• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಪುಟ ಸಭೆ ಬಳಿಕ ಕೇಂದ್ರ ಸಚಿವರ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು

|

ನವದೆಹಲಿ, ಜೂನ್ 1: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆ ಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಕೇಂದ್ರ ಸಚಿವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

   Train services start today , Dos and Don'ts during the journey | Railways Resumed | Oneindia Kannada

   ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ನಿತಿನ್ ಗಡ್ಕರಿ ಹಾಗೂ ನರೇಂದ್ರ ತೋಮರ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

   ಫುಟ್‌ಪಾತ್ ಮೇಲೆ ವಸ್ತುಗಳನ್ನು ಮಾರಾಟಮಾಡುವವರಿಗೆ ನೀಡುವ ಸಾಲವನ್ನು ಪಿಎಂ ಸ್ವ ನಿಧಿ( ಪ್ರೈಂ ಮಿನಿಸ್ಟರ್ ಸ್ಟ್ರೀಟ್ ವೆಂಡರ್ಸ್ ಆತ್ಮ ನಿರ್ಭರ ನಿಧಿ) ಎಂದು ಕರೆಯಲಾಗುತ್ತದೆ.

   ದೇಶದ ಜಿಡಿಪಿಯಲ್ಲಿ ಶೇ.29ರಷ್ಟು ಎಂಎಸ್‌ಎಂಇಯಿಂದ ಬರುತ್ತಿದೆ. ಆರು ಕೋಟಿ ಎಂಎಸ್‌ಎಂಇ ಸೆಕ್ಟರ್‌ಗಳಿಗೆ ಅದು 11 ಸಾವಿರ ಮಂದಿಗೆ ಉದ್ಯೋಗ ನೀಡಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

   ಮೋದಿ ಮನ್‌ ಕಿ ಬಾತ್‌: ಆರ್ಥಿಕತೆ ಪುನರಾರಂಭ ಆದರೆ ಎಚ್ಚರವಿರಲಿ

   ಎಂಎಸ್‌ಎಂಪಿಗಳಲ್ಲಿ ಹೂಡಿಕೆ ಮಾಡಲು ಮೂಲ ನಿಧಿ ಸ್ಥಾಪನೆಗೆ ಸಂಪುಟದ ಅನುಮೋದನೆ ನೀಡಲಾಗಿದೆ. ರೈತರು, ಎಂಎಸ್‌ಎಂಇ ಸಹಾಯ ಆಗುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ರೈತರ ಸಾಲದ ಮೇಲಿನ ಬಡ್ಡಿ ವಿನಾಯಿತಿಗೂ ಸಂಪುಟ ಅಸ್ತು ಎಂದಿದೆ.

   ರೈತರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಹೂಡಿಕೆ ಮಿತಿಯನ್ನು 25 ಲಕ್ಷದಿಂದ 1 ಕೋಟಿಗೆ ಏರಿಕೆ ಮಾಡಲಾಗಿದೆ. ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ಸಾಲ ನೀಡಲು ಸಂಪುಟ ಅಸ್ತು ಎಂದಿದೆ. ಎಂಎಸ್‌ಎಂಇ ಸಾಲಕ್ಕೆ ಸರ್ಕಾರವೇ ಗ್ಯಾರಂಟಿ ನೀಡಲಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

   ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು

   -2 ಲಕ್ಷ ಎಂಎಸ್‌ಎಂಇಗಳಿಗಳ ಕಾಯಕಲ್ಪಕ್ಕೆ 20 ಸಾವಿರ ಕೋಡಿ ರೂ ನೀಡಲು ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ.

   -ರೈತರು ಸಾಲನವನ್ನು ಮರುಪಾವತಿ ಮಾಡಲು ಸಾಕಷ್ಟು ಕಾಲಾವಕಾಶವನ್ನು ನೀಡಲಾಗಿದೆ. ಆಗಸ್ಟ್ 31ರೊಳಗೆ ಸಾಲ ಮರುಪಾವತಿ ಮಾಡಿದರೆ ಶೇ.4ರಷ್ಟು ಸಬ್ಸಿಡಿ ದೊರೆಯಲಿದೆ.

   -14 ಬೆಳೆಗಳಿಗೆ ಶೇ.50-83ರಷ್ಟು ಬೆಂಬಲ ಬೆಲೆ ನೀಡಲಾಗುತ್ತದೆ.

   -ಎಂಎಸ್‌ಎಂಇಗಳ ಕಾಯಕಲ್ಪಕ್ಕೆ 20 ಸಾವಿರ ಕೋಟಿ ಹಾಗೂ 50 ಸಾವಿರ ಕೋಟಿ ರೂ.ಗಳ ಎರಡು ಪ್ಯಾಕೇಜ್‌ಗಳನ್ನು ಘೋಷಿಸಲಾಗಿದೆ

   -ಮಧ್ಯಮ ಉದ್ಯಮಗಳಿಗೆ ವಹಿವಾಟು ಮಿತಿಯನ್ನು 250 ಕೋಟಿ ರೂಗೆ ಏರಿಕೆ ಮಾಡಲಾಗಿದೆ ಮತ್ತು ಹೂಡಿಕೆ ಮಿಡಿಯನ್ನು 50 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

   -ಸರ್ಕಾರವು ಸಿಜಿಟಿಎಂಎಸ್‌ಇಗೆ 4 ಸಾವಿರ ಕೋಟಿ ರೂ ಬೆಂಗಲ ನೀಡುತ್ತಿದೆ. ಸಿಜಿಟಿಎಂಎಸ್‌ಇಯು ಬ್ಯಾಂಕ್‌ಗಳಿಗೆ ಕ್ರೆಡಿಟ್ ಗ್ಯಾರಂಟಿಯನ್ನು ನೀಡುತ್ತದೆ.

   -ಭತ್ತಕ್ಕೆ ಒಂದು ಕ್ವಿಂಟಾಲ್‌ಗೆ 1868 ರೂ ಬೆಂಬಲ ಬೆಲೆ, ಜೋಳಕ್ಕೆ 2620 ರೂ. ಬೆಂಬಲ ಬೆಲೆ, ರಾಗಿ, ಸೋಯಾಬೀನ್, ಹತ್ತಿ, ಎಣ್ಣೆಗೆ ಶೇ.50ರಷ್ಟು ಬೆಂಬಲ ಬೆಲೆ ಹೆಚ್ಚಿಸಲಾಗಿದೆ.

   English summary
   Union ministers Prakash Javadekar, Nitin Gadkari and Narendra Tomar are addressing the media on the decisions taken by the Union Cabinet in a meeting today. Here are the highlights.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X