ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ಹಿಮಾಚಲ ಪ್ರದೇಶದಲ್ಲಿ ಮಳೆಯ ರೌದ್ರಾವತಾರ

|
Google Oneindia Kannada News

Recommended Video

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ: 13 ಮಂದಿ ಸಾವು | Oneindia Kannada

ಕುಲ್ಲು, ಸೆಪ್ಟೆಂಬರ್ 25: ಹಿಮಾಚಲ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಲೇ ಇರುವ ಮಳೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಎಡಬಿಡದೆ ಸುರಿಯುತ್ತಲೇ ಇರುವ ಮಳೆಯಿಂದಾಗಿ ಇಲ್ಲಿನ ಬಿಯಾಸ್ ಮತ್ತು ರಾವಿ ನದಿಗಳು ತುಂಬಿ ಹರಿಯುತ್ತವೆ. ಇದರಿಂದಾಗಿ ಉಂಟಾದ ಪ್ರವಾಹಕ್ಕೆ ಇದುವರೆಗೂ 13 ಜನ ಮೃತರಾಗಿದ್ದಾರೆ.

ಗುಡ್ಡಗಾಡು ಪ್ರದೇಶವಾದ ಹಿಮಾಚಲ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಭೂಕುಸಿತದಿಂದ ಪ್ರಾಣಹಾನಿ ತಪ್ಪಿಸಲು ಮುನ್ನೆಚ್ಚರಿಕೆ ದೃಷ್ಟಿಯಿಂದ ಮುನ್ನೂರೈವತ್ತಕ್ಕೂ ಹೆಚ್ಚು ರಸ್ತೆಗಳನ್ನು ಮುಚ್ಚಲಾಗಿದೆ.

ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಪಂಜಾಬ್ ನಲ್ಲಿ ರಜಾಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಪಂಜಾಬ್ ನಲ್ಲಿ ರಜಾ

ಹಿಮಾಚಲ ಪ್ರದೇಶವು ಪ್ರಮುಖ ಪ್ರವಾಸೀ ತಾಣವಾಗಿರುವುದರಿಂದ, ಪ್ರವಾಸಕ್ಕೆಂದು ಅಲ್ಲಿಗೆ ತೆರಳಿರುವವರು ಪರಿತಪಿಸುವಂತಾಗಿದೆ. ನದಿ ತೀರ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಸೆಪ್ಟೆಂಬರ್ ಅಂತ್ಯದವರೆಗೂ ಈ ಗುಡ್ಡಗಾಡು ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿಯಲಿದೆ.

Array

ನೀರಲ್ಲಿ ತೇಲಿಹೋದ ಗಜಗರ್ಭದ ಬಸ್!

ಬಸ್ಸೊಂದು ನಿಂತಿರುವಂತೆಯೇ ಭೂಕುಸಿತವುಂಟಾಗಿ, ಗಜಗರ್ಭದ ಬಸ್ಸು ಪ್ರಚಂಡ ಪ್ರವಾಹದಲ್ಲಿ ತೇಲಿಹೋಗುತ್ತಿರುವ ದೃಶ್ಯ ನೋಡಿದರೆ ಹಿಮಾಚಲ ಪ್ರದೇಶ ಪ್ರವಾಹದ ರೌದ್ರಾವತಾರ ಅರ್ಥವಾಗುತ್ತದೆ. ಈ ವಿಡಿಯೋವಂತೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಬೆಂಗಳೂರಲ್ಲಿ 3 ದಿನಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆಬೆಂಗಳೂರಲ್ಲಿ 3 ದಿನಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆ

Array

ತುಂಬಿ ಹರಿದ ಬಿಯಾಸ್ ನದಿ

ಕುಲ್ಲು ಮತ್ತು ಮನಾಲಿ ನಡುವಲ್ಲಿರುವ ಬಿಯಾಸ್(ಪಂಜಾಬಿ ಭಾಷೆಯಲ್ಲಿ ಬಿಯಾಸ್ ನದಿಯನ್ನು ವ್ಯಾಸ್ ನದಿ ಎಂದೂ ಕರೆಯಲಾಗುತ್ತದೆ) ನದಿ ತುಂಬಿ ತುಳುಕುತ್ತಿದ್ದು, ನದಿ ತೀರದಲ್ಲಿ ವಾಸವಿದ್ದ ಜನರನ್ನು ಮುನ್ನೆಚ್ಚರಿಕೆಯ ದೃಷ್ಟಿಯಿಂದ ಈಗಾಗಲೇ ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ: 13 ಮಂದಿ ಸಾವುಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ: 13 ಮಂದಿ ಸಾವು

ನೀರಿನಲ್ಲಿ ದೋಣಿಯಲ್ಲ, ಲಾರಿ!

ದೂರದಿಂದ ನೋಡಿದರೆ ಅಲೆಗಳ ಮೇಲೆ ದೋಣಿಯೊಂದು ಚಲಿಸುತ್ತಿರುವಂತೆ ಕಾಣುವ ದೃಶ್ಯ! ಹತ್ತಿರ ಬಂದು ನೋಡಿದರೆ ಪ್ರಳಯದ ರೌದ್ರಾವತಾರಕ್ಕೆ ದೋಣಿಯಂತೆ, ದೊಡ್ಡ ಲಾರಿಯೆ ನೀರಿನಲ್ಲಿ ತೇಲಿ ಹೋಗುತ್ತಿದೆ. ಈ ದೃಶ್ಯವೂ ವೈರಲ್ ಆಗಿದೆ.

ಕಣ್ಣೆದುರಲ್ಲೇ ಭೂಕುಸಿತ!

ಕಣ್ಣೆದುರಲ್ಲೇ ಭೂಕುಸಿತದಿಂದ ರಸ್ತೆಯೆಲ್ಲ ಪ್ರಪಾತವಾಗುತ್ತಿರುವ ದ್ರಶ್ಯ ಕಂಡುಬರುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವವರದು ಸಾಹಸದ ಬದುಕೇ. ಆದರೆ ಪ್ರಾಣ ಹಾನಿ ತಪ್ಪಿಸುವ ಸಲುವಾಗಿ ಈಗಾಗಲೇ ಇಲ್ಲಿನ ಮುನ್ನೂರೈವತ್ತಕ್ಕೂ ಹೆಚ್ಚು ರಸ್ತೆಗಳನ್ನು ಮುಚ್ಚಲಾಗಿದೆ.

English summary
As the heavy rainfall continued to remain disastrous on Monday in Himachal Pradesh, 13 people were died. Here are few viral videos of the rain. IMD predicts rain may continue till September end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X