ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಹೀರೋ ಸೈಕಲ್ ಉದ್ಯಮ ಪಿತಾಮಹ ಇನ್ನಿಲ್ಲ

By Vanitha
|
Google Oneindia Kannada News

ಲುಧಿಯಾನ, ಆಗಸ್ಟ್, 13 : ಭಾರತದ ಸೈಕಲ್ ಉದ್ಯಮ ಪಿತಾಮಹ, ಹೀರೋ ಸೈಕಲ್ ಮಾಲೀಕ, ಓಂ ಪ್ರಕಾಶ್ ಮುಂಜಲ್ ಗುರುವಾರ ಲುಧಿಯಾನದಲ್ಲಿ (ಪಂಜಾಬ್) ನಿಧನರಾಗಿದ್ದಾರೆ.

ಕೆಲವು ದಿನಗಳ ಹಿಂದೆ ಮೆದುಳಿನ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಇವರು ಲುಧಿಯಾದಲ್ಲಿರುವ ದಯಾನಂದ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ಮಂಜಲ್ (86) ಬೆಳಗ್ಗೆ 10.30 ವೇಳೆಗೆ ಇಹಲೋಕ ತ್ಯಜಿಸಿದ್ದಾರೆ.[ಮೈಸೂರು: ಸರಳ ಸಜ್ಜನ ಪತ್ರಕರ್ತ ಕೃಷ್ಣ ವಟ್ಟಂ ವಿಧಿವಶ]

Hero cycle company owner Om Prakash Munjal is died in Ludhiana, Panjab on Thursday

1944ರಲ್ಲಿ ಮಂಜಲ್ ತಮ್ಮ ಸಹೋದರರ ಜೊತೆಗೂಡಿ ಅಮೃತಸರದಲ್ಲಿ ಸೈಕಲ್ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದರು. ಬಳಿಕ ಇವರೇ ಸ್ವಯಂ ಆಗಿ 1955ರಲ್ಲಿ ಲುಧಿಯಾನದಲ್ಲಿ ಹೀರೋ ಸೈಕಲ್ ತಯಾರಿಕೆ ಕಾರ್ಖಾನೆ ಸ್ಥಾಪಿಸಿದರು. ಸೈಕಲ್ ಉತ್ಪಾದನೆ ಮಾಡುತ್ತಿದ್ದವರು, ಬಳಿಕ ಸೈಕಲ್ ಕಂಪನಿಗೆ ಒಡೆಯರಾದರು.

1986ರಲ್ಲಿ ವಿಶ್ವದಲ್ಲೇ ಅತಿಹೆಚ್ಚು ಸೈಕಲ್ ಉತ್ಪಾದನೆ ಮಾಡುವ ಕಂಪನಿ ಎಂಬ ಹೆಗ್ಗಳಿಕೆಯೊಂದಿಗೆ ಹೀರೋ ಸೈಕಲ್ ಕಂಪನಿ ಹೆಸರು ಗಿನ್ನಿಸ್ ದಾಖಲೆಯಲ್ಲಿ ಸೇರ್ಪಡೆಯಾಗಿದೆ. 2012ರಲ್ಲಿ 13 ಕೋಟಿ ಅಂದರೆ ಸುಮಾರು 48% ಮಂದಿ ಇಂದಿಗೂ ಹೀರೋ ಸೈಕಲ್ ಬಳಕೆ ಮಾಡುತ್ತಿದ್ದಾರೆ.

English summary
Hero cycle company owner Om Prakash Munjal is died in Ludhiana, Panjab on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X