ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹಿಂದಿ-ಚೀನೀ ಭಾಯಿ ಭಾಯಿ': ಭಾರತ, ಚೀನಾಕ್ಕೆ ದಲೈಲಾಮ ಕಿವಿಮಾತು

ಭಾರತ-ಚೀನಾ ದೇಶಗಳು ಪರಸ್ಪರ ಹಿಂದಿ-ಚೀನಿ ಭಾಯಿ ಭಾಯಿ ಎಂಬ ರೀತಿಯಲ್ಲಿ ಇರಬೇಕು. ಎರಡೂ ದೇಶಗಳಿಗೆ ಕಿವಿಮಾತು ಹೇಳಿದ ಟಿಬೆಟ್ ನ ಧರ್ಮಗುರು ದಲೈಲಾಮ.

|
Google Oneindia Kannada News

ನವದೆಹಲಿ, ಆಗಸ್ಟ್ 9: ಭಾರತ ಹಾಗೂ ಚೀನಾ ನಡುವೆ ಎದ್ದಿರುವ ಗಡಿ ವಿವಾದದ ಹಿನ್ನೆಲೆಯಲ್ಲಿ ಎರಡೂ ದೇಶಗಳಿಗೆ ಟಿಬೆಟ್ ನ ಬೌದ್ಧಗುರು ಹಾಗೂ ಭಾರತ ಸರ್ಕಾರದ ಬೆಂಬಲ ಹೊಂದಿರುವ ದಲೈಲಾಮಾ ಅವರು ಕಿವಿಮಾತು ಹೇಳಿದ್ದಾರೆ.

ಭಾರತದ ಮಾರುಕಟ್ಟೆ ನಿಯಂತ್ರಿಸುವ ಚೀನಾದ 8 ವಸ್ತುಗಳ ಬಹಿಷ್ಕಾರ ಸಾಧ್ಯ!ಭಾರತದ ಮಾರುಕಟ್ಟೆ ನಿಯಂತ್ರಿಸುವ ಚೀನಾದ 8 ವಸ್ತುಗಳ ಬಹಿಷ್ಕಾರ ಸಾಧ್ಯ!

ಎರಡೂ ದೇಶಗಳು ಭಾತೃತ್ವದಿಂದ ಇರಬೇಕೆಂದು ಸಲಹೆ ನೀಡಿರುವ ಅವರು, 'ಹಿಂದಿ- ಚೀನಿ ಭಾಯಿ ಭಾಯಿ' ಎಂದು ತಿಳಿಸಿದ್ದಾರೆ. ಅಲ್ಲದೆ, ತಮ್ಮ ನಡುವಿನ ಸಮಸ್ಯೆಗಳಿಗೆ ಪರಿಹಾಕ ಕಂಡುಕೊಳ್ಳಲು ಇದೊಂದೇ ದಾರಿ ಎಂದೂ ಅದು ಹೇಳಿದೆ.

'Hindi-Chini- Bhai Bhai' only way: Dalai Lama on Indo-China crisis

ಭಾರತ ಹಾಗೂ ಚೀನಾ ರಾಷ್ಟ್ರಗಳು ಅಕ್ಕಪಕ್ಕದ ದೇಶಗಳಾಗಿರುವುದರಿಂದ ಎರಡೂ ರಾಷ್ಟ್ರಗಳು ಸಹಬಾಳ್ವೆಗೆ ಒತ್ತು ಕೊಡಬೇಕಿದೆ. ಹಾಗಾಗಿ, 'ಹಿಂದಿ-ಚೀನೀ ಭಾಯಿ ಭಾಯಿ' ಎಂಬ ವಾಕ್ಯವನ್ನು ಇಬ್ಬರೂ ಪಾಲಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಚೀನಾದಲ್ಲಿ 7ರಷ್ಟು ತೀವ್ರತೆಯ ಪ್ರಬಲ ಭೂಕಂಪಚೀನಾದಲ್ಲಿ 7ರಷ್ಟು ತೀವ್ರತೆಯ ಪ್ರಬಲ ಭೂಕಂಪ

ಇದೇ ವೇಳೆ, ಚೀನಾದಲ್ಲಿರುವ ಆಡಳಿತ ವ್ಯವಸ್ಥೆಯ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಅವರು, ''ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಕೂಲಕರ ವಾತಾವರಣವಿದೆ. ಹಾಗಾಗಿ, ನಾನು ಅಲ್ಲಿ (ಭಾರತ) ಹೆಚ್ಚು ನನ್ನ ಭಾವನೆಗಳನ್ನು ವ್ಯಕ್ತಪಡಿಸಬಲ್ಲೆ. ಇಂಥ ಸ್ವಾತಂತ್ರ್ಯ ಇಲ್ಲದ ದೇಶಗಳನ್ನು ನಾನು ಇಷ್ಟಪಡುವುದಿಲ್ಲ'' ಎಂದಿದ್ದಾರೆ.

ಚೀನಾದ ಸಿಟ್ಟಿಗೆ ಎಷ್ಟೊಂದು ಕಾರಣ, ಪಾಕಿಸ್ತಾನದಂತೆ ಗತಿಗೆಟ್ಟಿಲ್ಲ ಭಾರತಚೀನಾದ ಸಿಟ್ಟಿಗೆ ಎಷ್ಟೊಂದು ಕಾರಣ, ಪಾಕಿಸ್ತಾನದಂತೆ ಗತಿಗೆಟ್ಟಿಲ್ಲ ಭಾರತ

ಆದರೆ, ದಲೈಲಾಮಾ ಅವರ ಈ ಕಿವಿಮಾತನ್ನು ಚೀನಾ ಸರ್ಕಾರ ಸಾರಾಸಗಟಾಗಿ ತಳ್ಳಿಹಾಕುವುದು ನಿರೀಕ್ಷಿತ ಎಂದೆನಿಸಿದೆ. ಇದೇ ವರ್ಷದ ಆರಂಭದಲ್ಲಿ ದಲೈಲಾಮಾ ಅವರು ಅರುಣಾಚಲಕ್ಕೆ ಭೇಟಿ ನೀಡಿದ್ದರು. ಆದರೆ, ಅವರ ಆ ಭೇಟಿಯನ್ನು ತಡೆಯಬೇಕೆಂದು ಚೀನಾ ಸರ್ಕಾರ, ಭಾರತ ಸರ್ಕಾರವನ್ನು ಆಗ್ರಹಿಸಿತ್ತು.

ಆದರೆ, ಚೀನಾದ ಆಗ್ರಹಕ್ಕೆ ಭಾರತ ಸೊಪ್ಪು ಹಾಕಿರಲಿಲ್ಲ. ಇದು ಚೀನಾವು ಭಾರತದ ಮೇಲೆ ಮುನಿಸಿಕೊಳ್ಳಲು ಮತ್ತೊಂದು ಕಾರಣ. ಹಾಗಾಗಿ, ಚೀನಾದ ಶತ್ರವಾದ ದಲೈಲಾಮಾ ಅವರ ಹಿತನುಡಿಗಳು ಚೀನಾಕ್ಕೆ ಬಿರುನುಡಿಗಳಂತೆ ಕೇಳಿಸಿದರೆ ಅಚ್ಚರಿಯೇನಿಲ್ಲ.

English summary
Tibetan spiritual leader the 14th Dalai Lama on Wednesday urged India and China to maintain peace, saying that both nations are like brothers and have to live side by side.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X