• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲ ಪ್ರದೇಶ: ಇಂದು ಮಂಡಿಯ 'ಮಹಾಗರ್ಜನ ರ್‍ಯಾಲಿ' ಉದ್ದೇಶಿಸಿ ಮೋದಿ ಭಾಷಣ

|
Google Oneindia Kannada News

ಮಂಡಿ ಸೆಪ್ಟೆಂಬರ್ 24: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹಿಮಾಚಲ ಪ್ರದೇಶದ ಮಂಡಿಯಲ್ಲಿ 'ಮಹಾಗರ್ಜನ ರ್‍ಯಾಲಿ'ಯಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರ ತವರು ಜಿಲ್ಲೆ ಮಂಡಿಯಿಂದ ಪ್ರಧಾನಿ ಮೋದಿಯವರ ಈ ರ್‍ಯಾಲಿ ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ ಚುನಾವಣಾ ಸಿದ್ಧತೆಯಾಗಿದೆ. ಇಂದು ಮಂಡಿಯ ಪದ್ದಲ್ ಮೈದಾನದಲ್ಲಿ ಬಿಜೆವೈಎಂ ಯುವ ವಿಜಯ್ ಸಂಕಲ್ಪ್ ರ್‍ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.

ಇದರ ಪ್ರಯುಕ್ತ ಪ್ರಧಾನಿ ಮೋದಿ ಅವರು ಮಧ್ಯರಾತ್ರಿ 12.30 ರ ಸುಮಾರಿಗೆ ಮಂಡಿಯಲ್ಲಿರುವ ಕಂಗಣಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಅಲ್ಲಿಂದ ಅವರು ಪದ್ದಲ್ ಮೈದಾನಕ್ಕೆ ತೆರಳುತ್ತಾರೆ. ಅಲ್ಲಿ ಅವರು ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 1:30 ರಿಂದ 2:00 ರವರೆಗೆ 20 ನಿಮಿಷಗಳ ಭಾಷಣ ಮಾಡಿ ನಂತರ ದೆಹಲಿಗೆ ಹಿಂತಿರುಗುತ್ತಾರೆ.

ಪ್ರಧಾನಿ ಮೋದಿಯವರ ಆಗಮನದಿಂದಾಗಿ ಈ ರ್‍ಯಾಲಿಗೆ ಬಿಗಿ ಪೊಲೀಸ್ ಭದ್ರತೆಯನ್ನು ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳ ನಡೆಯದಿರಲು 1800 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನೂ ರ್‍ಯಾಲಿಗೆ ಸುಮಾರು 1600 ಮತ್ತು 200 ಪೊಲೀಸ್ ಗೃಹ ರಕ್ಷಕ ಸಿಬ್ಬಂದಿ ಭದ್ರತೆ ಒದಗಿಸಲಾಗಿದೆ. ಸಂಚಾರ ದಟ್ಟಣೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಂಡಿ ಶಾಲಿನಿ ಅಗ್ನಿಹೋತ್ರಿ ತಿಳಿಸಿದ್ದಾರೆ.

ಇದಲ್ಲದೇ ಸಭೆ ನಡೆಯುವ ಸ್ಥಳದ ಸುತ್ತ 150 ಹೊಸ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರ್‍ಯಾಲಿ ಸ್ಥಳವನ್ನು ಡ್ರೋನ್ ಕ್ಯಾಮೆರಾಗಳ ಮೂಲಕವೂ ಮೇಲ್ವಿಚಾರಣೆ ಮಾಡಲಾಗುತ್ತಿದೆ.

English summary
Prime Minister Narendra Modi will participate in the 'Mahagarjan Rally' in Mandi, Himachal Pradesh today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X