ಹೈಜಾಕ್ ಬೆದರಿಕೆ, ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್

Subscribe to Oneindia Kannada

ಮುಂಬೈ, ಏಪ್ರಿಲ್ 16: ವಿಮಾನ ಹೈಜಾಕ್ ಮಾಡುವುದಾಗಿ ಬೆದರಿಕೆ ಇ-ಮೇಲ್ ಬಂದ ಹಿನ್ನಲೆಯಲ್ಲಿ ದೇಶದ ಪ್ರಮುಖ ಮೂರು ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಪ್ರಮುಖವಾಗಿ ಮುಂಬೈ, ಚೆನ್ನೈ ಮತ್ತು ಹೈದರಾಬಾದ್ ಏರ್ಪೋರ್ಟ್ ಗಳಲ್ಲಿ ವಿಮಾನ ಹೈಜಾಕ್ ಮಾಡಲಾಗುವುದು ಎಂದು ಬೆದರಿಕೆ ಬಂದಿದ್ದರಿಂದ ಈ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

Hijack threat call, Security tightened at Chennai, Mumbai & Hyderabad airports

"ಸುಮಾರು 23 ಜನರ ತಂಡವೊಂದು ವಿವಿಧ ಏರ್ಪೋರ್ಟ್ ಗಳಿಂದ ವಿಮಾನಗಳನ್ನು ಅಪಹರಣ ನಡೆಸಲಿದೆ," ಎಂದು ಹೈದರಾಬಾದ್ ಮಹಿಳೆಯಿಂದ ಮುಂಬೈ ಪೊಲೀಸರಿಗೆ ಇ-ಮೇಲ್ ಬಂದಿತ್ತು. ಇದಾದ ಬೆನ್ನಿಗೆ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಈ ಇ-ಮೇಲ್ ನಲ್ಲಿ ಮಹಿಳೆಯು, "ಆರು ಜನ ವಿಮಾನ ಹೈಜಾಕ್ ಮಾಡುವ ಕುರಿತು ಚರ್ಚಿಸುತ್ತಿದ್ದರು," ಎಂದು ಉಲ್ಲೇಖಿಸಿದ್ದಾರೆ. ಮುಂಬೈ ಪೊಲೀಸರು ಈ ಇ-ಮೇಲನ್ನು ಗುಪ್ತಚರ ಇಲಾಖೆ ಸೇರಿದಂತೆ ಏರ್ಪೋರ್ಟ್ ಗಳಿಗೆ ರವಾನಿಸಿದ್ದಾರೆ. ಇನ್ನು ಪೊಲೀಸರು ಇ-ಮೇಲ್ ಸತ್ಯಾಸತ್ಯತೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮೂರು ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದರೆ, ಬೆಂಗಳೂರು ಸೇರಿದಂತೆ ದೇಶದ ಇತರ ವಿಮಾನ ನಿಲ್ದಾಣಗಳಲ್ಲಿಯೂ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

Hijack threat call, Security tightened at Chennai, Mumbai & Hyderabad airports

ಬೆದರಿಕೆ ಹಿನ್ನಲೆಯಲ್ಲಿ ವಿಶೇಷ ವಿಮಾನ ನಿಲ್ದಾಣ ಭದ್ರತಾ ಸಮಿತಿ ಸಭೆಯನ್ನು ನಿನ್ನೆ ರಾತ್ರಿ ಆಯಾ ವಿಮಾನ ನಿಲ್ದಾಣಗಳಲ್ಲಿ ನಡೆಸಲಾಗಿದೆ. ಈ ಸಮಿತಿಯು ಭದ್ರತೆ ನಿರ್ವಹಿಸುವ ಸಿಬ್ಬಂದಿಗಳಿಗೆ ಮೈಯೆಲ್ಲಾ ಕಣ್ಣಾಗಿರುವಂತೆ ಸೂಚನೆ ನೀಡಿದೆ.

ಪ್ರಯಾಣಿಕರನ್ನು ಸಂಪುರ್ಣ ಪರಿಶೀಲನೆ ಮಾಡಿ. ಕೊನೆಯ ಕ್ಷಣದಲ್ಲಿ ಚೆಕ್ ಇನ್ ಗೊಂದಲಗಳನ್ನು ತಪ್ಪಿಸಿ. ಏರ್ಪೋರ್ಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇರಿಸಿ ಎಂದು ಕಟ್ಟಪ್ಪಣೆ ಹೊರಡಿಸಲಾಗಿದೆ.

ಜತೆಗೆ ಶ್ವಾನದಳ, ಕ್ಷಿಪ್ರ ಕಾರ್ಯಾಚರಣೆ ಪಡೆಗಳನ್ನೂ ಏರ್ಪೋರ್ಟಿಗೆ ಕಳುಹಿಸಿಕೊಡಲಾಗಿದೆ. "ಚೆನ್ನೈ, ಮುಂಬೈ, ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಭದ್ರತೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಲಾಗಿದೆ ," ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ಮಹಾ ನಿರ್ದೇಶಕ ಒ.ಪಿ.ಸಿಂಗ್ ತಿಳಿಸಿದ್ದಾರೆ.

ಹೀಗಿದ್ದೂ, "ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಯಾರೂ ಚಿಂತಿಸುವ ಅಗತ್ಯವಿಲ್ಲ," ಎಂದು ಹಿರಿಯ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Security tightened at Chennai, Mumbai and Hyderabad airport following a hijack threat call. Police investigation is underway on this threat call.
Please Wait while comments are loading...