ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲ ಪ್ರದೇಶ ಚುನಾವಣೆ: ಗದ್ದುಗೆಯ ಅಧಿಪತಿ ಯಾರು..?!

ಬೆಟ್ಟಗಳ ರಾಜ್ಯ ಹಿಮಾಚಲ ಪ್ರದೇಶದಲ್ಲಿ ಇಂದು(ನವೆಂಬರ್ 9) ನಡೆಯುತ್ತಿರುವ ವಿಧಾನಸಭಾ ಚುನಾವಣೆ ಹಲವು ಕಾರಣಗಳಿಂದ ಮಹತ್ವದ್ದೆನಿಸಿದೆ. ಗುಜರಾತ್ ಚುನಾವಣೆಗೂ ಮುನ್ನ ಜನಾಭಿಪ್ರಾಯದ ಅಭಿವ್ಯಕ್ತಿಗೆ ಈ ಚುನಾವಣೆ ಸಹಕಾರಿಯಾಗಲಿರುವ ಹಿನ್ನೆಲೆಯಲ್ಲಿ,

|
Google Oneindia Kannada News

ಶಿಮ್ಲಾ, ನವೆಂಬರ್ 09: ಬೆಟ್ಟಗಳ ರಾಜ್ಯ ಹಿಮಾಚಲ ಪ್ರದೇಶದಲ್ಲಿ ಇಂದು(ನವೆಂಬರ್ 9) ನಡೆಯುತ್ತಿರುವ ವಿಧಾನಸಭಾ ಚುನಾವಣೆ ಹಲವು ಕಾರಣಗಳಿಂದ ಮಹತ್ವದ್ದೆನಿಸಿದೆ. ಗುಜರಾತ್ ಚುನಾವಣೆಗೂ ಮುನ್ನ ಜನಾಭಿಪ್ರಾಯದ ಅಭಿವ್ಯಕ್ತಿಗೆ ಈ ಚುನಾವಣೆ ಸಹಕಾರಿಯಾಗಲಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿಯ ಘಟಾನುಘಟಿ ನಾಯಕರೂ ಖುದ್ದು ರಾಜ್ಯಕ್ಕೆ ಹಾಜರಾಗಿ ಪ್ರಚಾರ ನಡೆಸಿದ್ದಾರೆ.

ಡಿಸೆಂಬರ್ 18, ಸೋಮವಾರದಂದು ಹೊರಬೀಳಲಿರುವ ಫಲಿತಾಂಶದಲ್ಲಿ ಹಿಮಾಚಲ ಪ್ರದೇಶದ ಗದ್ದುಗೆ ಏರುವವರು ಯಾರು ಎಂಬುದು ನಿರ್ಧಾರವಾಗಿದೆ.

LIVE: ಹಿಮಾಚಲ ಪ್ರದೇಶ: ವೀರಭದ್ರ ಸಿಂಗ್, ಧುಮಾಲ್ ಮತಚಲಾವಣೆLIVE: ಹಿಮಾಚಲ ಪ್ರದೇಶ: ವೀರಭದ್ರ ಸಿಂಗ್, ಧುಮಾಲ್ ಮತಚಲಾವಣೆ

ಮೊದಲು ನಾವು 50 ಸೀಟು ಗೆಲ್ಲುವ ಬಗ್ಗೆ ವಿಶ್ವಾಸವಿತ್ತು, ಆದರೆ ಈಗ 60 ಕ್ಕೂ ಹೆಚ್ಚು ಸೀಟು ಪಡೆಯುತ್ತೇವೆ ಎಂಬ ನಿರೀಕ್ಷೆಯಿದೆ ಎಂದು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ವಿಶ್ವಾಸವನ್ನೇನೋ ವ್ಯಕ್ತಪಡಿಸಿದ್ದಾರೆ. ಆದರೆ ಇದೇ ಸಮಯದಲ್ಲಿ ಹಾಲಿ ಮುಖ್ಯಮಂತ್ರಿ ಕಾಂಗ್ರೆಸ್ ನ ವೀರಭದ್ರ ಸಿಂಗ್, ತಾವು ಬಹುಮತ ಪಡೆದು ಮತ್ತೆ ಅಧಿಕಾರಕ್ಕೇರುವುದಾಗಿಯೂ, ತಾವೇ ಮತ್ತೊಮ್ಮೆ ಅವಧಿಗೆ ಮುಖ್ಯಮಂತ್ರಿಯಾಗುವುದಾಯೂಗಿ ಹೇಳಿಕೊಂಡಿದ್ದಾರೆ.

ಯಾರ ಮಾತು ಸತ್ಯ ಎಂಬುದು ಗೊತ್ತಾಗುವುದಕ್ಕೆ ಡಿಸೆಂಬರ್ 18 ರವರೆಗೆ ಕಾಯಬೇಕಿದೆ!

ಕಾಂಗ್ರೆಸ್ ಗೆ ಮುಳುವಾಗುತ್ತದೆಯೇ ಆರೋಪಗಳು?

ಕಾಂಗ್ರೆಸ್ ಗೆ ಮುಳುವಾಗುತ್ತದೆಯೇ ಆರೋಪಗಳು?

ಕಾಂಗ್ರೆಸ್ ಮುಖ್ಯಸ್ಥ, ಹಾಲಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಚುನಾವಣೆ ಕಾಂಗ್ರೆಸ್ ಗೆ ಮುಳುವಾಗಬಹುದು ಎಂದೂ ಅಂದಾಜಿಸಲಾಗಿದೆ. ಈ ಹಗರಣದ ಆರೋಪಗಳ ಲಾಭ ಪಡೆದ ಬಿಜೆಪಿ, ಪ್ರಚಾರ ಸಮಯದಲ್ಲೂ ಇವುಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದು ಬಿಜೆಪಿಗೆ ಲಾಭವಾಗಬಹುದು.

ಬಿಜೆಪಿ ಗೆಲ್ಲುತ್ತಾ?

ಬಿಜೆಪಿ ಗೆಲ್ಲುತ್ತಾ?

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಪಿ.ಕೆ.ಧುಮಾಲ್ 60 ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರೂ, ಅಪನಗದೀಕರಣ ಮತ್ತು ಜಿಎಸ್ ಟಿಯ ಋಣಾತ್ಮಕ ಪರಿಣಾಮಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸುವಲ್ಲಿ ಯಶಸ್ವಿಯಾದ ಕಾಂಗ್ರೆಸ್ ಅವುಗಳ ಲಾಭ ಪಡೆದರೆ ಅಚ್ಚರಿಯಿಲ್ಲ.

ಮೋದಿ ಅಲೆ ಕೆಲಸಮಾಡುತ್ತಾ..?!

ಮೋದಿ ಅಲೆ ಕೆಲಸಮಾಡುತ್ತಾ..?!

ಹಿಮಾಚಲ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಹಲವು ಬಾರಿ ಪ್ರಚಾರಕ್ಕಾಗಿ ಆಗಮಿಸಿದ್ದ ಪ್ರಧಾನಿ ಮೋದಿ, ಬಿಜೆಪಿಯ ಅಭಿವೃದ್ಧಿ ರಾಜಕಾರಣದ ಕುರಿತು ಮಾತನಾಡಿದ್ದು ಜನರ ಮನಸ್ಸನ್ನು ತಟ್ಟಿದೆಯಾ? ಬೇರೆ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಈ ರಾಜ್ಯದಲ್ಲೂ ಮೋದಿ ಅಲೆಯನ್ನು ಸ್ಥಾಪಿಸುತ್ತಾ ಎಂಬುದು ಫಲಿತಾಂಶಸದ ನಂತರವಷ್ಟೇ ತಿಳಿಯುತ್ತದೆ.

ರಾಹುಲ್ ಪ್ರಚಾರ ಫಲನೀಡೀತಾ?

ರಾಹುಲ್ ಪ್ರಚಾರ ಫಲನೀಡೀತಾ?

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಆಸ್ಥೆ ವಹಿಸಿ, ಖುದ್ದು ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರೂ, ಗುಜರಾತಿನ ಮೇಲೇ ಹೆಚ್ಚು ಗಮನ ವಹಿಸಿರುವುದರಿಂದ ಹಿಮಾಚಲ ಪ್ರದೇಶಕ್ಕೆ ಪ್ರಚಾರಕ್ಕಾಗಿ ಅವರು ಬಂದಿದ್ದು ಮೂರುಬಾರಿ ಮಾತ್ರ! ಇದು ಕಾಂಗ್ರೆಸ್ ಗೆ ವರದಾನವಾಗುತ್ತಾ..?!

ಮ್ಯಾಜಿಕ್ ನಂಬರ್ ಎಷ್ಟು?

ಮ್ಯಾಜಿಕ್ ನಂಬರ್ ಎಷ್ಟು?

68 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಹಿಮಾಚಲ ಪ್ರದೇಶದಲ್ಲಿ ಸರ್ಕಾರ ರಚನೆಗೆ ಅಗತ್ಯವಿರುವ ಸರಳ ಬಹುಮತ 35. 2012 ರಲ್ಲಿ ಕಾಂಗ್ರೆಸ್ ಸರ್ಕಾರ 36 ಸೀಟುಗಳನ್ನು ಗೆಲ್ಲುವಲ್ಲಿ ಸಫಲವಾಗಿತ್ತು.

English summary
Voting for Himachala Pradesh assembly elections 2017 is taking place today. Who will be the king of the hill state's trone? Here is a story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X