• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿಮಾಚಲ ಪ್ರದೇಶದಲ್ಲಿ ಜೂನ್ 30ರ ತನಕ ಲಾಕ್ ಡೌನ್ ವಿಸ್ತರಣೆ

|

ಶಿಮ್ಲಾ, ಮೇ 25 : ಕೊರೊನಾ ಹರಡದಂತೆ ತಡೆಯಲು ಹಿಮಾಚಲ ಪ್ರದೇಶದಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಜೂನ್ 30ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಆದೇಶ ಹೊರಡಿಸಿದ್ದಾರೆ.

   ಅಯ್ಯೋ ಪಾಪ ಪೊಲೀಸರಿಗೆ ಹೊಡೆದವರ ಕಥೆ ಏನಾಗಿದೆ ನೋಡಿ..! | Madhya Pradesh

   ಬಿಜೆಪಿ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಿ ಸೋಮವಾರ ಆದೇಶ ಹೊರಡಿಸಲಾಗಿದೆ. ಮೇ 18ರಿಂದ 31ರ ತನಕ 4ನೇ ಹಂತದ ಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ. ಜೂನ್ 1ರಿಂದ 5ನೇ ಹಂತದ ಲಾಕ್ ಡೌನ್ ಜಾರಿಗೆ ಬರಲಿದೆ.

   ಲಾಕ್ ಡೌನ್; ಬೆಂಗಳೂರು ನಗರಕ್ಕೆ ಬರುವವರ ಗಮನಕ್ಕೆ ಲಾಕ್ ಡೌನ್; ಬೆಂಗಳೂರು ನಗರಕ್ಕೆ ಬರುವವರ ಗಮನಕ್ಕೆ

   "ರಾಜ್ಯದ ಎಲ್ಲಾ 12 ಜಿಲ್ಲೆಗಳಲ್ಲಿ ಲಾಕ್ ಡೌನ್ ಜೂನ್ 30ರ ತನಕ ಜಾರಿಯಲ್ಲಿರುತ್ತದೆ" ಎಂದು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದಾರೆ. ಇದುವರೆಗೂ ರಾಜ್ಯದಲ್ಲಿ 203 ಕೊರೊನಾ ಪ್ರಕರಣ ದಾಖಲಾಗಿದೆ.

   ಮಾರ್ಗಸೂಚಿ ಉಲ್ಲಂಘನೆ; ಗೃಹ ಇಲಾಖೆಯಿಂದ ರಾಜ್ಯಗಳಿಗೆ ಪತ್ರ ಮಾರ್ಗಸೂಚಿ ಉಲ್ಲಂಘನೆ; ಗೃಹ ಇಲಾಖೆಯಿಂದ ರಾಜ್ಯಗಳಿಗೆ ಪತ್ರ

   ಹಿಮಾಚಲ ಪ್ರದೇಶದಲ್ಲಿ ಇದುವರೆಗೂ 63 ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಮೂವರು ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. 4 ನೇ ಹಂತದ ಲಾಕ್‌ ಡೌನ್‌ನ ಇನ್ನೂ 6 ದಿನ ಬಾಕಿ ಇರುವಾಗಲೇ ಒಂದು ತಿಂಗಳ ಕಾಲ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

   ಶ್ರಮಿಕ್ ರೈಲು ಸಂಚಾರ; ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿ ಶ್ರಮಿಕ್ ರೈಲು ಸಂಚಾರ; ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿ

   ಮೇ 31ರ ಬಳಿಕ ದೇಶದಲ್ಲಿ ಲಾಕ್ ಡೌನ್ ಯಾವ ಸ್ವರೂಪದಲ್ಲಿ ಇರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಹಿಮಾಚಲ ಪ್ರದೇಶ ಸರ್ಕಾರ ಮಾತ್ರ ಲಾಕ್ ಡೌನ್ ವಿಸ್ತರಣೆ ಮಾಡಿದೆ.

   English summary
   Himachal Pradesh chief minister Jai Ram Thakur said that lockdown will continue till June 30 in all 12 districts of the state. Till Monday state recorded 203 cases of Coronavirus and three death.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X