ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾ.31ರೊಳಗೆ ಪ್ಯಾನ್- ಆಧಾರ್ ಜೋಡಣೆಯಾಗದಿದ್ದರೆ ಭಾರಿ ದಂಡ ಬೀಳಲಿದೆ!

|
Google Oneindia Kannada News

ನವದೆಹಲಿ, ಮಾರ್ಚ್ 2: ಪ್ಯಾನ್ ಕಾರ್ಡ್ ಬಳಕೆದಾರರು ಮಾರ್ಚ್ 31ರೊಳಗೆ ಪ್ಯಾನ್ ಕಾರ್ಡ್‌ಗೆ ಆಧಾರ್ ಗುರುತಿನ ಸಂಖ್ಯೆಯನ್ನು ಜೋಡಿಸಬೇಕು ಎಂದು ಸಿಬಿಡಿಟಿ ಸ್ಪಷ್ಟಪಡಿಸಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿಆಧಾರ್ ಜೊತೆ ಪಾನ್ ಲಿಂಕ್ ಆಗಿಲ್ಲದಿದ್ದಲ್ಲಿ ಭಾರಿ ದಂಡ ಕಟ್ಟಬೇಕಾಗುತ್ತದೆ. ಆರ್ಥಿಕ ವ್ಯವಹಾರಗಳಿಗೆ ಈ ಜೋಡಣೆ ಕಡ್ಡಾಯವಾಗಿದ್ದು, ತಪ್ಪಿದ್ದಲ್ಲಿ 10,000 ರು ದಂಡ ತೆರಬೇಕಾಗುತ್ತದೆ.

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139 ಎಎ(2) ಪ್ರಕಾರ ಎಲ್ಲಾ ಪ್ಯಾನ್ ಕಾರ್ಡ್ ಬಳಕೆದಾರರು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಿಸಬೇಕು ಎಂದು 2017ರ ಜುಲೈ 1ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಆಧಾರ್ ಜೋಡಣೆ ಪ್ರಕ್ರಿಯೆ ಸಂವಿಧಾನಾತ್ಮಕವಾಗಿದೆ, ತೆರಿಗೆದಾರರ ಹಕ್ಕುಗಳ ಉಲ್ಲಂಘನೆ ಪ್ರಶ್ನೆ ಉದ್ಭವವಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಆನ್​ಲೈನ್ ನಲ್ಲಿ ಆಧಾರ್ ಮೂಲಕ ಇ-ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?ಆನ್​ಲೈನ್ ನಲ್ಲಿ ಆಧಾರ್ ಮೂಲಕ ಇ-ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?

ಸಿಬಿಡಿಟಿಯು ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಮಿಸ್ ಮ್ಯಾಚ್ ವಿಧಾನವನ್ನು ಸೂಚಿಸಿದೆ. ನೀವು ಪ್ಯಾನ್ ವಿತರಕ ಬಳಿ ತೆರಳಿ ಸಂಬಂಧಿಸಿದ ಪ್ಯಾನ್ ಮತ್ತು ಆಧಾರ್ ದಾಖಲಾತಿಯ ಪ್ರತಿಗಳನ್ನು ಸಲ್ಲಿಸಿ ಲಿಂಕ್ ಮಾಡಬಹುದು. ಪ್ಯಾನ್ ವಿವರ ಬದಲಾವಣೆಗೆ 110 ರೂ, ಶುಲ್ಕವಿರುತ್ತದೆ. ಆಧಾರ್ ವಿವರ ಪರಿಷ್ಕರಣೆಗೆ 25 ರೂ, ಶುಲ್ಕವಿರುತ್ತದೆ.

Here is why PAN card holders could be fined Rs 10,000 for not linking it with Aadhaar by Mar 31

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 272 ಬಿ ಅಡಿಯಲ್ಲಿ ನಿಗದಿತ ಗಡುವು ಮುಗಿದ ನಂತರ ಪಾನ್ ಜೊತೆ ಆಧಾರ್ ಲಿಂಕ್ ಆಗಿಲ್ಲವೆಂದರೆ ಅಂಥ ಪಾನ್ ಕಾರ್ಡನ್ನು ನಿಷ್ಕ್ರಿಯಗೊಳಿಸಲಾಗುವುದು, ಯಾವುದೇ ವ್ಯವಹಾರಕ್ಕೂ ಬಳಸಲು ಸಾಧ್ಯವಾಗುವುದಿಲ್ಲ.

ಸದ್ಯದ ಮಾಹಿತಿಯಂತೆ ಸುಮಾರು 120 ಕೋಟಿ ಆಧಾರ್ ಸಂಖ್ಯೆಗಳನ್ನು ನೀಡಲಾಗಿತ್ತು, 41 ಕೋಟಿ ಪ್ಯಾನ್ ನಂಬರ್ ವಿತರಣೆಯಾಗಿದೆ. ಆದರೆ, ಈ ಪೈಕಿ 22 ಕೋಟಿ ಪ್ಯಾನ್- ಆಧಾರ್ ಮಾತ್ರ ಜೋಡಣೆಯಾಗಿದೆ.

English summary
If you fail to link your PAN card with Aadhaar card within the deadline of March 31, then be ready to cough up a fine of Rs 10,000 on providing inoperative PAN for a financial transaction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X