ಟರ್ಬ್ ಮಾಡಿದ್ದು ಸುಳ್ಳಲ್ಲ. ಆ ಸುದ್ದಿಗೆ ಈಗಲೂ ಮಹತ್ವವಿದೆ.

ಹೀಗೆ, ಸುದ್ದಿಗಳ ಸುಳಿಗಳಲ್ಲಿ ನೋಡುನೋಡುತ್ತಿರುವಂತೆ ರೊಯ್ಯನೆ ತಿರುಗಿ ಕಾಣದಂತೆ ಮುಳುಗಿ ಹೋದ ಕೆಲವಾರು ಸುದ್ದಿಗಳನ್ನು ಹೆಕ್ಕಿ ತಂದು ಮಾಹಿತಿಗಾಗಿ ಓದುಗರ ಮುಂದಿಡುವ ನಮ್ಮ ವಿನಮ್ರ ಪ್ರಯತ್ನ ಮುಂದುವರಿದಿದೆ. ಅಂಥ ಕೆಲವು ಸುದ್ದಿಗಳ ಮಾಹಿತಿ ಇಲ್ಲಿ ನಿಮಗಾಗಿ ಚಿತ್ರ ಸಹಿತ.

ಬರ್ಸಾನದಲ್ಲಿ ವಿಶೇಷ ಆಚರಣೆ

ಬರ್ಸಾನದಲ್ಲಿ ವಿಶೇಷ ಆಚರಣೆ

ಇದೇ ಭಾನುವಾರ ದೇಶಾದ್ಯಂತ ಹೋಳಿ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಉತ್ತರ ಭಾರತದ ಹಲವೆಡೆ ಈಗಾಗಲೇ ಹೋಳಿ ಹಬ್ಬದ ಆಚರಣೆಗಳು ಆರಂಭವಾಗಿದೆ. ಮಥುರಾದ ಬರ್ಸಾನಾ ಪ್ರಾಂತ್ಯದಲ್ಲಿನ ಹೋಳಿ ವಿಶೇಷ. ಇಲ್ಲಿನ ವಿಚಿತ್ರ ಆಚರಣೆಯಲ್ಲಿ ಮಹಿಳೆಯರು ಕೃಷ್ಣನ ವೇಷ ತೊಟ್ಟ ಬಾಲಕನನ್ನು (ನಂದಗೋಪಾಲ) ಕೋಲಿನ ಹೊಡೆಯುಂತೆ ನಟಿಸಿ ಸಂಭ್ರಮಿಸುತ್ತಾರೆ. ಇಂಥದ್ದೊಂದು ಆಚರಣೆ ಸೋಮವಾರವೂ ನಡೆದಿತ್ತು.

ಹೋಲಿಯ ಮುಗುಳ್ನಗೆ

ಹೋಲಿಯ ಮುಗುಳ್ನಗೆ

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಚಿತ್ರವೊಂದರ ಚಿತ್ರೀಕರಣದಲ್ಲಿ ಕಂಡಿದ್ದು ಹೀಗೆ. ಹೋಳಿ ಹಬ್ಬದ ಸಡಗರವನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ನಟಿ, ಸಪ್ತ ವರ್ಣಗಳೊಂದಿಗೆ ಮಿಂಚಿದರು.

ವಾರಣಾಸಿಯಲ್ಲಿ ಜನಸಾಗರ

ವಾರಣಾಸಿಯಲ್ಲಿ ಜನಸಾಗರ

ಇದು ವಾರಣಾಸಿಯ ಚಿತ್ರ. ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಅಲ್ಲಿ ಪ್ರಧಾನಿ ಮೋದಿಯವರು ರೋಡ್ ಶೋ ನಡೆಸಿದ್ದರ ಪರಿಣಾಮವಿದು.

ವಿಜಯ್ ಹಜಾರೆ ಟ್ರೋಫಿ ಫೈನಲ್

ವಿಜಯ್ ಹಜಾರೆ ಟ್ರೋಫಿ ಫೈನಲ್

ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ಈ ಬಾರಿಯ ವಿಜಯ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಜಾರ್ಖಂಡ್ ಹಾಗೂ ಜಮ್ಮು-ಕಾಶ್ಮೀರ ತಂಡಗಳು ಮುಖಾಮುಖಿಯಾದವು. ಜಾರ್ಖಂಡ್ ತಂಡ ಈ ಪಂದ್ಯದಲ್ಲಿ ಜಯ ಸಾಧಿಸಿತು. ಪಂದ್ಯದ ನಂತರ, ಜಾರ್ಖಂಡ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಜಮ್ಮು-ಕಾಶ್ಮೀರ ತಂಡದ ನಾಯಕ ಪರ್ವೇಜ್ ರಸೂಲ್ ಕಾಣಿಸಿಕೊಂಡಿದ್ದು ಹೀಗೆ.

ಧವನ್ ಗೆ ಆಲಿಯಾ ಸಿಹಿ ಮುತ್ತು

ಧವನ್ ಗೆ ಆಲಿಯಾ ಸಿಹಿ ಮುತ್ತು

ಬಾಲಿವುಡ್ ನ ಚುರುಕು ನಟಿಯೆಂದೇ ಖ್ಯಾತರಾಗಿರುವ ಆಲಿಯಾ ಭಟ್ ಅವರ ಹೊಸ ಚಿತ್ರ ಬದ್ರೀನಾಥ್ ಕೀ ದುಲ್ಹೇನಿಯಾ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ. ಮುಂಬೈನಲ್ಲಿ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ತಮ್ಮೊಂದಿಗೆ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ವರುಣ್ ಧವನ್ ಗೆ ಆಲಿಯಾ ಮುತ್ತಿಟ್ಟು ಸಂಭ್ರಮಿಸಿದ್ದು ಹೀಗೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The festival of Holi will be celebrated across the nation. But, in Mathura and some parts of North India, holy celebration has already started. And in Mumbai on Monday actress Alia Bhat kisses co-actor Varun Dhawan, on the promotional dais of their new movie Badrinath ki Dulhenia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more