ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲ ಪ್ರದೇಶ: ವಿದೇಶಿಗರು ಸೇರಿ 16 ಮಂದಿ ಚಾರಣಿಗರು ನಾಪತ್ತೆ

|
Google Oneindia Kannada News

ಚಂಬಾ (ಹಿಮಾಚಲ ಪ್ರದೇಶ), ಸೆಪ್ಟೆಂಬರ್ 29: ಹಿಮಾಚಲ ಪ್ರದೇಶದ ಚಂಬಾದಲ್ಲಿ 10 ವಿದೇಶಿ ಪ್ರವಾಸಿಗರೂ ಸೇರಿದಂತೆ ಚಾರಣಕ್ಕೆ ತೆರಳಿದ್ದ 16 ಮಂದಿ ಶನಿವಾರ ನಾಪತ್ತೆಯಾಗಿದ್ದಾರೆ.

ವೈರಲ್ ವಿಡಿಯೋ: ಹಿಮಾಚಲ ಪ್ರದೇಶದಲ್ಲಿ ಮಳೆಯ ರೌದ್ರಾವತಾರವೈರಲ್ ವಿಡಿಯೋ: ಹಿಮಾಚಲ ಪ್ರದೇಶದಲ್ಲಿ ಮಳೆಯ ರೌದ್ರಾವತಾರ

ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಚಾರಣಿಗರ ಜತೆ ಯಾವುದೇ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪೊಲೀಸರು, ಸ್ಥಳೀಯರು ಮತ್ತು ಪರ್ವತಾರೋಹಣ ಪರಿಣತರನ್ನು ಒಳಗೊಂಡ ತಂಡವೊಂದು ಅವರ ಪತ್ತೆಗೆ ತೀವ್ರ ಹುಡುಕಾಟ ನಡೆಸಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಪಂಜಾಬ್ ನಲ್ಲಿ ರಜಾಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಪಂಜಾಬ್ ನಲ್ಲಿ ರಜಾ

ಈ ವಾರದ ಆರಂಭದಲ್ಲಿ ಹಿಮಾಚ್ಛಾದಿತ ಪರ್ವತ ಶ್ರೇಣಿಯಲ್ಲಿನ ಸಿಲುಕಿದ್ದ ಐಐಟಿ-ರೂರ್ಕಿಯ 45 ವಿದ್ಯಾರ್ಥಿಗಳು, ಐವರು ಭಾರತ ಮೂಲದ ಅಮೆರಿಕ ನಾಗರಿಕರು ಮತ್ತು ಇಬ್ಬರು ಜರ್ಮನ್ ಚಾರಣಿಗರನ್ನು ಜಿಲ್ಲಾಡಳಿತ ಮತ್ತು ಗಡಿ ಪ್ರದೇಶಗಳ ರಸ್ತೆ ನಿರ್ವಹಣಾ ಸಂಸ್ಥೆ (ಬಿಆರ್‌ಒ) ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದವು.

Himachal pradesh 16 treckers missing including foreingers

ಮನಾಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಭೂ ಕುಸಿತ ಮತ್ತು ಭಾರಿ ಹಿಮಪಾತದ ಕಾರಣದಿಂದ ಕಡಿತಗೊಂಡಿದ್ದರಿಂದ ಅವರ ಲಾಹೌಲ್ ಕಣಿವೆಯಲ್ಲಿ ಸಿಲುಕಿಕೊಂಡಿದ್ದರು.

ರಾಜ್ಯದಲ್ಲಿ ಸೆಪ್ಟೆಂಬರ್ ತಿಂಗಳ ಮಧ್ಯಭಾಗದಿಂದಲೂ ವಿಪರೀತ ಮಳೆ ಮತ್ತು ಹಿಮಪಾತ ಸಂಭವಿಸುತ್ತಿದೆ. ತೀರಾ ಒಳಭಾಗದಲ್ಲಿರುವ ಪ್ರದೇಶಗಳಲ್ಲಿ ಐಎಎಫ್ ಮತ್ತು ಬಿಆರ್‌ಒ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಆಹಾರ ಸರಬರಾಜು ಮಾಡಲಾಗುತ್ತಿದೆ.

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ: 13 ಮಂದಿ ಸಾವುಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ: 13 ಮಂದಿ ಸಾವು

ಹಾನಿಗೊಳಗಾಗಿದ್ದ ಮತ್ತು ಮುಚ್ಚಿಹೋಗಿದ್ದ ರಸ್ತೆಗಳನ್ನು ದುರಸ್ತಿಪಡಿಸಲಾಗುತ್ತಿದ್ದು, ಸುಮಾರು 600 ರಸ್ತೆಗಳು ಸಂಚಾರಕ್ಕೆ ಮುಕ್ತಗೊಂಡಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.

English summary
16 Trecker including 10 foreigners are missing at Chamba in Himachal Pradesh on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X