ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಕೊರತೆ: ಭಾರತದ ಇಂದಿನ ಸ್ಥಿತಿಗೆ ಅಂದಿನ ತಪ್ಪು ಕಾರಣ!?

|
Google Oneindia Kannada News

ನವದೆಹಲಿ, ಮೇ 11: ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವುದು ಎಂಬ ಮಾತನ್ನು ಕೇಳಿರುತ್ತೀರಿ ಅಲ್ಲವೇ. ಕೊರೊನಾವೈರಸ್ ಲಸಿಕೆ ಸಂಗ್ರಹಣೆ ವಿಷಯದಲ್ಲಿ ಕೇಂದ್ರ ಸರ್ಕಾರವು ಥೇಟ್ ಅಂಥದ್ದೇ ವರ್ತನೆಯನ್ನು ಪ್ರದರ್ಶಿಸಿದೆ.

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗುನಿಂದ ಸಂಕಷ್ಟ ಎದುರಿಸಿದ ಭಾರತದಲ್ಲಿ ಪರಿಸ್ಥಿತಿ ಸ್ವಲ್ಪ ತಿಳಿ ಆಗುತ್ತಿದ್ದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮೈ ಮರೆಯಿತು. ಅಷ್ಟೇ ಅಲ್ಲದೇ ಉತ್ತರಾಖಂಡದಲ್ಲಿ ಕುಂಭ ಮೇಳ, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳಲ್ಲೇ ಬಿಜೆಪಿ ಬ್ಯುಸಿ ಆಗಿ ಬಿಟ್ಟಿತು.

ಭಾರತದಲ್ಲಿ ಭೀತಿ: 1ನೇ ಅಲೆಯಲ್ಲಿ ಸೋಂಕು, 2ನೇ ಅಲೆಯಲ್ಲಿ ಸಾವು!?ಭಾರತದಲ್ಲಿ ಭೀತಿ: 1ನೇ ಅಲೆಯಲ್ಲಿ ಸೋಂಕು, 2ನೇ ಅಲೆಯಲ್ಲಿ ಸಾವು!?

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳುವ ಹೊತ್ತಿಗೆ ದೇಶದಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯು ರಣಕೇಕೆ ಹಾಕಲು ಶುರು ಮಾಡಿತ್ತು. ಈ ಹಂತದಲ್ಲಿ ಕೊವಿಡ್-19 ಲಸಿಕೆಗೆ ತೀವ್ರ ಕೊರತೆ ಉಂಟಾಯಿತು. ಬಲಿಷ್ಠ ಭಾರತದಲ್ಲಿ ಕೊರೊನಾವೈರಸ್ ಲಸಿಕೆಯ ಸಂಗ್ರಹಣೆಯು ಯಾವ ಪ್ರಮಾಣದಲ್ಲಿದೆ. ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಲಸಿಕೆ ಸಂಗ್ರಹ ಎಷ್ಟಿದೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

ಭಾರತ

ಭಾರತ

ದೇಶದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಲಸಿಕೆ ಕೊರತೆ ಸೃಷ್ಟಿಯಾಗುತ್ತಿದೆ. ಇಂದಿನ ಈ ಸ್ಥಿತಿಗೆ ಕೇಂದ್ರ ಸರ್ಕಾರದ ಬೇಜವಾಬ್ದಾರಿತನವೇ ಹೊಣೆ ಎನ್ನುವಂತಾ ಅಂಕಿ-ಅಂಶಗಳು ಸಿಕ್ಕಿವೆ. 2021ರ ಜನವರಿ ವೇಳೆಗೆ ಭಾರತದಲ್ಲಿ ಎಷ್ಟು ಪ್ರಮಾಣದ ಲಸಿಕೆ ಸಂಗ್ರಹವಾಗಿತ್ತು ಎಂಬುದರ ಪಟ್ಟಿ ಇಲ್ಲಿದೆ ನೋಡಿ.

ದಿನಾಂಕ ಲಸಿಕೆ ಕಂಪನಿ ಲಸಿಕೆ ಪ್ರಮಾಣ
ಜನವರಿ 2021 ಸೀರಂ ಇನ್ಸ್ ಟಿಟ್ಯೂಟ್ / ಕೊವಿಶೀಲ್ಡ್ 11 ಮಿಲಿಯನ್ ಡೋಸ್
ಜನವರಿ 2021 ಭಾರತ್ ಬಯೋಟೆಕ್ / ಕೊವ್ಯಾಕ್ಸಿನ್ 5.5 ಮಿಲಿಯನ್ ಡೋಸ್
ಇಂಗ್ಲೆಂಡ್

ಇಂಗ್ಲೆಂಡ್

ಕೊರೊನಾವೈವರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಯುಕೆ ಎಷ್ಟು ಪ್ರಮಾಣದ ಲಸಿಕೆಯನ್ನು ಸಂಗ್ರಹಿಸಿಟ್ಟಿದೆ ಎನ್ನುವುದರ ಪಟ್ಟಿ ಇಲ್ಲಿದೆ.

ದಿನಾಂಕ ಲಸಿಕೆ ಕಂಪನಿ ಲಸಿಕೆ ಪ್ರಮಾಣ
ಮೇ 2020 ಆಸ್ಟ್ರಾಜೆನಿಕಾ 90 ಮಿಲಿಯನ್ ಡೋಸ್
ಜುಲೈ 2020 ಫೈಜರ್-ಬಯೋಟೆಕ್ 30 ಮಿಲಿಯನ್ ಡೋಸ್
ಆಗಸ್ಟ್ 14,2020 ಜಾನ್ಸನ್ ಆಂಡ್ ಜಾನ್ಸನ್ 30 ಮಿಲಿಯನ್ ಡೋಸ್
ಅಮೆರಿಕಾ

ಅಮೆರಿಕಾ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಎಷ್ಟು ಪ್ರಮಾಣದ ಕೊವಿಡ್-19 ಲಸಿಕೆಯನ್ನು ಸಂಗ್ರಹಿಸಿಡಲಾಗಿತ್ತು ಎಂದು ಇಲ್ಲಿ ನೋಡಿ ತಿಳಿಯೋಣ.

ದಿನಾಂಕ ಲಸಿಕೆ ಕಂಪನಿ ಲಸಿಕೆ ಪ್ರಮಾಣ
ಜುಲೈ 2020 ನೊವಾವ್ಯಾಕ್ಸ್ 100 ಮಿಲಿಯನ್ ಡೋಸ್
ಜುಲೈ 2020 ಫೈಜರ್-ಬಯೋಟೆಕ್ 100 ಮಿಲಿಯನ್ ಡೋಸ್
ಆಗಸ್ಟ್2020 ಜಾನ್ಸನ್ ಆಂಡ್ ಜಾನ್ಸನ್ 100 ಮಿಲಿಯನ್ ಡೋಸ್
ಆಗಸ್ಟ್2020 ಮಾಡರ್ನಾ 100 ಮಿಲಿಯನ್ ಡೋಸ್
ಯುರೋಪ್

ಯುರೋಪ್

ಯುರೋಪಿನಲ್ಲಿ ಕೊರೊನಾವೈರಸ್ ನಿಯಂತ್ರಿಸುವುದಕ್ಕಾಗಿ ಎಷ್ಟು ಪ್ರಮಾಣದಲ್ಲಿ ಲಸಿಕೆಯನ್ನು ಸಂಗ್ರಹಿಸಲಾಗಿತ್ತು ಎನ್ನುವುದರ ವಿವರ ಇಲ್ಲಿದೆ.

ದಿನಾಂಕ ಲಸಿಕೆ ಕಂಪನಿ ಲಸಿಕೆ ಪ್ರಮಾಣ
ಆಗಸ್ಟ್2020 ಆಸ್ಟ್ರಾಜೆನಿಕಾ 300 ಮಿಲಿಯನ್ ಡೋಸ್
ಅಕ್ಟೋಬರ್ 2020 ಜಾನ್ಸನ್ ಆಂಡ್ ಜಾನ್ಸನ್ 200 ಮಿಲಿಯನ್ ಡೋಸ್
ನವೆಂಬರ್2020 ಫೈಜರ್-ಬಯೋಟೆಕ್ 300 ಮಿಲಿಯನ್ ಡೋಸ್
ಜಪಾನ್

ಜಪಾನ್

ಕೊವಿಡ್-19 ಸೋಂಕಿನ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಪಾನ್ ರಾಷ್ಟ್ರ ಕೂಡ ಲಸಿಕೆ ಸಂಗ್ರಹಿಸುವಲ್ಲಿ ಹಿಂದೆ ಬಿದ್ದಿಲ್ಲ. ಈದೇಶದಲ್ಲಿ ಎಷ್ಟು ಪ್ರಮಾಣದ ಲಸಿಕೆಯನ್ನು ಸಂಗ್ರಹಿಸಲಾಗಿದೆ ಎನ್ನುವುದರ ಕುರಿತು ಪಟ್ಟಿ ಇಲ್ಲಿದೆ.

ದಿನಾಂಕ ಲಸಿಕೆ ಕಂಪನಿ ಲಸಿಕೆ ಪ್ರಮಾಣ
ಜುಲೈ 2020 ಫೈಜರ್-ಬಯೋಟೆಕ್ 120 ಮಿಲಿಯನ್ ಡೋಸ್
ಆಗಸ್ಟ್2020 ಆಸ್ಟ್ರಾಜೆನಿಕಾ 50 ಮಿಲಿಯನ್ ಡೋಸ್
ಅಕ್ಟೋಬರ್ 2020 ಮಾಡರ್ನಾ 50 ಮಿಲಿಯನ್ ಡೋಸ್
ಯಾವ ರಾಷ್ಟ್ರದಲ್ಲಿ ಎಷ್ಟು ಕೊರನಾ ಲಸಿಕೆ ಸಂಗ್ರಹ

ಯಾವ ರಾಷ್ಟ್ರದಲ್ಲಿ ಎಷ್ಟು ಕೊರನಾ ಲಸಿಕೆ ಸಂಗ್ರಹ

ದೇಶ ದಿನಾಂಕ ಲಸಿಕೆ ಕಂಪನಿ ಲಸಿಕೆ ಪ್ರಮಾಣ
ಆಸ್ಟ್ರೇಲಿಯಾ ಸಪ್ಟೆಂಬರ್ 2020 ಆಸ್ಟ್ರಾಜೆನಿಕಾ 33.8 ಮಿಲಿಯನ್ ಡೋಸ್
ಬ್ರೆಜಿಲ್ ಆಗಸ್ಟ್2020 ಆಸ್ಟ್ರಾಜೆನಿಕಾ 90 ಮಿಲಿಯನ್ ಡೋಸ್
ಜರ್ಮನಿ ಸಪ್ಟೆಂಬರ್ 2020 ಫೈಜರ್-ಬಯೋಟೆಕ್ 30 ಮಿಲಿಯನ್ ಡೋಸ್

English summary
Here Is The Data Of India And Other Countries Of Early Covid-19 Vaccine Procurement Deals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X