ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಸಿಂಹಗಳಿಂದ ಒಡೆಯನನ್ನು ಕಾಪಾಡಿದ ನಿಯತ್ತಿನ ನಾಯಿ

|
Google Oneindia Kannada News

ಅಮ್ರೇಲಿ, ಜುಲೈ 23: ಮೂರು ಸಿಂಹಗಳ ದಾಳಿಗೆ ಒಳಗಾದ ಒಡೆಯನನ್ನು ನಾಯಿಯೊಂದು ಕಾಪಾಡಿ ನಿಯತ್ತು ಮೆರೆದ ಘಟನೆ ಗುಜರಾತಿನ ಅಮ್ರೇಲಿಯಲ್ಲಿ ನಡೆದಿದೆ.

ಗುಜರಾತಿನ ಅಮ್ರೇಲಿಯ ಅಮಾರ್ಡಿ ಗ್ರಾಮದಲ್ಲಿ ಭಾವನೇಶ್ ಹಮೀರ್ ಭಾರ್ವಾಡ್(25) ವ್ಯಕ್ತಿಯೊಬ್ಬ ಕುರಿಕಾಯುತ್ತಿದ್ದ ಸಂದರ್ಭದಲ್ಲಿ ಕುರಿಗಳ ಮೇಲೆ ಮೂರು ಸಿಂಹಗಳ ಗುಂಪು ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ತನ್ನ ಕುರಿಗಳನ್ನು ಉಳಿಸಿಕೊಳ್ಳಲು ಮುಂದಾದ ವ್ಯಕ್ತಿಯ ಮೇಲೆ ಮೂರೂ ಸಿಂಹಗಳೂ ದಾಳಿ ನಡೆಸಿವೆ.

ಮಾಲಕಿಯ ರಕ್ಷಿಸಲು ಹೋಗಿ ಪ್ರಾಣ ನೀಗಿಕೊಂಡ ನಾಯಿಮಾಲಕಿಯ ರಕ್ಷಿಸಲು ಹೋಗಿ ಪ್ರಾಣ ನೀಗಿಕೊಂಡ ನಾಯಿ

ಈ ಸಂದರ್ಭದಲ್ಲಿ ಆತನೊಂದಿಗಿದ್ದ ಸಾಕು ನಾಯಿ ರಸ್ತೆ ಬದಿಯಲ್ಲಿ ನಿಂತು ಜೋರಾಗಿ ಬೊಗಳಿ ಜನರಿಗೆ ಅಪಾಯದ ಸೂಚನೆ ನೀಡಿದೆ. ನಾಯಿ ಬೊಗಳುತ್ತಿರುವುದನ್ನು ಕಂಡು ಜನರು ಏನೋ ಅಪಾಯವಿದೆ ಎಂದು ಓಡಿ ಬಂದಿದ್ದಾರೆ. ಎಷ್ಟೋ ಸಮಯ ನಾಯಿ ಬೊಗಳುತ್ತ, ಸಿಂಹಗಳನ್ನೂ ಹೆದರಿಸಲು ಪ್ರಯತ್ನಿಸಿದೆ. ಈ ಸಂದರ್ಭದಲ್ಲಿ ಜನರ ಗುಂಪು ಓಡಿಬಂದು ಸಿಂಹಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದೆ. ಸಣ್ಣ ಪುಟ್ಟ ಗಾಯಗಳಾಗಿರುವುದು ಬಿಟ್ಟರೆ ಭಾವನೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Hero dog saves owner from lions in Gujarats Amreli

ಒಡತಿ ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸಿದ ನಿಯತ್ತಿನ ನಾಯಿ! ಒಡತಿ ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸಿದ ನಿಯತ್ತಿನ ನಾಯಿ!

ಇಂದು ನಾನು ಬದುಕಿದ್ದೇನೆ ಅಂದ್ರೆ ಅದಕ್ಕೆ ನನ್ನ ನಾಯಿಯೇ ಕಾರಣ ಎಂದು ಹೆಮ್ಮೆಯಿಂದ ಹೇಳುತ್ತಾರೆ ಭಾವನೇಶ್.

English summary
Dogs prove time and time again that they are man's best friend. When a man was attacked by three lions in Amreli's Ambardi village in Gujarat, his dog knew exactly what to do.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X