ದೆಹಲಿಯಲ್ಲಿ ಐಸ್ಐಎಸ್ ಉಗ್ರರು: ರಾಜಧಾನಿಯಲ್ಲಿ ಹೈ ಅಲರ್ಟ್

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಮಾರ್ಚ್9: ಇಸ್ಲಾಮಿಕ್ ಸ್ಟೇಟ್ (ಐಎಸ್ಐಎಸ್) ಉಗ್ರ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ದೆಹಲಿಯಲ್ಲಿ ಅಡಗಿದ್ದಾರೆಂದು ಗುಪ್ತಚರ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಮಂಗಳವಾರ ರಾತ್ರಿ ನಡೆದಿದ್ದ ಲಕನೌ ಎನ್ ಕೌಂಟರ್ ನಲ್ಲಿ ಈ ಇಬ್ಬರೂ ಉಗ್ರರು ತಪ್ಪಿಸಿಕೊಂಡಿದ್ದು, ಈ ಇಬ್ಬರೂ ದೆಹಲಿಗೆ ಓಡಿಬಂದಿದ್ದಾರೆಂದು ಗುಪ್ತಚರ ಇಲಾಖೆ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.[ದೇಶದ್ರೋಹಿ ಮಗನ ಶವ ನಮಗೆ ಬೇಡ: ಉಗ್ರ ಸೈಫುಲ್ಲಾ ತಂದೆ]

Hi alert in Delhi as intelligence report says two suspects of ISIS may be hiding in capital

ಇದಲ್ಲದೆ, ಓಡಿ ಬಂದಿರುವ ಉಗ್ರರು ದೆಹಲಿ ಮಾತ್ರವಲ್ಲದೆ, ಪವಿತ್ರ ಧಾರ್ಮಿಕ ಕ್ಷೇತ್ರಗಳಾದ ಸಾರಾನಾಥ್, ವಾರಣಾಸಿ, ಬಾರಾಬಂಕಿಯಲ್ಲಿನ ಪವಿತ್ರ ಸ್ಥಳಗಳ ಮೇಲೆ ದಾಳಿ ನಡೆಸುವ ಸಂಚನ್ನು ಹೊಂದಿದ್ದಾರೆಂದು ಇಲಾಖೆ ತಿಳಿಸಿದೆ.[ಸಾಯೋ ಮೊದಲು ಅಣ್ಣ ಹೇಳಿದಂತೆ ಕೇಳಿದ್ರೆ ಆ ಉಗ್ರ ಉಳಿಯುತ್ತಿದ್ದ!]

ಈ ಹಿನ್ನೆಲೆಯಲ್ಲಿ ರಾಜಧಾನಿಯೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದ್ದು, ದೆಹಲಿಯ ಆಸುಪಾಸಿನ ನಗರಗಳಾದ ನೊಯ್ಡಾ, ಗಾಜಿಯಾಬಾದ್ ಹಾಗೂ ಗುರುಗ್ರಾಮಗಳಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two suspects believed to be part of the Islamic State may be hiding in Delhi, Intelligence Bureau reports suggest. They have escaped during the encounter that broke out at Lucknow on Tuesday, IB officials have warned.
Please Wait while comments are loading...