• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಮತಾಂತರಕ್ಕೆ ಯತ್ನಿಸದಿದ್ದಕ್ಕೆ ಅಲ್ಪಸಂಖ್ಯಾತರಾಗುತ್ತಿರುವ ಹಿಂದೂಗಳು'

|

ನವದೆಹಲಿ, ಫೆಬ್ರವರಿ 13: ಹಿಂದೂಗಳು ಇತರ ಧರ್ಮೀಯರನ್ನು ತಮ್ಮ ಧರ್ಮಕ್ಕೆ ಮತಾಂತರಗೊಳಿಸಲು ಯಾವತ್ತೂ ಪ್ರಯತ್ನಿಸುವುದಿಲ್ಲ. ಹಾಗಾಗಿಯೇ, ಹಿಂದೂಗಳು ಕ್ರಮೇಣ ಅಲ್ಪಸಂಖ್ಯಾತರಾಗುತ್ತಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಕಿರಣ್ ರಿಜಿಜು ಟ್ವಿಟರ್ ನಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಇತರೆ ಧರ್ಮೀಯರು ಹಿಂದೂಗಳನ್ನು ತಮ್ಮ ಮತಕ್ಕೆ ಮತಾಂತರಗೊಳಿಸುವ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.[ಮುಸ್ಲಿಮರೂ ಸೇರಿ ಭಾರತದಲ್ಲಿ ಹುಟ್ಟಿದವರೆಲ್ಲ ಹಿಂದೂಗಳು: ಭಾಗವತ್]

ಬಿಜೆಪಿಯು ಅರುಣಾಚಲ ಪ್ರದೇಶವನ್ನು ಹಿಂದೂ ರಾಜ್ಯವನ್ನಾಗಿ ಪರಿವರ್ತಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಮಾಡಿದ್ದ ಆರೋಪಗಳಿಗೆ ಪ್ರತ್ಯುತ್ತರವಾಗಿ ಕಿರಣ್ ಅವರು ಹೀಗೆ ಹೇಳಿದ್ದಾರೆ.[ಸಾಯಿಬಾಬಾನಿಗೆ 28 ಲಕ್ಷ ಮೌಲ್ಯದ ಕಿರೀಟ ಅರ್ಪಿಸಿದ ಇಟಲಿ ಭಕ್ತೆ]

ಅಲ್ಪಸಂಖ್ಯಾತರು ಹೀಗೆ ಪ್ರವರ್ಧಮಾನಕ್ಕೆ ಬರುತ್ತಿರುವುದು ಕೇವಲ ಭಾರತದಲ್ಲಿ ಮಾತ್ರ. ಬೇರೆ ದೇಶಗಳಲ್ಲಿ ಹೀಗಾಗುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

English summary
Minister for state of Home Affairs in India, Kiren Rijiju on Monday said that the Hindu population is decreasing for the reason that Hindus don’t ask other communities to convert to Hinduism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X