ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲದಲ್ಲಿ ಬಿಜೆಪಿ ಅಚಲ: ಚುನಾವಣೋತ್ತರ ಸಮೀಕ್ಷೆ vs ಫಲಿತಾಂಶ

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 18: ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಇತಿಹಾಸ ನಿರ್ಮಿಸಿದೆ. ಹಾಲಿ ಮುಖ್ಯಮಂತ್ರಿ ಕಾಂಗ್ರೆಸ್ಸಿನ ವೀರಭದ್ರ ಸಿಂಗ್ ಸೋಲೊಪ್ಪಿಕೊಂಡಿದ್ದಾರೆ. ಬಿಜೆಪಿ ಜಯಭೇರಿ ಬಾರಿಸಿದರೂ ಸಿಎಂ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಅವರು ಸೋಲು ಕಂಡಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳ ಸರಾಸರಿಯ ಸಮೀಪಕ್ಕೆ ಚುನಾವಣೆ ಫಲಿತಾಂಶ ಹೊಂದುವಂತೆ ಬಂದಿದ್ದು, ಡಿಸೆಂಬರ್ 14ರಂದು ಸಂಜೆ ವರದಿ ನೀಡಿದ ಹಲವು ಮಾಧ್ಯಮಗಳು ಈಗ ತಮ್ಮಮ್ಮ ಬೆನ್ನು ತಟ್ಟಿಕೊಳ್ಳತೊಡಗಿವೆ.

ಚುನಾವಣೋತ್ತರ ಸಮೀಕ್ಷೆಗಳು, ಅಭಿಪ್ರಾಯಗಳ ಬಗ್ಗೆ ಚರ್ಚೆ ಮುಂದುವರೆದಿದ್ದು, ಸಮೀಕ್ಷೆಗಳ ಸಂಗ್ರಹ ಸರಾಸರಿ ವರದಿಯಂತೆ ಬಿಜೆಪಿ ಮ್ಯಾಜಿಕ್ ನಂಬರ್ ದಾಟಲಿದೆ ಎನ್ನಲಾಗಿತ್ತು. ಅದರಂತೆ ಬಿಜೆಪಿ ಗೆಲುವು ಸಾಧಿಸಿದೆ. ಇತಿಹಾಸ ಅವಲೋಕಿಸಿದರೆ ಇಲ್ಲಿ ಒಮ್ಮೆ ಕೂಡಾ ಸತತವಾಗಿ ಯಾವುದೇ ಪಾರ್ಟಿ ಅಧಿಕಾರ ಉಳಿಸಿಕೊಂಡಿಲ್ಲ.

ನವೆಂಬರ್ 9 ರಂದು ಶೇ74ರಷ್ಟು ಮತದಾನ ದಾಖಲಾಗಿತ್ತು. ಹಿಮಾಚಲದ ಕಣದಲ್ಲಿ 19 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 337 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ

ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ

ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ, ಬಿಜೆಪಿ 43 ರಿಂದ 47 ಸೀಟು ಗೆದ್ದು ಅಧಿಕಾರ ಸ್ಥಾಪಿಸಲಿದೆ. 35 ಸ್ಥಾನಗಳ ಮ್ಯಾಜಿಕ್ ಸಂಖ್ಯೆ ದಾಟುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ 21 ರಿಂದ 25 ಸ್ಥಾನ ಗಳಿಸಬಹುದು ಎನ್ನಲಾಗಿತ್ತು.

ಚುನಾವಣೋತ್ತರ ಸಮೀಕ್ಷೆಗಳ ಸಂಗ್ರಹ ಲೆಕ್ಕದಂತೆ : 68 ಸ್ಥಾನಗಳ ಪೈಕಿ ಬಿಜೆಪಿ 49, ಕಾಂಗ್ರೆಸ್ 18, ಇತರೆ 1 ಸ್ಥಾನ ಗಳಿಸಲಿವೆ ಎಂದು ಹೇಳಲಾಗಿತ್ತು.

ಅಂತಿಮ ಫಲಿತಾಂಶ : ಬಿಜೆಪಿ 44, ಕಾಂಗ್ರೆಸ್ 21, ಇತರೆ 03.
ಬಿಜೆಪಿ 44 (ಡಿಸೆಂಬರ್ 18ರ ಫಲಿತಾಂಶ)

ಬಿಜೆಪಿ 44 (ಡಿಸೆಂಬರ್ 18ರ ಫಲಿತಾಂಶ)

ಸರಾಸರಿ ಬಿಜೆಪಿ 49/68 (ಡಿಸೆಂಬರ್ 14)

ಟೈಮ್ಸ್ ವಿಎಂಆರ್ ಎಕ್ಸಿಟ್ ಪೋಲ್ : 51
ಜೀ ನ್ಯೂಸ್ ಆಕ್ಸಿಸ್ : 51
ನ್ಯೂಸ್ ನೇಷನ್ : 43-47
ಆಜ್ ತಕ್ ಆಕ್ಸಿಸ್: 47-55
ನ್ಯೂಸ್ ಎಕ್ಸ್ : 42-50
ಸಮಯ್ ಸಿಎನ್ಎಕ್ಸ್ : 42-50
ಕಾಂಗ್ರೆಸ್ 21 (ಡಿಸೆಂಬರ್ 18ರ ಫಲಿತಾಂಶ)

ಕಾಂಗ್ರೆಸ್ 21 (ಡಿಸೆಂಬರ್ 18ರ ಫಲಿತಾಂಶ)

ಕಾಂಗ್ರೆಸ್ 18/68(ಡಿಸೆಂಬರ್ 14)

ಟೈಮ್ಸ್ ವಿಎಂಆರ್ ಎಕ್ಸಿಟ್ ಪೋಲ್ : 16
ಜೀ ನ್ಯೂಸ್ ಆಕ್ಸಿಸ್ : 17
ನ್ಯೂಸ್ ನೇಷನ್ : 19-23
ಆಜ್ ತಕ್ ಆಕ್ಸಿಸ್: 13-20
ನ್ಯೂಸ್ ಎಕ್ಸ್ : 18-24
ಸಮಯ್ ಸಿಎನ್ಎಕ್ಸ್ : 18-24

ಇತರೆ 03 (ಡಿಸೆಂಬರ್ 18ರ ಫಲಿತಾಂಶ)

ಇತರೆ 03 (ಡಿಸೆಂಬರ್ 18ರ ಫಲಿತಾಂಶ)

ಇತರೆ 1/68(ಡಿಸೆಂಬರ್ 14)

ಟೈಮ್ಸ್ ವಿಎಂಆರ್ ಎಕ್ಸಿಟ್ ಪೋಲ್ : 1
ಜೀ ನ್ಯೂಸ್ ಆಕ್ಸಿಸ್ : 0
ನ್ಯೂಸ್ ನೇಷನ್ :1-3
ಆಜ್ ತಕ್ ಆಕ್ಸಿಸ್: 0-2
ನ್ಯೂಸ್ ಎಕ್ಸ್ : 0-2
ಸಮಯ್ ಸಿಎನ್ಎಕ್ಸ್ : 0-2

English summary
Himachal Pradesh Election results 2017 vs Exit Polls : A poll of exit polls that aggregates several surveys, shows the BJP getting 49 of the hill state's 68 seats. Election results on Dec 18 is out with BJP securing 44 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X