ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಜಾಬ್‌ ವಿವಾದ: ಪಿಎಫ್‌ಐ ನಿಷೇಧಿಸಲು ಸೂಫಿ ಅಸೋಸಿಯೇಷನ್‌ ಆಗ್ರಹ

|
Google Oneindia Kannada News

ನವದೆಹಲಿ, ಫೆಬ್ರವರಿ 17: ಕರ್ನಾಟಕದಲ್ಲಿ ಹಿಜಾಬ್‌ ವಿವಾದವು ಪ್ರಸ್ತುತ ಹೈಕೋರ್ಟ್‌ನ ವಿಚಾರಣೆಗೆ ಒಳಪಟ್ಟಿದೆ. ಈ ನಡುವೆ ಹಲವಾರು ನಾಯಕರುಗಳು ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಆಗ್ರಹ ಮಾಡಿದೆ. ಈಗ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಯನ್ನು ನಿಷೇಧಿಸುವಂತೆ ಸೂಫಿ ಖಾನ್‌ಖಾಹ್‌ ಅಸೋಸಿಯೇಷನ್‌ನ ಸದಸ್ಯರು ಒತ್ತಾಯಿಸುತ್ತಿದ್ದಾರೆ.

ಪಿಎಫ್‌ಐ ಮತ್ತು ಅದರ ಇಸ್ಲಾಂ ಪ್ರಾತಿನಿಧ್ಯದ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಒತ್ತಾಯಿಸಿ ಸಂಘಟನೆಯು ಉತ್ತರ ಪ್ರದೇಶದಾದ್ಯಂತ ಯಾತ್ರೆಗಳನ್ನು ನಡೆಸುತ್ತಿದೆ. ನಿಷೇಧಕ್ಕೆ ಆಗ್ರಹಿಸಿ ಎಲ್ಗರ್ ಯಾತ್ರೆ ನಡೆಸುತ್ತಿರುವ ಸದಸ್ಯರು ಶೀಘ್ರದಲ್ಲೇ ದೆಹಲಿ ತಲುಪಲಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ.

 ಹಿಜಾಬ್‌ ವಿವಾದ: ಹೈಕೋರ್ಟ್ ಏನೇ ನಿರ್ಧಾರ ಕೈಗೊಂಡರೂ ರಾಜಕೀಯ ಲಾಭ ಎಂದ ಬಿಜೆಪಿ ಹಿಜಾಬ್‌ ವಿವಾದ: ಹೈಕೋರ್ಟ್ ಏನೇ ನಿರ್ಧಾರ ಕೈಗೊಂಡರೂ ರಾಜಕೀಯ ಲಾಭ ಎಂದ ಬಿಜೆಪಿ

ಪಾಕಿಸ್ತಾನ ಮತ್ತು ಟರ್ಕಿಯ ಆಜ್ಞೆಯ ಮೇರೆಗೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪವನ್ನು ಮಾಡಿರುವ ಸೂಫಿ ಖಾನ್‌ಖಾಹ್‌ ಅಸೋಸಿಯೇಷನ್‌, ಈ ಸಂಘಟನೆಯು ತಪ್ಪಾಗಿ ಇಸ್ಲಾಂ ಧರ್ಮವನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು ಅಪ್ರಸ್ತುತ ಭಾರತ ವಿರೋಧಿ ಕಾರ್ಯಸೂಚಿಯನ್ನು ಹೊಂದಿದ್ದಾರೆ ಎಂದು ಕೂಡಾ ಆರೋಪ ಮಾಡಿದ್ದಾರೆ.

ಈ ಬಗ್ಗೆ ಸೂಫಿ ಮೊಹಮ್ಮದ್ ಕೌಸರ್ ಹಸನ್ ಮಜಿದಿ ಮಾತನಾಡಿ, "ನೂರಾರು ವರ್ಷಗಳಿಂದ ಜೊತೆಯಾಗಿ ಇರುವುದು ಭಾರತದ ಆಚರಣೆಯಾಗಿದೆ. ಆದರೆ ರಾಷ್ಟ್ರೇತರ ಶಕ್ತಿಗಳ ನೆರವಿನೊಂದಿಗೆ ಪಿಎಫ್‌ಐ ಭಯಭೀತ ವಿಚಾರಗಳನ್ನು ಪ್ರಚಾರ ಮಾಡುವ ಮೂಲಕ ರಾಷ್ಟ್ರಕ್ಕೆ ಹಾನಿ ಮಾಡುತ್ತಿದೆ. ಆದ್ದರಿಂದ ಕೂಡಲೇ ಈ ಸಂಘಟನೆಯನ್ನು ನಿಷೇಧಿಸಬೇಕು," ಎಂದು ಆಗ್ರಹ ಮಾಡಿದ್ದಾರೆ.

Hijab Row: Sufi Khanqaah Association Seeks Ban on PFI

ಪಿಎಫ್‌ಐ ಬ್ಯಾನ್‌ಗೆ ಆಗ್ರಹ ಮಾಡಿದ್ದ ಪ್ರತಾಪ್ ಸಿಂಹ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್‌ಡಿ)ಯನ್ನು ನಿಷೇಧಿಸುವಂತೆ ಮೈಸೂರು ಸಂಸದ ಪ್ರತಾಪ್ ಸಿಂಹ ಆಗ್ರಹ ಮಾಡಿದ್ದರು. ರಾಜ್ಯದಲ್ಲಿ ಎರಡು ಸಂಘಟನೆಗಳು ತೊಂದರೆಯನ್ನುಂಟುಮಾಡುತ್ತಿವೆ ಎಂದು ಇತ್ತೀಚಿಗೆ ಆರೋಪಿಸಿದ್ದಾರೆ.

ಸಚಿವ ಈಶ್ವರಪ್ಪ ರಾಜೀನಾಮೆ ಪಡೆದು, ದೇಶದ್ರೋಹ ಪ್ರಕರಣ ದಾಖಲಿಸಬೇಕು; ಡಿಕೆಶಿ ಆಗ್ರಹಸಚಿವ ಈಶ್ವರಪ್ಪ ರಾಜೀನಾಮೆ ಪಡೆದು, ದೇಶದ್ರೋಹ ಪ್ರಕರಣ ದಾಖಲಿಸಬೇಕು; ಡಿಕೆಶಿ ಆಗ್ರಹ

ಎರಡು ಗುಂಪುಗಳು ಕೂಡ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಬೆಂಗಳೂರಿನಲ್ಲಿ ಗಲಭೆ ಸೃಷ್ಟಿ ಮಾಡಿದೆ, ಈ ನಿಟ್ಟಿನಲ್ಲಿ ಗಲಭೆ, ಸಂಘಟನೆಗಳ ಚಟುವಟಿಕೆಗೆ ಕಡಿವಾಣ ಹಾಕಲು ಸರಕಾರ ನಿಷೇಧ ಹೇರಬೇಕು. ಬೆಂಗಳೂರು ಹಿಂಸಾಚಾರದ ನಂತರ ಶೀಘ್ರದಲ್ಲೇ ಅವರನ್ನು ನಿಷೇಧಿಸಬೇಕಾಗಿತ್ತು ಮತ್ತು ಅವರು ಹಿಜಾಬ್ ವಿಷಯದ ಬಗ್ಗೆ ತೊಂದರೆ ನೀಡಲು ಕರ್ನಾಟಕದಲ್ಲಿ ವಿದ್ಯಾರ್ಥಿ ಸಮುದಾಯವನ್ನು ಪ್ರಚೋದಿಸುತ್ತಿದ್ದಾರೆ," ಎಂದು ಆರೋಪ ಮಾಡಿದರು. ಕೇರಳ ಮೂಲದ ಎರಡು ಸಂಘಟನೆಗಳು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯನ್ನು ಪ್ರವೇಶಿಸಿ ರಾಜ್ಯದಾದ್ಯಂತ ಗಲಭೆ ಸೃಷ್ಟಿಸಲು ತಮ್ಮ ಪ್ರಭಾವವನ್ನು ಹರಡಿದ್ದು, ಅವುಗಳನ್ನು ನಿಷೇಧಿಸಬೇಕು ಎಂದು ಪ್ರತಾಪ್‌ ಸಿಂಹ ತಿಳಿಸಿದ್ದಾರೆ.

ಪಿಎಫ್‌ಐ ನಿಷೇಧಕ್ಕೆ ಒತ್ತಾಯಿಸಿ ಸೂಫಿ ಇಸ್ಲಾಮಿಕ್ ಬೋರ್ಡ್‌ನಿಂದ ಕೇಂದ್ರಕ್ಕೆ ಪತ್ರ

ವಾದಾತ್ಮಕ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮೇಲೆ ರಾಷ್ಟ್ರವ್ಯಾಪಿ ನಿಷೇಧದ ಬೇಡಿಕೆಗಳು ಈ ಹಿಂದೆ ಕೇಳಿ ಬಂದ ಸಂದರ್ಭದಲ್ಲಿ ಸೂಫಿ ಇಸ್ಲಾಮಿಕ್ ಬೋರ್ಡ್, ಭಯೋತ್ಪಾದಕ ಮತ್ತು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಮತ್ತು ಮುಸ್ಲಿಮರನ್ನು ತೀವ್ರಗಾಮಿಗೊಳಿಸುವ ಸಂಘಟನೆಯನ್ನು ಕೇಂದ್ರವು ನಿಷೇಧಿಸಬೇಕು ಎಂದು ಆಗ್ರಹ ಮಾಡಿದೆ. ಗುಜರಾತ್ ಘಟಕದ ಅಧ್ಯಕ್ಷ ಪಿರ್ ಸೂಫಿ ಸೈಯದ್ ಖಾಲಿದ್ ನಕ್ವಿ ಅಲ್ ಹುಸೇನಿ ಅವರು ತಮ್ಮ ಸಂಘಟನೆಯು ಈಗಾಗಲೇ #banPFI ಅಭಿಯಾನವನ್ನು ನಡೆಸುತ್ತಿದೆ ಎಂದು ತಿಳಿಸಿದ್ದರು.

"ಸರ್ಕಾರದ ವಿವಿಧ ವರದಿಗಳು ಮತ್ತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಪಿಎಫ್‌ಐ ಮತ್ತು ಟರ್ಕಿಯಂತಹ ಭಾರತ ವಿರೋಧಿ ದೇಶಗಳ ನಡುವಿನ ಸಂಪರ್ಕವನ್ನು ಎತ್ತಿ ತೋರಿಸುತ್ತದೆ. ಅಲ್ ಖೈದಾ ಮತ್ತು ಐಸಿಸ್ ಅನ್ನು ಬೆಂಬಲಿಸುವ ಟರ್ಕಿಯ ಭಯೋತ್ಪಾದಕ ಸಂಘಟನೆ ಎಚ್‌ಐಎಚ್‌ನೊಂದಿಗೆ ಪಿಎಫ್‌ಐನ ಉನ್ನತ ನಾಯಕರ ನಡುವಿನ ಸಭೆಯು ಗಂಭೀರ ಕಳವಳಕಾರಿ ವಿಷಯವಾಗಿದೆ," ಎಂದು ಹೇಳಿದೆ. (ಒನ್‌ಇಂಡಿಯಾ ಸುದ್ದಿ)

Recommended Video

ಮುಸ್ಲಿಂರ ಮನಸ್ಥಿತಿ ತುಂಬಾ ಅಪಾಯಕಾರಿ ಎಂದ CT Ravi | Oneindia Kannada

English summary
Hijab row: Sufi Khanqaah Association seeks ban on Popular Front of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X