ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲ ಪ್ರದೇಶ ಡಿಜಿಪಿಯಿಂದ ಶಾಂತಿಯುತ ಮತದಾನದ ಭರವಸೆ

|
Google Oneindia Kannada News

ಶಿಮ್ಲಾ, ನವೆಂಬರ್ 09: ಬೆಟ್ಟಗಳ ರಾಜ್ಯ ಹಿಮಾಚಲ ಪ್ರದೇಶದಲ್ಲಿ ಇಂದು(ನ.09) ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದ್ದು, ಇಲ್ಲಿನ ಪೊಲೀಸ್ ಮಹಾನಿರ್ದೇಶಕ ಸೋಮೇಶ್ ಗೋಯಲ್ ಶಾಂತಿಯುತ ಮತದಾನದ ಭರವಸೆ ನೀಡಿದ್ದಾರೆ.

LIVE: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಮತದಾನ ಆರಂಭ LIVE: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಮತದಾನ ಆರಂಭ

ದೇಶದ ಅತ್ಯಂತ ಸುಂದರ ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಒಟ್ಟು 68 ವಿಧಾನಸಭಾ ಕ್ಷೇತ್ರಗಳಿದ್ದು, ಅವಕ್ಕೆ ಇಂದು ಮತದಾನ ನಡೆಯಲಿದೆ. ಚುನಾವಣೆಗಾಗಿ ನಾವು ರಾಜ್ಯದಲ್ಲಿ 11000 ಕ್ಕೂ ಹೆಚ್ಚು ಪೊಲೀಸರನ್ನು ಮತ್ತು 6400 ಭದ್ರತಾ ಸಿಬ್ಬಂದಿಗಳನ್ನು ನೇಮಿಸಿದ್ದೇವೆ ಎಂದು ಸೋಮೇಶ್ ಗೋಯೆಲ್ ತಿಳಿಸಿದ್ದಾರೆ.

ಗುಜರಾತ್, ಹಿಮಾಚಲದಲ್ಲಿ ಕಪ್ಪುಹಣ ಹರಿಯುತ್ತಿದೆ : ದೇವೇಗೌಡಗುಜರಾತ್, ಹಿಮಾಚಲದಲ್ಲಿ ಕಪ್ಪುಹಣ ಹರಿಯುತ್ತಿದೆ : ದೇವೇಗೌಡ

Himachal DGP assures fair, free election

ಯಾವುದೇ ರೀತಿಯ ಚುನಾವಣಾ ಅಕ್ರಮಗಳು ಸಂಭವಿಸದಂತೆ ಬಹುತೇಕ ಎಲ್ಲಾ ಭೂತ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರ ನಡೆಸಿರುವುದರಿಂದ ಈ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಮಹತ್ವದ್ದಾಗಿದೆ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ದಾಖಲೆ ಬರೆದ ಕಾಂಗ್ರೆಸ್ ನ ವೀರಭದ್ರ ಸಿಂಗ್ ಮತ್ತೆ ಮುಖ್ಯಮಂತ್ರಿ ಪಟ್ಟ ಅಲಂಕರಿಸುತ್ತಾರಾ..? ಎಂಬುದು ಡಿಸೆಂಬರ್ 18 ರ ಫಲಿತಾಂಶದ ದಿನದಂದು ತಿಳಿಯಲಿದೆ.

English summary
Himachal Pradesh Director General of Police (DGP) Somesh Goyal on Wednesday assured of a fair and free election as the state geared up to vote on November 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X