ಡಿಸೆಂಬರ್ ನ ಚಳಿಗಾಲದಲ್ಲಿ ಬಿಸಿ ಏರಿದಂತೆ ಓದುಗರು ಓದಿದ ಸುದ್ದಿ ಗುಚ್ಛ

Posted By:
Subscribe to Oneindia Kannada

ವರ್ಷದ ಕೊನೆ, ಚಳಿಗಾಲದ ಡಿಸೆಂಬರ್ ತಿಂಗಳ ಕೊನೆ ದಿನಗಳು. ಇನ್ನೆಷ್ಟು ಮಹಾ? ಎರಡು ದಿನ ಕಳೆದರೆ ಕಣ್ಣು ಹೊಸೆದುಕೊಳ್ಳುತ್ತಾ ಜನವರಿ ಬಂದುಬಿಡುತ್ತದೆ. ಈ ತಿಂಗಳಲ್ಲಿ ಒನ್ ಇಂಡಿಯಾದಲ್ಲಿ ಓದುಗರು ಬಹಳ ಇಷ್ಟಪಟ್ಟು ಓದಿದ ಲೇಖನಗಳ್ಯಾವುವು ಎಂಬ ಕುತೂಹಲದಿಂದ ಗಮನಿಸಿದಾಗ ಕಂಡುಬಂದಿದ್ದು ಇವು.

ಬಹಳ ಮಂದಿ ಇಷ್ಟ ಪಟ್ಟ ಲೇಖನಗಳು ದಿನ ಸರಿದಂತೆ ಅವು ಕೂಡ ಒಳ ಸರಿದುಹೋಗಿರುತ್ತವೆ. ಅದೆಲ್ಲಿ ಮತ್ತೊಮ್ಮೆ ಓದೋಣ ಅಂದುಕೊಳ್ಳುವಷ್ಟರಲ್ಲಿ ಕಣ್ಣಿಗೆ ಮರೆಯಾಗಿರುತ್ತವೆ. ಆದ್ದರಿಂದಲೇ ಅಂಥ ಲೇಖನ-ವರದಿ-ವಿಶ್ಲೇಷಣೆಯನ್ನು ಮತ್ತೊಮ್ಮೆ ನಿಮ್ಮೆದುರು ಪ್ರಸ್ತುತ ಪಡಿಸುತ್ತಿದ್ದೀವಿ.

ಓದುವ ಖುಷಿ ನಿಮ್ಮದಾಗಲಿ. ಜತೆಗೆ ನಿಮ್ಮ ಅಭಿಪ್ರಾಯ ಕೂಡ ಒಂದೆರಡು ಸಾಲು ತಿಳಿಸಿ. ಮತ್ತೆ, ಸಿಗ್ತಾ ಇರೋಣ.

ಭೂಮಿ ಮೇಲೆ ಮನುಷ್ಯರು ವಾಸ ಮಾಡಲು ಸಾಧ್ಯವಿಲ್ಲ

ಭೂಮಿ ಮೇಲೆ ಮನುಷ್ಯರು ವಾಸ ಮಾಡಲು ಸಾಧ್ಯವಿಲ್ಲ

2028ರ ವೇಳೆಗೆ ಜಗತ್ತಿನಲ್ಲಿ ಹಸಿವು ನಿರ್ಣಾಮವಾಗಲಿದೆ. ಅಲ್ಲದೆ ಮಂಗಳ ಗ್ರಹದ ಮೇಲೆ ವಸಹಾತುಗಳು ನಿರ್ಮಾಣವಾಗಿ ಅವು 2256ರ ವೇಳೆಗೆ ಪರಮಾಣು ಶಸ್ತ್ರಾಸ್ತ ಹೊಂದಲಿವೆ. ಹಾಗೂ ಕೊನೆಗೆ 2341ರ ವೇಳೆಗೆ ಭೂಮಿ ಮನುಷ್ಯ ವಾಸಿಸಲು ಯೋಗ್ಯವಲ್ಲದ ಹಾಗೆ ಕಲುಷಿತವಾಗಿ ಹೋಗುತ್ತದೆ... ಇವು ಬಾಬಾ ವಂಗಾ ಭವಿಷ್ಯ. ಓದುತ್ತಿದ್ದರೆ ಪತರುಗುಟ್ಟುವಂತಾಗುತ್ತದೆ.

ಪೂರ್ತಿಯಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹನ್ನೆರಡು ರಾಶಿಗಳ ವರ್ಷಭವಿಷ್ಯದ ಆರಂಭ

ಹನ್ನೆರಡು ರಾಶಿಗಳ ವರ್ಷಭವಿಷ್ಯದ ಆರಂಭ

ದ್ವಾದಶ ರಾಶಿಗಳ ವರ್ಷ ಭವಿಷ್ಯದ ಪೈಕಿ ಮೊದಲನೆಯದು ಮೇಷ ರಾಶಿಯದು. "ಗಡಪಾರೆಯಿಂದ ತಿವಿಸಿಕೊಂಡವರಿಗೆ ಸೂಜಿಯಲ್ಲಿ ಚುಚ್ಚಿದರೆ ಯಾವ ಲೆಕ್ಕ ಹೇಳಿ? ಮೇಷ ರಾಶಿಯವರ ಸ್ಥಿತಿ ಹಾಗೆ. ಶನೈಶ್ಚರ ಈಗಿನ್ನೂ ನಿಮ್ಮ ರಾಶಿಯಿಂದ ಒಂಬತ್ತನೇ ಮನೆಗೆ ಹೋಗಿದ್ದಾನೆ. ಅಂದರೆ ಎರಡೂವರೆ- ಮೂರು ವರ್ಷಗಳ ಕಾಲ ಅನುಭವಿಸಿದ ಅನಾರೋಗ್ಯ, ಅವಮಾನ, ಸಾಲ ಬಾಧೆ ಎಲ್ಲವೂ ಕಡಿಮೆ ಆಗುತ್ತಿರುವ ಅನುಭವ ಆಗುತ್ತದೆ. ಪೆಟ್ಟು ಕೊಟ್ಟು ಬೆನ್ನು ನೆಟ್ಟಗೆ ಮಾಡಿರುವ ಶನಿಯು ಕಲಿಸಿದ ಪಾಠ ಮರೆಯಬೇಡಿ."

ಇನ್ನಷ್ಟು ವಿವರಕ್ಕೆ ಹಾಗೂ ಉಳಿದ ರಾಶಿಗಳ ಭವಿಷ್ಯ ತಿಳಿಯುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕೆಲಸ, ವೃತ್ತಿ ಹಾಗೂ ವ್ಯಾಪಾರ ವರ್ಷ ಭವಿಷ್ಯ

ಕೆಲಸ, ವೃತ್ತಿ ಹಾಗೂ ವ್ಯಾಪಾರ ವರ್ಷ ಭವಿಷ್ಯ

ಹೊಸ ವರ್ಷದಲ್ಲಿ ಈ ಕೆಲಸ ಬದಲಾಯಿಸಬೇಕು. ನಾನು ಬದಲಿಸಲೋ ಬೇಡವೋ? ನನ್ನ ಬಾಸ್ ಜತೆಗೆ ಸಿಕ್ಕಾಪಟ್ಟೆ ಜಗಳ ಆಡಿದ್ದೀನಿ ಪ್ರಮೋಷನ್ ಸಿಗುತ್ತೋ ಇಲ್ಲವೋ? ಊರಿನಲ್ಲಿನ ಆಸ್ತಿ ಮಾರಿ ಹೊಸ ವ್ಯಾಪಾರ ಶುರು ಮಾಡುವ ಆಲೋಚನೆ ಇದೆ. ಅದು ಯಶಸ್ವಿ ಆಗಬಹುದಾ? ಹೀಗೆ ಒಬ್ಬೊಬ್ಬರ ಪ್ರಶ್ನೆ ಬೇರೆ ಬೇರೆ ಥರ ಇರುತ್ತದೆ.

ಅಂಥ ಎಲ್ಲ ಪ್ರಶ್ಬೆಗೂ ಈ ಲೇಖನದಲ್ಲಿ ಉತ್ತರವಿದೆ. ಪೂರ್ತಿ ಓದುವುದಕ್ಕೆ ಕ್ಲಿಕ್ ಮಾಡಿ.

ವೋಟರ್ ಐಡಿ ಪಡೆಯುವುದು ಹೇಗೆ?

ವೋಟರ್ ಐಡಿ ಪಡೆಯುವುದು ಹೇಗೆ?

ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿದೆ. ಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು ಎಂಬುದು ಗೊತ್ತಿದ್ದರೂ, ಮತದಾರರ ಗುರುತಿನ ಚೀಟಿ(Voter Id)ಯೇ ಇಲ್ಲದೆ ಹಲವರು ಮತ ಚಲಾಯಿಸದ ಉದಾಹರಣೆಗಳಿವೆ. ಕೇವಲ ಮತ ಚಲಾವಣೆಗೆ ಮಾತ್ರವಲ್ಲದೆ ಹಲವು ಕೆಲಸಗಳಿಗೆ ವೋಟರ್ ಐಡಿಯನ್ನು ಗುರುತಿನ ಚೀಟಿಯಾಗಿ ಬಳಸಬಹುದು. 18 ವರ್ಷ ಮೀರಿದ ಪ್ರತಿಯೊಬ್ಬ ಭಾರತೀಯರೂ ಹೊಂದಿರಲೇಬೇಕಾದ ಈ ಚುನಾವಣಾ ಗುರುತಿನ ಚೀಟಿಯನ್ನು ಪಡೆಯುವುದು ಹೇಗೆ?

ಈ ಮಾಹಿತಿಯನ್ನು ತಿಳಿಸಿಕೊಡುವ ಸೊಗಸಾದ ಲೇಖನ ಇದು. ಇಲ್ಲಿ ಕ್ಲಿಕ್ ಮಾಡಿ, ಪೂರ್ತಿ ಓದಿ.

ರಾಹುಲ್ ಗಾಂಧಿ ಬದಲಾವಣೆ ಹಿಂದೆ ರಮ್ಯಾ ಮೇಡಂ

ರಾಹುಲ್ ಗಾಂಧಿ ಬದಲಾವಣೆ ಹಿಂದೆ ರಮ್ಯಾ ಮೇಡಂ

ರಾಹುಲ್ ಗಾಂಧಿಯವರು ಜನರೊಂದಿಗೆ ಸ್ಪಂದಿಸುವ ರೀತಿಯಲ್ಲಿ ಬದಲಾವಣೆ ಕಂಡಿದ್ದರೆ, ಸಾರ್ವಜನಿಕವಾಗಿ ಅವರ ವರ್ಚಸ್ಸು ವೃದ್ಧಿಯಾಗಿದ್ದೇ ಆದಲ್ಲಿ, ರಾಹುಲ್ ಅವರು ಚುನಾವಣೆ ಗೆಲ್ಲುವ ದಾರಿಯನ್ನು ಕಂಡುಕೊಂಡಿದ್ದೇ ಆದಲ್ಲಿ, ಆ ಶ್ರೇಯಸ್ಸಿನ ಅರೆಪಾವು ಕನ್ನಡ ನಟಿ, ಮಾಜಿ ಸಂಸದೆ ರಮ್ಯಾ ಅವರಿಗೂ ಸಲ್ಲಬೇಕು. ರಮ್ಯಾ ಅಕಾ ದಿವ್ಯಾ ಸ್ಪಂದನಾ ಅವರು ಕಾಂಗ್ರೆಸ್ಸಿನ ಸೋಷಿಯಲ್ ಮತ್ತು ಡಿಜಿಟಲ್ ಮೀಡಿಯಾ ತಂಡದ ನೇತೃತ್ವ ವಹಿಸಿದ ಮೇಲೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅದೃಷ್ಟದ ರೇಖೆಯೂ ಬದಲಾಗಿದೆ ಎಂಬುದನ್ನು ಅವರ ವಿರೋಧಿಗಳೂ ಅಲ್ಲಗಳೆಯಲು ಸಾಧ್ಯವಿಲ್ಲ.

ಈ ವಿಶ್ಲೇಷಣೆಯನ್ನು ಪೂರ್ತಿ ಓದುವುದಕ್ಕೆ ಕ್ಲಿಕ್ ಮಾಡಿ

ಕೆಎಸ್ ಆರ್ ಟಿಸಿ ಬಸ್ ಚಾಲಕ ಚಿನ್ನಸ್ವಾಮಿಗೆ ಚಿನ್ನದ ಪದಕ

ಕೆಎಸ್ ಆರ್ ಟಿಸಿ ಬಸ್ ಚಾಲಕ ಚಿನ್ನಸ್ವಾಮಿಗೆ ಚಿನ್ನದ ಪದಕ

ಸಮಯ ಪ್ರಜ್ಞೆಯಿಂದ 70 ಮಂದಿ ಪ್ರಯಾಣಿಕರ ಪ್ರಾಣ ಉಳಿಸಿದ್ದ ಕೆಎಸ್ ಆರ್ ಟಿಸಿ ಬಸ್ ಚಾಲಕ ಚಿನ್ನಸ್ವಾಮಿ ಅವರಿಗೆ ಚಿನ್ನದ ಪದಕ ಸಿಕ್ಕಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಾದಿಯಲ್ಲಿ ಅಕ್ಟೋಬರ್ 8 ರಂದು ಬ್ರೇಕ್ ಫೇಲ್ ಆಗಿ ಪ್ರಪಾತಕ್ಕೆ ಬೀಳಬೇಕಾಗಿದ್ದ ಬಸ್ ಅನ್ನು ಕಂಟ್ರೋಲ್ ಮಾಡಿ, ಅದರಲ್ಲಿದ್ದ 70 ಮಂದಿ ಪ್ರಯಾಣಿಕರ ಪ್ರಾಣ ಉಳಿಸಿದ್ದಕ್ಕಾಗಿ ಚಾಲಕ ಚಿನ್ನಸ್ವಾಮಿ ಅವರಿಗೆ ಕೆಎಸ್ ಆರ್ ಟಿಸಿ ಇಲಾಖೆ ಚಿನ್ನದ ಪದಕ ನೀಡಿ ಗೌರವಿಸಿದೆ.

ಧನ್ಯವಾದ ಹೇಳಿದ್ದಕ್ಕೋಸ್ಕರ ಕೆಎಸ್ಆರ್ ಟಿಸಿಯನ್ನು ಮೆಚ್ಚಲೇಬೇಕು. ಇಡಿಯಾಗಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ಕರ್ನಾಟಕ ವಿಧಾನಸಭೆ ಫಲಿತಾಂಶದ ಭವಿಷ್ಯವಾಣಿ

ಕರ್ನಾಟಕ ವಿಧಾನಸಭೆ ಫಲಿತಾಂಶದ ಭವಿಷ್ಯವಾಣಿ

ಗುಜರಾತ್ ಚುನಾವಣೆ ಫಲಿತಾಂಶದ ದಿನದಂದು ಹೀಗೆ ಆಗುತ್ತದೆ ಎಂದು ನಿಖರವಾಗಿ ಭವಿಷ್ಯ ನುಡಿದಿದ್ದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಹೇಳಿರುವ ಮತ್ತೂ ಅಚ್ಚರಿಯ ಭವಿಷ್ಯ ಇಲ್ಲಿದೆ: "ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಆಗುತ್ತದೆ. ಕಾಂಗ್ರೆಸ್-ಜೆಡಿಎಸ್ ಸೇರಿ ಸರಕಾರವನ್ನು ರಚಿಸುತ್ತವೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ. ಕಾಂಗ್ರೆಸ್ ನಿಂದ ದಿನೇಶ್ ಗುಂಡೂರಾವ್ ಉಪ ಮುಖ್ಯಮಂತ್ರಿ ಆಗುವ ಸಾಧ್ಯತೆಗಳಿವೆ".

ಪೂರ್ತಿಯಾಗಿ ಆ ಭವಿಷ್ಯದ ಬಗ್ಗೆ ಓದಲು ಕ್ಲಿಕ್ ಮಾಡಿ

ಅಚ್ಚರಿ ಹುಟ್ಟಿಸಿದ ಜಯಲಿತಾ ವಿಡಿಯೋ

ಅಚ್ಚರಿ ಹುಟ್ಟಿಸಿದ ಜಯಲಿತಾ ವಿಡಿಯೋ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಅಪೋಲೋ ಆಸ್ಪತ್ರೆ ಸೇರುವ ಮೊದಲೇ ಪ್ರಜ್ಞೆ ಕಳೆದುಕೊಂಡಿದ್ದರು, ಅವರನ್ನು ಮೊದಲೇ ಸಾಯಿಸಲಾಗಿತ್ತು ಎಂಬಿತ್ಯಾದಿ ಮಾತುಗಳಿಗೆ ಬೀಗ ಜಡಿಯುವಂಥ ವಿಡಿಯೋವೊಂದನ್ನು ಶಶಿಕಲಾ ಬಣ ಬಿಡುಗಡೆ ಮಾಡಿದೆ. ಜಯಲಲಿತಾ ಅವರನ್ನು ಶಶಿಕಲಾ ಮೊದಲೇ ಸಾಯಿಸಿ, ನಂತರ ಅವರನ್ನು ಆಸ್ಪತ್ರೆಗೆ ಸೇರಿಸಿ ನಾಟಕವಾಡಿದ್ದರು ಎಂದು ಶಶಿಕಲಾ ವಿರೋಧಿಗಳು ಆರೋಪಿಸಿದ್ದರು. ಇದೀಗ ಟಿಟಿವಿ ದಿನಕರನ್ ಬಣ ಬಿಡುಗಡೆ ಮಾಡಿರುವ ಈ ವಿಡಿಯೋ, ಶಶಿಕಲಾ ವಿರೋಧಿಗಳು ದಂಗಾಗುವಂತೆ ಮಾಡಿದೆ.

ಈ ವರದಿ ಪೂರ್ಣ ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ

ಪತ್ರಕರ್ತ ರವಿ ಬೆಳಗೆರೆ ಪಯಣ

ಪತ್ರಕರ್ತ ರವಿ ಬೆಳಗೆರೆ ಪಯಣ

ಬಳ್ಳಾರಿ ಸತ್ಯನಾರಾಯಣ ಪೇಟೆಯ ಬಿ.ರವಿ ಎಂಬ ಎಸ್ಸೆಸ್ಸೆಲ್ಸಿ ಫೇಲಾದ ಹುಡುಗ ಏರಿದ ಎತ್ತರ, ಕಂಡ ಪಾತಾಳ ಕಡಿಮೆ ಏನಲ್ಲ. 1995ರಲ್ಲಿ ವಿದ್ಯಾಪೀಠ ಸರ್ಕಲ್ ನ ಒಂದು ಪುಟ್ಟ ಅಂಗಡಿಯೊಂದರಲ್ಲಿ ಶುರುವಾದ ಹಾಯ್ ಬೆಂಗಳೂರ್ ವಾರಪತ್ರಿಕೆಯನ್ನು ಬೆಂಗಳೂರಿನ ಗಡಿ ಕೂಡ ದಾಟಿಸುವ ಉದ್ದೇಶ ರವಿ ಬೆಳಗೆರೆ ಅವರಿಗೆ ಇರಲಿಲ್ಲ. ಆದರೆ ಆ ಪತ್ರಿಕೆ ಕರ್ನಾಟಕದಲ್ಲಿ ಮನೆ ಮಾತಾಯಿತು. ರವಿ ಬೆಳಗೆರೆ ಎಂಬ ಪತ್ರಕರ್ತ ಅದೆಷ್ಟೋ ಸಾವಿರ ಮಂದಿಯ ಕಣ್ಣಿಗೆ ಬೆರಗಿನಂತೆ ಕಂಡರು.

ಸಹೋದ್ಯೋಗಿಯ ಹತ್ಯೆಗೆ ಸುಪಾರಿ ನೀಡಿದ್ದರು ಎಂಬ ಆರೋಪ ಹೊತ್ತಿರುವ ಪತ್ರಕರ್ತ ರವಿ ಬೆಳಗೆರೆ ಅವರ ಪಯಣದ ಲೇಖನ. ಪೂರ್ಣ ಓದಿ, ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is the list of highest read One India Kannada article in December.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ