ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಚುನಾವಣೆ: ಸ್ಕ್ರೀನಿಂಗ್ ಸಮಿತಿಗೆ ಎಚ್‌ಕೆ ಪಾಟೀಲ್ ಅಧ್ಯಕ್ಷ

|
Google Oneindia Kannada News

ನವದೆಹಲಿ, ಮಾರ್ಚ್ 2: ಕೇರಳ ವಿಧಾನಸಭೆ ಚುನಾವಣೆ 2021ಕ್ಕಾಗಿ ಕಾಂಗ್ರೆಸ್‌ನ ಸ್ಕ್ರೀನಿಂಗ್ ಸಮಿತಿಯ ಅಧ್ಯಕ್ಷರನ್ನಾಗಿ ಕರ್ನಾಟಕದ ಮಾಜಿ ಸಚಿವ ಎಚ್‌ಕೆ ಪಾಟೀಲ್ ಅವರನ್ನು ನೇಮಿಸಲಾಗಿದೆ. ಎಚ್‌ಕೆ ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಈ ಆದೇಶವು ತಕ್ಷಣದಿಂದಲೇ ಜಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ದುಡ್ಡಿಲ್ಲಾ ಶ್ರೀಧರ್ ಬಾಬು ಮತ್ತು ಪ್ರಣತಿ ಶಿಂಧೆ ಅವರು ಸಮಿತಿಯ ಸದಸ್ಯರಾಗಿರಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಉಸ್ತುವಾರಿ ತಾರೀಖ್ ಅನ್ವರ್, ಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್, ಸಿಎಲ್‌ಪಿ ಮುಖಂಡ ರಮೇಶ್ ಚೆನ್ನಿತ್ತಲ, ಕೇರಳ ಪಿಸಿಸಿಯ ಚುನಾವಣಾ ನಿರ್ವಹಣೆ ಮತ್ತು ಕಾರ್ಯತಂತ್ರ ಸಮಿತಿ ಅಧ್ಯಕ್ಷ ಊಮ್ಮನ್ ಚಾಂಡಿ ಹಾಗೂ ಕೇರಳದ ಎಐಸಿಸಿ ಉಸ್ತುವಾರಿಗಳು ಇದರ ಪದನಿಮಿತ್ತ ಸದಸ್ಯರಾಗಿರಲಿದ್ದಾರೆ.

 ಕೇರಳ ಹೈಕೋರ್ಟ್‌ನ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ಬಿಜೆಪಿ ಸೇರ್ಪಡೆ ಕೇರಳ ಹೈಕೋರ್ಟ್‌ನ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ಬಿಜೆಪಿ ಸೇರ್ಪಡೆ

ಹಾಗೆಯೇ ತಮಿಳುನಾಡು ಮತ್ತು ಪುದುಚೆರಿ ಚುನಾವಣೆಗೆ ಸ್ಕ್ರೀನಿಂಗ್ ಸಮಿತಿಯನ್ನು ಕೂಡ ರಚನೆ ಮಾಡಿದ್ದು, ಇದಕ್ಕೆ ಕೇಂದ್ರದ ಮಾಜಿ ಸಚಿವ ದಿಗ್ವಿಜಯ್ ಸಿಂಗ್ ಅಧ್ಯಕ್ಷರಾಗಿದ್ದಾರೆ. ಫ್ರಾನ್ಸಿಸ್ಕೋ ಸರ್ದಿನ್ಹಾ ಮತ್ತು ಕೊಡಿಕ್ಕುನಿಲ್ ಸುರೇಶ್ ಸದಸ್ಯರಾಗಿದ್ದಾರೆ.

HK Patil Appointed As Chairman Of Congress Screening Committee For Kerala Assembly Election

ಎಐಸಿಸಿ ಉಸ್ತುವಾರಿ ದಿನೇಶ್ ಗುಂಡೂರಾವ್, ಪಿಸಿಸಿ ಅಧ್ಯಕ್ಷ ಕೆಎಸ್ ಅಳಗಿರಿ, ಎವಿ ಸುಬ್ರಮಣಿಯನ್, ಕೆಆರ್ ರಾಮಸ್ವಾಮಿ, ವಿ. ನಾರಾಯಣಸ್ವಾಮಿ ಇದರ ಪದನಿಮಿತ್ತ ಸದಸ್ಯರಾಗಿದ್ದಾರೆ.

English summary
Ex minister HK Patil appointed as the chairman of Congress Screening Committee for Kerala Assembly election. Digvijaya Singh appointed for Tamil Nadu and Puducherry assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X