ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಲೈಂಗಿಕತೆ: ಕೌಟುಂಬಿಕ ಆರೋಗ್ಯ ಸಮೀಕ್ಷೆ ಹೇಳುವುದು ಹೀಗೆ

By Sachhidananda Acharya
|
Google Oneindia Kannada News

ನವದೆಹಲಿ, ಮೇ 25: ಒಂದೊಮ್ಮೆ ನೀವು 30 ವರ್ಷ ದಾಟಿಯೂ ಲೈಂಗಿಕ ಅನುಭವ ಪಡೆಯದೇ ಇದ್ದಲ್ಲಿ, ಭಾರತದಲ್ಲಿ ನಿಮ್ಮ ಗುಂಪು ತೀರಾ ಸಣ್ಣದು. ಕಾರಣ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ಪ್ರಕಾರ ಭಾರದಲ್ಲಿ 30 ವರ್ಷ ದಾಟುವ ಹೊತ್ತಿಗೆ ಶೇಕಡಾ 90 ಜನ ಲೈಂಗಿಕ ಸಂಪರ್ಕ ಹೊಂದಿರುತ್ತಾರೆ.

30 ವರ್ಷ ದಾಟಿಯೂ ಭಾರತದಲ್ಲಿ ಲೈಂಗಿಕ ಅನುಭವ ಪಡೆಯದೇ ಇರುವ ಜನರ ಸಂಖ್ಯೆ ಕೇವಲ ಶೇಕಡಾ 10 ಮಾತ್ರ.

ಮಹಿಳೆಯರಲ್ಲಿ ಮದುವೆ ಮುಂಚಿನ ಲೈಂಗಿಕತೆ : ಕಾಂಡೋಮ್ ಬಳಕೆ ಹೆಚ್ಚಳಮಹಿಳೆಯರಲ್ಲಿ ಮದುವೆ ಮುಂಚಿನ ಲೈಂಗಿಕತೆ : ಕಾಂಡೋಮ್ ಬಳಕೆ ಹೆಚ್ಚಳ

2015-16ರಲ್ಲಿ ದೇಶದಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಹಲವು ಆಸಕ್ತಿಕರ ವಿಚಾರಗಳನ್ನು ಈ ಸರ್ವೆ ಹೊರಹಾಕಿದೆ. ಅವುಗಳ ವಿವರ ಇಲ್ಲಿದೆ.

 ಮೊದಲ ಲೈಂಗಿಕ ಸಂಪರ್ಕ

ಮೊದಲ ಲೈಂಗಿಕ ಸಂಪರ್ಕ

ಸಮೀಕ್ಷೆ ಪ್ರಕಾರ ಹೆಚ್ಚಿನ ಪುರುಷರು 20-24 ನೇ ವಯಸ್ಸಿನಲ್ಲಿ ತಮ್ಮ ಮೊದಲ ಲೈಂಗಿಕ ಸಂಪರ್ಕ ನಡೆಸಿರುತ್ತಾರೆ. ಮಹಿಳೆಯರ ವಿಚಾರಕ್ಕೆ ಬಂದಾಗ 15 - 19 ವಯಸ್ಸಲ್ಲಿ ಮೊದಲ ಬಾರಿಗೆ ಸೆಕ್ಸ್ ನಡೆಸಿರುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಮಹಿಳೆಯರು ಬೇಗ ಮದುವೆಯಾಗುವುದೇ ಈ ವಯಸ್ಸಿನ ಅಂತರಕ್ಕೆ ಕಾರಣ ಎನ್ನಲಾಗಿದೆ.

ಚಿತ್ರ ಕೃಪೆ: ಲೈವ್ ಮಿಂಟ್

 ಶೈಕ್ಷಣಿಕ ಕಾರಣಗಳಿಗೆ ವ್ಯತ್ಯಾಸ

ಶೈಕ್ಷಣಿಕ ಕಾರಣಗಳಿಗೆ ವ್ಯತ್ಯಾಸ

ಭಾರತದಲ್ಲಿ ಲೈಂಗಿಕತೆ ಶಿಕ್ಷಣದ ಮೇಲೆ ವ್ಯತ್ಯಾಸ ಹೊಂದುವುದನ್ನು ಕಾಣಬಹುದಾಗಿದೆ. ಉನ್ನತ ಶಿಕ್ಷಣ ಪಡೆದವರು ಕಾಲೇಜಿನಲ್ಲಿ ಹೆಚ್ಚಿನ ವರ್ಷಗಳನ್ನು ಕಳೆಯುವುದರಿಂದ ತುಂಬಾ ತಡವಾಗಿ ಗೃಹಸ್ಥಾಶ್ರಮ ಪ್ರವೇಶಿಸುತ್ತಾರೆ. ಹೀಗಾಗಿ ಇವರಲ್ಲಿ ದೈಹಿಕ ಸಂಪರ್ಕವೂ ತಡವಾಗಿಯೇ ನಡೆಯುತ್ತದೆ. ಅದರಲ್ಲೂ ಉನ್ನತ ಶಿಕ್ಷಣ ಪಡೆದ ಪುರುಷರು ತೀರಾ ತಡವಾಗಿ ಮದುವೆಯಾಗುತ್ತಾರೆ ಎಂಬುದನ್ನು ಸಮೀಕ್ಷೆ ಹೇಳುತ್ತಿದ್ದು, ಅವರ ಲೈಂಗಿಕ ಜೀವನವೂ ತಡವಾಗಿಯೇ ಆರಂಭವಾಗುತ್ತದೆ.

ಚಿತ್ರ ಕೃಪೆ: ಲೈವ್ ಮಿಂಟ್

ವಿವಾಹ ಪೂರ್ವ ಲೈಂಗಿಕ ಸಂಪರ್ಕ

ವಿವಾಹ ಪೂರ್ವ ಲೈಂಗಿಕ ಸಂಪರ್ಕ

ದೇಶದಲ್ಲಿ ಇನ್ನೂ ವಿವಾಹ ಪೂರ್ವ ಲೈಂಗಿಕ ಸಂಪರ್ಕವನ್ನು ಅಪರಾಧವಾಗಿ, ಮೈಲಿಗೆಯಂತೆ ನೋಡಲಾಗುತ್ತಿದೆ. ಒಂಟಿಯಾಗಿರುವ ಶೇಕಡಾ 11 ಪುರುಷರು ಮತ್ತು ಶೇಕಡಾ 2 ಮಹಿಳೆಯರು ಮಾತ್ರ 15-24 ವರ್ಷದೊಳಗೆ ಲೈಂಗಿಕ ಸಂಪರ್ಕ ಪಡೆದಿದ್ದೇವೆ ಎಂದು ಹೇಳಿದ್ದಾರೆ. ವಿಶೇಷವೆಂದರೆ ಛತ್ತಿಸ್ ಗಢ ಮತ್ತು ಮಧ್ಯ ಪ್ರದೇಶದಲ್ಲಿ ಕ್ರಮವಾಗಿ ಬರೋಬ್ಬರಿ ಶೇಕಡಾ 21.1 ಮತ್ತು ಶೇಕಡಾ 20.7 ಪುರುಷರು ಮದುವೆ ಆಗದೆಯೂ ದೈಹಿಕ ಸಂಪರ್ಕ ಪಡೆದಿದ್ದೇವೆ ಎಂದಿದ್ದಾರೆ.

ಚಿತ್ರ ಕೃಪೆ: ಲೈವ್ ಮಿಂಟ್

 ಉತ್ತರದವರು ಮುಂದೆ

ಉತ್ತರದವರು ಮುಂದೆ

ನಿರಂತರ ಲೈಂಗಿಕ ಸಂಪರ್ಕ ಇಟ್ಟುಕೊಳ್ಳುವ ವಿಚಾರಕ್ಕೆ ಬಂದಾಗ ಉತ್ತರ ರಾಜ್ಯದ ಜನರು ದಕ್ಷಿಣ ರಾಜ್ಯದ ಜನರಿಗಿಂತ ಮುಂದಿದ್ದಾರೆ ಎಂದು ಸಮೀಕ್ಷೆ ಬೆಟ್ಟು ಮಾಡಿದೆ. ಹರ್ಯಾಣ, ಛತ್ತೀಸ್ ಗಢ, ಪಶ್ಚಿಮ ಬಂಗಾಳ, ಪಂಜಾಬ್ ರಾಜ್ಯಗಳ ಶೇಕಡಾ 55 ಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಪುರುಷರು ಸಮೀಕ್ಷೆ ನಡೆಸಿದ ಅವಧಿಗೂ ಮುಂಚಿನ ನಾಲ್ಕು ವಾರಗಳಲ್ಲಿ ಲೈಂಗಿಕ ಸಂಪರ್ಕ ಹೊಂದಿದ್ದೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇನ್ನು ಮಧ್ಯ ಪ್ರದೇಶ ಮತ್ತು ರಾಜಸ್ಥಾನದ ಜನರೂ ಸೆಕ್ಸ್ ನಲ್ಲಿ ಉಳಿದ ರಾಜ್ಯಗಳಿಗಿಂತ ಮುಂದಿದ್ದಾರೆ.

ಒಟ್ಟಾರೆ ದೇಶದಲ್ಲಿ ಶೇಕಡಾ 47 ಪುರುಷರು ಮತ್ತು ಶೇಕಡಾ 48 ಮಹಿಳೆಯರು ತಾವು ಕಳೆದ 4 ವಾರಗಳಲ್ಲಿ ಲೈಂಗಿಕ ಸಂಪರ್ಕ ಬೆಳೆಸಿದ್ದೇವೆ ಎಂದು ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಚಿತ್ರ ಕೃಪೆ: ಲೈವ್ ಮಿಂಟ್

ಅವಿವಾಹಿತರ ಲೈಂಗಿಕ ಜೀವನ

ಅವಿವಾಹಿತರ ಲೈಂಗಿಕ ಜೀವನ

ಸಮೀಕ್ಷೆ ನಡೆಸುವ ವೇಳೆ ಒಂಟಿಯಾಗಿರುವ ಶೇಕಡಾ 3 ಪುರುಷರು ಮತ್ತು ಶೇಕಡಾ 1 ಮಹಿಳೆಯರು ತಾವು ಕಳೆದ ನಾಲ್ಕು ವಾರಗಳಲ್ಲಿ ದೈಹಿಕ ಸಂಪರ್ಕ ಹೊಂದಿದ್ದೇವೆ ಎಂದಿದ್ದಾರೆ.

ಪಂಜಾಬ್, ಹರ್ಯಾಣ, ಛತ್ತೀಸ್ ಗಢ ಮತ್ತು ಮಧ್ಯ ಪ್ರದೇಶದಲ್ಲಿ ಶೇಕಡಾ 5 ಕ್ಕಿಂತ ಹೆಚ್ಚಿನ ಒಂಟಿ ಪುರುಷರು ತಾವು ನಿರಂತರ ಲೈಂಗಿಕ ಸಂಪರ್ಕ ನಡೆಸುತ್ತಿರುತ್ತೇವೆ ಎಂದಿದ್ದಾರೆ. ಕರ್ನಾಟಕದ ಶೇ. 2 ಮತ್ತು ಗುಜರಾತಿನ ಶೇ. 1.9 ನ ಒಂಟಿ ಮಹಿಳೆಯರು ತಾವು ನಿರಂತರವಾಗಿ ಸೆಕ್ಸ್ ನಡೆಸುತ್ತೇವೆ ಎಂದಿದ್ದಾರೆ.

ಎಂದೂ ಮದುವೆಯಾಗದ ಶೇಕಡಾ 14 ಪುರುಷರು ಮತ್ತು ಶೇಕಡಾ 2 ಮಹಿಳೆಯರು ತಾವು ದೈಹಿಕ ಸಂಪರ್ಕ ಹೊಂದಿದ್ದೇವೆ ಎಂದಿದ್ದಾರೆ.

ಚಿತ್ರ ಕೃಪೆ: ಲೈವ್ ಮಿಂಟ್

 ಯಾರ ಜೊತೆ ಲೈಂಗಿಕ ಸಂಪರ್ಕ?

ಯಾರ ಜೊತೆ ಲೈಂಗಿಕ ಸಂಪರ್ಕ?

ನಿರಂತರವಾಗಿ ಲೈಂಗಿಕ ಸಂಪರ್ಕ ಹೊಂದುತ್ತಿರುವ ಒಂಟಿ ಮಹಿಳೆಯರು ಮತ್ತು ಪುರುಷರು ಯಾರ ಜೊತೆ ನಡೆಸುತ್ತಾರೆ ಎಂಬುದನ್ನೂ ಸಮೀಕ್ಷೆಯಲ್ಲಿ ಪತ್ತೆಹಚ್ಚಲಾಗಿದೆ. ಇದರಲ್ಲಿ ಹೆಚ್ಚಿನವರು ತಮ್ಮ ಬಾಯ್ ಫ್ರೆಂಡ್ ಮತ್ತು ಗರ್ಲ್ ಫ್ರೆಂಡ್ ಜೊತೆಗೆ ದೈಹಿಕ ಸಂಪರ್ಕ ಹೊಂದುತ್ತೇವೆ ಎಂದಿದ್ದಾರೆ. ಸರಿ ಸುಮಾರು ಶೇಕಡಾ 10 ಜನರು ಮದುವೆಯಾಗದೆ ಸಹ ಜೀವನ ನಡೆಸುವ ಸಂಗಾತಿಗಳ ಜೊತೆಗೆ ಸೆಕ್ಸ್ ನಡೆಸುತ್ತಿದ್ದೇವೆ ಎಂದಿದ್ದಾರೆ.

ಶೇಕಡಾ 6 ಪುರುಷರು ವೇಶ್ಯೆಯರ ಜೊತೆ ಹಾಗೂ ಮಹಿಳೆಯರು ಶೇ. 1 ಈ ರೀತಿ ಹಣ ಕೊಟ್ಟು ಲೈಂಗಿಕ ಸಂಪರ್ಕ ಪಡೆಯುತ್ತೇವೆ ಎಂದಿದ್ದಾರೆ. ವಿಶೇಷವೆಂದರೆ ಶೇಕಡಾ 22 ಮಹಿಳೆಯರು ತಾವು ದೈಹಿಕ ಸಂಪರ್ಕ ಪಡೆಯುವ ವ್ಯಕ್ತಿಯನ್ನು ಇತರ ಎಂದು ಹೇಳಿದ್ದಾರೆ. ಹೀಗಾಗಿ ಇವರು ಯಾರು ಎಂಬುದು ಲೆಕ್ಕಕ್ಕೆ ಸಿಕ್ಕಿಲ್ಲ.

ಚಿತ್ರ ಕೃಪೆ: ಲೈವ್ ಮಿಂಟ್

English summary
The National Family Health Survey (NFHS), a large-scale nationally representative survey conducted in 2015-16. As per this survey, Men are mostly likely to have had their first sexual intercourse at the age of 20-24, the data shows. For women, the peak age at first sex is lower at 15-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X