ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಬಣ್ಣ ಬಯಲು ಮಾಡಲಿದೆ ಸುಪ್ರೀಂ ಕೋರ್ಟ್

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್ 31 : ಇಡೀ ದೇಶವನ್ನು ಆವರಿಸಿಕೊಂಡಿರುವ ಆಧಾರ್ ಕಾರ್ಡ್ ಜ್ವರವನ್ನು ಭಾರತದ ಸರ್ವೋಚ್ಚ ನ್ಯಾಯಾಲಯ ಸದ್ಯದಲ್ಲಿಯೇ ಬಿಡಿಸಲಿದೆಯೆ? ಆಧಾರ್ ಕಾರ್ಡಿಗೆ ಸಂಬಂಧಿಸಿದಂತೆ ಹೀಗೊಂದು ಪ್ರಶ್ನೆ ಕಾಡಿದರೂ ಅಚ್ಚರಿಯಿಲ್ಲ.

'ಖಾಸಗಿತನದ ಹಕ್ಕು' ವಿಷಯಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಐತಿಹಾಸಿಕ ವಾದ ಮಂಡಿಸಿದ ವಕೀಲ ಎಸ್ ಪ್ರಸನ್ನ ಅವರು ಈ ಬಗ್ಗೆ ಸುಳಿವು ನೀಡಿದ್ದು, ಒನ್ಇಂಡಿಯಾ ಜೊತೆ ನಡೆಸಿದ ಸಂದರ್ಶನದಲ್ಲಿ, ಆಧಾರ್ ಯೋಜನೆಯ ಹಿಂದಿನ ಎಲ್ಲ ಪೊಳ್ಳುಗಳನ್ನು ಸರ್ವೋಚ್ಚ ನ್ಯಾಯಾಲಯ ಬಯಲು ಮಾಡಲಿದೆ ಎಂದಿದ್ದಾರೆ.

High possibility of Aadhaar Scheme being invalidated, says Lawyer Prasanna

ಆಗಸ್ಟ್ 24ರಂದು ಭಾರತದ ಸರ್ವೋಚ್ಚ ನ್ಯಾಯಾಲಯದ 9 ನ್ಯಾಯಮೂರ್ತಿಗಳಿರುವ ನ್ಯಾಯಪೀಠ ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಎಂದು ಮಹತ್ವದ ತೀರ್ಪು ನೀಡಿದ್ದು, ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

ನೆನಪಿಡಿ, ಆಧಾರ್-ಪ್ಯಾನ್ ಜೋಡಣೆಗೆ ಆ.31 ಕೊನೆಯ ದಿನಾಂಕನೆನಪಿಡಿ, ಆಧಾರ್-ಪ್ಯಾನ್ ಜೋಡಣೆಗೆ ಆ.31 ಕೊನೆಯ ದಿನಾಂಕ

ಪ್ರ : ಸಂವಿಧಾನದ ಭಾಗ 3 ಮತ್ತು ಅನುಚ್ಛೇದ 21ರ ಪ್ರಕಾರ ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿರುವ ಹಿನ್ನೆಲೆಯಲ್ಲಿ, ಆಧಾರ್ ಬಳಸಿಕೊಂಡು ಕಲೆಹಾಕಿರುವ ಮಾಹಿತಿ ಮತ್ತು ದತ್ತಾಂಶವನ್ನು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ?

ಪ್ರಸನ್ನ : ಖಾಗಸಗಿತನದ ಹಕ್ಕು ಮೂಲಭೂತ ಹಕ್ಕು ಎಂದು ಮಾತ್ರ ಸರ್ವೋಚ್ಚ ನ್ಯಾಯಾಲಯ ಹೇಳಿದ್ದರೂ, ಆ ಹಕ್ಕಿನ ಮೇಲಿನ ನಿರ್ಬಂಧ ಅತ್ಯಂತ ತೆಳುವಾಗಿರಬೇಕು ಎಂದೂ ಹೇಳಿದೆ. ಎಲ್ಲದಕ್ಕೂ ಕಾನೂನು ಇರಲೇಬೇಕು. 2016ರವರೆಗೆ ಆಧಾರ್ ಯೋಜನೆಗೆ ಯಾವುದೇ ಶಾಸನಬದ್ಧ ಬೆಂಬಲವಿರಲಿಲ್ಲ. ಆದ್ದರಿಂದ 2016ಕ್ಕಿಂತ ಮೊದಲು ಸಂಗ್ರಹಿಸಿರುವ ಎಲ್ಲ ಮಾಹಿತಿಯನ್ನು ನಾಶಪಡಿಸಬೇಕು. ದತ್ತಾಂಶ ರಕ್ಷಣಾ ಕಾಯ್ದೆ ಸದ್ಯದಲ್ಲೇ ಭಾರತಕ್ಕೆ ಸಿಗಲಿದೆ ಎಂದ ಅವರು, ಇದಕ್ಕಾಗಿ ಸಮಿತಿ ರಚಿಸಲಾಗುತ್ತಿದೆ.

ಖಾಸಗಿತನ ಮೂಲಭೂತ ಹಕ್ಕಿನ ಭಾಗ : ಅಪ್ಪ, ಮಗನ ತೀರ್ಪು ಏನು?ಖಾಸಗಿತನ ಮೂಲಭೂತ ಹಕ್ಕಿನ ಭಾಗ : ಅಪ್ಪ, ಮಗನ ತೀರ್ಪು ಏನು?

ಪ್ರ : ಆಧಾರ್ ಯೋಜನೆಗೆ ಸಮರ್ಥನೆಯಾಗಿ, ಶ್ರೀಮಂತರ ಖಾಸಗಿತನದ ಹಕ್ಕಿಗಿಂತ ಬಡವರ ಜೀವನದ ಹಕ್ಕು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂದು ಕೇಂದ್ರ ಹೇಳಿದೆ. ಆದರೆ, ಇತ್ತೀಚಿನ ತೀರ್ಪಿನಿಂದ ಸುಪ್ರೀಂ ಕೋರ್ಟ್ ಮತ್ತು ಕೇಂದ್ರದ ನೀತಿ ತದ್ವಿರುದ್ಧವಾಗಿವೆ. ಇದನ್ನು ಪರಿಹರಿಸಲು ಹೇಗೆ ಸಾಧ್ಯ? ಅಥವಾ ಕೇಂದ್ರ ತನ್ನ ಆಧಾರ್ ಯೋಜನೆಯ ಪರವೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆಯೆ?

ಪ್ರಸನ್ನ : ಇದು ನಿಜಕ್ಕೂ ಅಪಹಾಸ್ಯದ ಸಂಗತಿ. ಖಾಸಗಿತನದ ಹಕ್ಕು ಮೂಲಭೂತವಾದದ್ದು, ಬಡವರು ತಮಗೆ ಖಾಸಗಿತನ ಬೇಡವೆಂದು ಎಂದೂ ಹೇಳಿಲ್ಲ. ಆದರೆ ಸರಕಾರವೇ ಬಡತನ ಅಥವಾ ಖಾಸಗಿತನ ಎರಡರಲ್ಲೊಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಬಡವರನ್ನು ಬಲಾತ್ಕರಿಸುತ್ತಿದೆ. ಸರಕಾರಕ್ಕೆ ಬಡತನ ಅಥವಾ ಖಾಸಗಿತನ ಅಥವಾ ಎರಡರ ಅರ್ಥವೇ ಗೊತ್ತಿಲ್ಲವೆಂದು ಕಾಣುತ್ತದೆ. ಶ್ರೀಮಂತರು ಸಮಾನತೆಯ ಹಕ್ಕನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹಲವರು ತಿಳಿದಿದ್ದಾರೆ. ಆದರೆ ವಾಸ್ತವಾಂಶ ಬೇರೆಯೇ ಇದೆ.

ಖಾಸಗಿತನ ಕುರಿತ ಸುಪ್ರೀಂ ತೀರ್ಪು, ಆಧಾರ್ ಕತೆ ಏನು?ಖಾಸಗಿತನ ಕುರಿತ ಸುಪ್ರೀಂ ತೀರ್ಪು, ಆಧಾರ್ ಕತೆ ಏನು?

ಪ್ರ : ಸರ್ವೋಚ್ಚ ನ್ಯಾಯಾಲಯ ನಾಗರಿಕರ ಲೈಂಗಿಕ ಖಾಸಗಿತನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದು, ಇದರ ಪ್ರಕಾರ, ಭವಿಷ್ಯದಲ್ಲಿ ಸೆಕ್ಷನ್ 377 ಅನ್ನು ಅನೂರ್ಜಿತಗೊಳಿಸುವ ಸಾಧ್ಯತೆ ಇದೆಯಾ?

ಪ್ರಸನ್ನ : ಆ ನಿಯಮವನ್ನೇ ಅನೂರ್ಜಿತಗೊಳಿಸುವ ಅಥವಾ ಅಮಾನ್ಯ ಮಾಡುವ ಸಾಧ್ಯತೆ ದಿಟ್ಟವಾಗಿದೆ. ಒಳ್ಳೆಯ ಸಂಗತಿಯೆಂದರೆ, ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದನ್ನು ನ್ಯಾಯಾಲಯಕ್ಕೆ ನೀಡಲಾಗಿದೆ, ಸಂಸತ್ತಿಗಲ್ಲ. ಇದು ಸಂಭ್ರಮಾಚರಣೆಯ ಸಂಗತಿಯೂ ಹೌದು.

ಪ್ರ : ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕೆಂದು ಪ್ರತಿಪಾದಿಸಿರುವ ಸರ್ವೋಚ್ಚ ನ್ಯಾಯಾಲಯ ಏನಾದರೂ ನಿರ್ಬಂಧ ಹೇರಿದೆಯೆ? ಇದರೆ, ಅವಾವುವು?

ಪ್ರಸನ್ನ : ಯಾವುದೇ ವ್ಯಕ್ತಿಯ ಮೇಲೆ ನಿರ್ಬಂಧ ಹೇರುವಾಗ ಸರಕಾರ ವಸ್ತುನಿಷ್ಠತೆ, ವಾಸ್ತವಿಕತೆ ಮತ್ತು ಸಕಾರಣದ ಪರೀಕ್ಷೆಯನ್ನು ಪಾಸ್ ಮಾಡಲೇಬೇಕು.

ಪ್ರ : ಈ ತೀರ್ಪು ಬಂದ ನಂತರ ಈಬಗೆಯ ಇತರ ಕೇಸ್ ಅಥವಾ ಇತರ ತೀರ್ಪುಗಳ ಮೇಲೆ ಪರಿಣಾಮ ಬೀರುತ್ತದೆ?

ಪ್ರಸನ್ನ : ಈ ತೀರ್ಪಿನಿಂದ ಹಲವಾರು ಯೋಜನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದರೆ, ಇನ್ನೂ ಹಲವಾರು ವಿಷಯಗಳ ಬಗ್ಗೆಯೂ ಮುಂದೆ ನೋಡಬಹುದು. ಉದಾಹರಣೆಗೆ ಡಿಎನ್ಎ ಪ್ರೊಫೈಲಿಂಗ್ ಬಿಲ್ ಮೇಲೆ ಪರಿಣಾಮ ಬೀರಬಹುದು.

English summary
In an exclusive interview to Oneindia, lawyer Prasanna S, one of the lawyers who argued the historic verdict of Right to Privacy said that with the verdict, the Supreme Court has completely debunked the idea behind Aadhaar scheme. He says, High possibility of Aadhaar Scheme being invalidated. ಆಧಾರ್ ಬಣ್ಣ ಬಯಲು ಮಾಡಲಿದೆ ಸುಪ್ರೀಂ ಕೋರ್ಟ್
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X