ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ಹೇ... ನವಿಲೇ... ಹೆಣ್ಣವಿಲೇ...'' (ಮಯೂರ ಜನ್ಮ ರಹಸ್ಯ)

ಪೌರಾಣಿಕ ಹಿನ್ನೆಲೆಯಲ್ಲಿಟ್ಟುಕೊಂಡು ರಾಜಸ್ಥಾನ ಹೈಕೋರ್ಟ್ ನ್ಯಾಯಾಧೀಶ ನ್ಯಾ. ಮಹೇಶ್ ಚಂದ್ರ ಶರ್ಮಾ ಅವರು ನವಿಲುಗಳು ಕಣ್ಣೀರಿನಿಂದ ಗರ್ಭವತಿಯಾಗುತ್ತವೆ ಎಂದು ಹೇಳಿದ್ದರೂ, ಜೀವ ವಿಜ್ಞಾನ ಬೇರೆಯದ್ದೇ ಹೇಳುತ್ತದೆ.

By ಚೇತನ್ ಓ.ಆರ್., ಬೆಂಗಳೂರು
|
Google Oneindia Kannada News

ಹೆಣ್ಣನವಿಲುಗಳು ಗಂಡು ನವಿಲಿನ ಕಣ್ಣೀರನ್ನು ಕುಡಿಯುವ ಮೂಲಕ ಗರ್ಭವತಿಗಳಾಗುತ್ತವೆ ಎಂದು ಹೇಳಿರುವ ರಾಜಸ್ಥಾನ ಹೈಕೋರ್ಟ್ ನ ನ್ಯಾಯಾಧೀಶ ಮಹೇಶ್ ಚಂದ್ರ ಶರ್ಮಾ ಅವರ ಹೇಳಿಕೆಗಳು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿವೆ.

ಕೆಲವರು ಮಹೇಶ್ ಚಂದ್ರ ಅವರ ಹೇಳಿಕೆಯನ್ನು ಸಮರ್ಥಿಸಿದರೆ, ಮತ್ತೆ ಕೆಲವರು ಶರ್ಮಾ ಹೇಳಿಕೆಯನ್ನು ವಿರೋಧಿಸಿದ್ದಾರೆ. ಎಲ್ಲಾ ಜೀವಿಗಳಂತೆಯೇ ಹೆಣ್ಣು ನವಿಲುಗಳೂ ತಮ್ಮ ಸಂತಾನಾಭಿವೃದ್ಧಿಗೆ ಕೂಡುತ್ತವೆ ಎಂಬುದು ಅವರ ಅನಿಸಿಕೆಯಾಗಿದೆ.[ಜೋಕನ್ನೆಲ್ಲ ಕೇಳಿ ನವಿಲುಗಳು ಅಳಲು ಪ್ರಾರಂಭಿಸಿದರೆ!]

ಅತ್ತ, ಪೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ನ್ಯಾ. ಮಹೇಶ್ ಚಂದ್ರ ಹೇಳಿಕೆಯ ಪರ ಹಾಗೂ ವಿರುದ್ಧದ ಹೇಳಿಕೆಗಳು ವ್ಯಕ್ತವಾಗಿದೆ.

ಹಾಗಾದರೆ, ಅಸಲಿ ವಿಷಯವೇನು? ಪ್ರಪಂಚದಲ್ಲಿ ಸಂತಾನೋತ್ಪತ್ತಿಗೆ ಗಂಡು, ಹೆಣ್ಣುಗಳ ಮಿಲನವಾಗಲೇ ಬೇಕೇ? ನವಿಲುಗಳಲ್ಲಿ ಸಂತಾನ ಉತ್ಪತ್ತಿ ಹೇಗೆ ಎಂಬಿತ್ಯಾದಿ ವಿಚಾರಗಳ ಸಂಕ್ಷಿಪ್ತ ರೂಪ ಇಲ್ಲಿದೆ.

ಜೀವ ವಿಜ್ಞಾನವೂ ಇದನ್ನೇ ಹೇಳುತ್ತೆ

ಜೀವ ವಿಜ್ಞಾನವೂ ಇದನ್ನೇ ಹೇಳುತ್ತೆ

ಸೃಷ್ಟಿಯಲ್ಲಿ ಸಾಮಾನ್ಯವಾಗಿ ಪ್ರತಿಯೊಂದು ಜೀವಿಗಳಲ್ಲಿಯೂ (ಏಕಾಣು ಜೀವಿಗಳನ್ನು ಹೊರತುಪಡಿಸಿ) ಹೆಣ್ಣು ಗಂಡು ಎಂಬ ಪ್ರಬೇಧಗಳಿದ್ದು ಸಂತಾನೋತ್ಪತ್ತಿಗೆ ಇವೆರಡರ ಸಹಕಾರ ಇರಲೇಬೇಕೆಂಬ ನಿಯಮವಿದೆ ಎಂಬುದನ್ನು ಜೀವ ವಿಜ್ಞಾನ ಶಾಸ್ತ್ರಜ್ಞರು ಹೇಳುತ್ತಾರೆ.

ಸಾಮಾನ್ಯವಾಗಿ ಸಂತಾನೋತ್ಪತ್ತಿಗೆ ಮಿಲನವೇ ಕಾರಣ

ಸಾಮಾನ್ಯವಾಗಿ ಸಂತಾನೋತ್ಪತ್ತಿಗೆ ಮಿಲನವೇ ಕಾರಣ

ಜೀವ ವಿಜ್ಞಾನಿಗಳು ಮುಖ್ಯವಾಗಿ ಎರಡು ರೀತಿಯ ಸಂತಾನೋತ್ಪತ್ತಿಯು ಜೀವಿಗಳಲ್ಲಿದೆ ಎಂದು ಹೇಳುತ್ತಾರೆ. ಮೊದಲನೆಯದು - ಸಂಭೋಗ ಸಹಿತ (Sexual) ಹಾಗೂ ಎರಡನೆಯದ್ದು - ಸಂಭೋಗ ರಹಿತ (Asexual). ಸಸ್ತನಿ ಸೇರಿದಂತೆ ಬಹುತೇಕ ಎಲ್ಲಾ ಜೀವಿಗಳಲ್ಲಿ ಆಗುವುದು ಸಂಭೋಗ ಸಹಿತ ಸಂತಾನೋತ್ಪತ್ತಿ. ಮರ, ಬಳ್ಳಿಗಳಲ್ಲಿ (ಇದನ್ನು Pollination) ಆಗುವುದು ಸಂಭೋಗ ರಹಿತ. ಕೆಲವು ಜಾತಿಯ ಮೀನುಗಳಲ್ಲಿ ಪುರುಷರ ಮತ್ಸ್ಯವು ತನ್ನ ವೀರ್ಯಾಣುಗಳನ್ನು ನಿರ್ದಿಷ್ಟವಾದ ಜಾಗವೊಂದರಲ್ಲಿ ಸಾಲಾಗಿ ಇಟ್ಟುಕೊಂಡು ಬರುತ್ತದೆ. ಆನಂತರ, ಹೆಣ್ಣು ಮತ್ಸ್ಯವು ಆ ವೀರ್ಯಾಣುಗಳ ಮೇಲೆ ತನ್ನ ಅಂಡಾಣುಗಳನ್ನು ಇಟ್ಟುಕೊಂಡು ಬರುತ್ತದೆ. ಹಾಗೆ ಸೇರಿಕೊಂಡ ವೀರ್ಯಾಣುಗಳು, ಅಂಡಾಣುಗಳು ಮೊಟ್ಟೆಗಳಾಗಿ ಮಾರ್ಪಾಟಾಗುತ್ತವೆ. ಅಂದರೆ, ಇಲ್ಲಿ ಗಂಡು- ಹೆಣ್ಣಿನ ಮಿಲನವೇ ಇಲ್ಲ. ಹಾಗಾಗಿ, ಇದೂ ಸಂಭೋಗ ರಹಿತ ಸಂತಾನೋತ್ಪತ್ತಿಗೆ ಒಂದು ಉದಾಹರಣೆ.

ಮರ, ಬಳ್ಳಿಗಳಲ್ಲಿ ಬೇರೆ ರೀತಿಯದ್ದೇ ಸಂಪರ್ಕ

ಮರ, ಬಳ್ಳಿಗಳಲ್ಲಿ ಬೇರೆ ರೀತಿಯದ್ದೇ ಸಂಪರ್ಕ

ಸಂಭೋಗ ಸಹಿತ ಸಂತಾನೋತ್ಪಾದನೆಯಲ್ಲಿ ಸಂಗಾತಿಗಳ ಮಿಲನವಿದ್ದೇ ಇರುತ್ತದೆ. ಆದರೆ, ಸಂಭೋಗ ರಹಿತ ಸಂತಾನೋತ್ಪತ್ತಿಯಲ್ಲಿ ಸಂಗಾತಿಗಳು ದೂರದಲ್ಲೇ ಇದ್ದರೂ ಗಾಳಿ ಮತ್ತಿತರ ವಾಹಕಗಳ ಮೂಲಕ ಸಂತಾನ ಉತ್ಪತ್ತಿಯಾಗುತ್ತದೆ. ಉದಾಹರಣೆಗೆ, ಸಸ್ಯಗಳಲ್ಲಿ ಆಗುವ ಪಾಲಿನೇಷನ್ ನಲ್ಲಿ ಗಾಳಿಯು ಇತರೆ ಸಸ್ಯ, ಮರಗಳಲ್ಲಿರುವ ಗಂಡಿನ ವೀರ್ಯಕ್ಕೆ ಸರಿಸಮಾನವಾದ ಪಾಲೆನ್ ಅನ್ನು ತಂದು ಮತ್ತೊಂದು ಮರಗಳ ಅಂಡಾಣುಗಳೊಂದಿಗೆ ಸಮ್ಮಿಲನಗೊಳಿಸುತ್ತದೆ.

ಗಂಡು- ಹೆಣ್ಣು ನವಿಲುಗಳ ಸಂಪರ್ಕ ಆಗುತ್ತೆ

ಗಂಡು- ಹೆಣ್ಣು ನವಿಲುಗಳ ಸಂಪರ್ಕ ಆಗುತ್ತೆ

ಈಗ ನವಿಲಿನ ವಿಚಾರಕ್ಕೆ ಬರೋಣ. ನಿಜವಾದ ಅರ್ಥದಲ್ಲಿ ನವಿಲುಗಳು ಸಂಭೋಗ ಸಹಿತ ಸಂತಾನೋತ್ಪತ್ತಿ ವರ್ಗಕ್ಕೆ ಸೇರುತ್ತವೆ. ಸಾಮಾನ್ಯವಾಗಿ ಗಂಡು ನವಿಲು, ಹೆಣ್ಣು ನವಿಲಿನ ಬೆನ್ನ ಮೇಲೆ ಬಂದು ಕುಳಿತ ನಂತರ, ಅವೆರಡರ ಜನನೇಂದ್ರಿಯಗಳ ಸಂಪರ್ಕದಿಂದ ಗಂಡಿನ ದೇಹದ ವೀರ್ಯವು ಹೆಣ್ಣಿನ ಅಂಡಾಶಯದೊಳಕ್ಕೆ ಪ್ರಯಾಣ ಬೆಳೆಸುತ್ತದೆ. ಅಲ್ಲಿ ಅವು ಸಂಯೋಗ ಹೊಂದಿ ಮೊಟ್ಟೆಗಳ ರೂಪ ತಾಳುತ್ತವೆ. ಈ ಮೊಟ್ಟೆಗಳನ್ನು ಮರಿ ಮಾಡುವ ಮೂಲಕ ತಾಯಿ ನವಿಲು ಮತ್ತಷ್ಟು ನವಿಲುಗಳಿಗೆ ಜನ್ಮ ನೀಡುತ್ತದೆ.

ದೈವೀಕವಾಗಿ ನವಿಲನ್ನು ನೋಡುವ ಪ್ರಯತ್ನ

ದೈವೀಕವಾಗಿ ನವಿಲನ್ನು ನೋಡುವ ಪ್ರಯತ್ನ

ಆದರೆ, ನಮ್ಮ ಹಿಂದಿನ ಜನರು ನವಿಲುಗಳು ಬ್ರಹ್ಮಚಾರಿ ದೇವರು ಸುಬ್ರಹಣ್ಯನ ವಾಹನ ಎಂಬ ಕಾರಣಕ್ಕಾಗಿಯೋ ಏನೋ ನವಿಲುಗಳೂ ಬ್ರಹ್ಮಚಾರಿಗಳು ಎಂದು ಭಾವಿಸಿದ್ದಿರಬಹುದು. ತಮ್ಮಈ ಭಾವನೆಗೆ ಪೂರಕವಾಗಿಕಟ್ಟುಕತೆಯೊಂದನ್ನು ಕಟ್ಟಿದ್ದಾರಷ್ಟೇ ಎಂಬುದು ವೇದ್ಯ.

English summary
Rajsthan High court's Judge Justice Mahesh Chandra's statement about Peacock reproduction starts a debate in social media. Many of the people support and many others are against the statement. But, science says, like any other bird, peacock also joins its mate in reproduction process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X