ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆ ನೋಟುಗಳನ್ನು ಇಟ್ಟುಕೊಂಡವರಿಗೆ ಕಾದಿದೆ ಗಂಡಾಂತರ

ನಿಷೇಧವಾದ ನೋಟುಗಳನ್ನು ಇಟ್ಟುಕೊಂಡಿದ್ದೀರಾ? ಇಟ್ಟುಕೊಂಡಿದ್ದರೆ ನಿಮಗೆ ಶಿಕ್ಷೆಯಾಗಲಿದೆ. ಬುಧವಾರ ಕೇಂದ್ರ ಸರಕಾರ ಹೊಸ ಕಾನೂನನ್ನು ಜಾರಿಗೆ ತಂದಿದ್ದು ಅದರ ಪ್ರಕಾರ ಹಳೆಯ ನೋಟುಗಳನ್ನೂ ಇಟ್ಟುಕೊಳ್ಳುವಂತಿಲ್ಲ.

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮಾರ್ಚ್ 2: ನಿಷೇಧವಾದ ನೋಟುಗಳನ್ನು ಇಟ್ಟುಕೊಂಡಿದ್ದೀರಾ? ಇಟ್ಟುಕೊಂಡಿದ್ದರೆ ನಿಮಗೆ ಶಿಕ್ಷೆಯಾಗಲಿದೆ.
ಬುಧವಾರ ಕೇಂದ್ರ ಸರಕಾರ ಹೊಸ ಕಾನೂನನ್ನು ಜಾರಿಗೆ ತಂದಿದ್ದು ಅದರ ಪ್ರಕಾರ ಹಳೆಯ ನೋಟುಗಳನ್ನೂ ಇಟ್ಟುಕೊಳ್ಳುವಂತಿಲ್ಲ.

ಬ್ಯಾನ್ ಆದ 10ಕ್ಕಿಂತ ಹೆಚ್ಚು ನೋಟುಗಳನ್ನು ಹೊಂದಿದವರಿಗೆ ಕನಿಷ್ಟ10 ಸಾವಿರ ದಂಡ ವಿಧಿಸಲು ಈ ಕಾನೂನಿನಲ್ಲಿ ಅವಕಾಶವಿದೆ. ಇನ್ನು ಅಪನಗದೀಕರಣದ ವೇಳೆ ಸುಳ್ಳು ಮಾಹಿತಿ ನೀಡಿದ್ದರೆ ಅವರಿಗೆ ಕನಿಷ್ಠ 50,000 ದಂಡ ವಿಧಿಸಲಾಗುತ್ತದೆ. [ಅಪನಗದೀಕರಣದ ನಡುವೆಯೂ ಶೇ. 7ರ ಗಡಿ ತಲುಪಿದ ಜಿಡಿಪಿ]

Holding old notes illegal: Here is what the new law states

ಬ್ಯಾಂಕ್ ನೋಟ್ಸ್ (ಸೆಶೇಷನ್ ಆಫ್ ಲಯೇಬಿಲಿಟಿ) ಕಾಯ್ದೆ -2017 ನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು ಅದರ ಪ್ರಕಾರ ಒಬ್ಬ ವ್ಯಕ್ತಿ ವೈಯುಕ್ತಿವಾಗಿ 10 ಕ್ಕಿಂತ ಹೆಚ್ಚಿನ ಹಳೆ ನೋಟುಗಳನ್ನು ಇಟ್ಟುಕೊಳ್ಳುವಂತಿಲ್ಲ. ಇನ್ನು ಸಂಶೋಧನೆ ಮತ್ತು ಅಧ್ಯಯನದ ಉದ್ದೇಶಕ್ಕೂ 25ಕ್ಕಿಂತ ಹೆಚ್ಚು ನೋಟುಗಳನ್ನು ಇಟ್ಟುಕೊಳ್ಳುವಂತಿಲ್ಲ. ಒಂದೊಮ್ಮೆ ಇಟ್ಟುಕೊಂಡರೆ 10,000 ಅಥವಾ ಸೀಜ್ ಮಾಡಿದ ಹಣದ ಐದು ಪಟ್ಟು, ಇದರಲ್ಲಿ ಯಾವುದು ಹೆಚ್ಚೋ ಆ ದಂಡವನ್ನು ವಿಧಿಸಲಾಗುತ್ತದೆ. [ದೆಹಲಿ: ಬ್ಯಾಂಕ್ ಎಟಿಎಂನಿಂದ ಬಂದ ನಕಲಿ ನೋಟಿನಲ್ಲಿ ತಪ್ಪುಗಳೆಷ್ಟು?]

ಈ ಹೊಸ ಕಾನೂನಿನ ಪ್ರಕಾರ ಹಳೆ ನೋಟುಗಳನ್ನು ವರ್ಗಾವಣೆ ಮಾಡುವುದು, ಇಟ್ಟುಕೊಳ್ಳುವುದು, ತೆಗೆದುಕೊಳ್ಳುವುದು ಅಪರಾಧವಾಗಿರುತ್ತದೆ. ಇಂಥಹ ಪ್ರಕರಣಗಳು ನಡೆದಾಗ ಪ್ರಥಮ ದರ್ಜೆ ನ್ಯಾಯಾಲಯಗಳು ದಂಡ ವಿಧಿಸುವ ಅಧಿಕಾರ ಹೊಂದಿರುತ್ತವೆ ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.

English summary
The government on Wednesday notified a law which said that holding of more than 10 demonetized notes would be punishable with a minimum fine of Rs 10,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X