ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಕಾರ್ಡ್ ಸ್ಥಗಿತಗೊಂಡಿದೆಯೇ? ಕಂಡುಹಿಡಿಯೋದು ಹೇಗೆ?

|
Google Oneindia Kannada News

ನವದೆಹಲಿ, ಆಗಸ್ಟ್ 17: ಸುಮಾರು 11.44 ಲಕ್ಷ ಪ್ಯಾನ್ ಕಾರ್ಡ್ ಗಳನ್ನು ಸ್ಥಗಿತಗೊಳಿಸಿದ ನಂತರ ಕೇಂದ್ರ ಸರ್ಕಾರದ ಕಣ್ಣೀಗ ಆಧಾರ್ ಕಾರ್ಡ್ ಮೇಲೆ ಬಿದ್ದಿದೆ.

ನೆನಪಿಡಿ, ಈ 10 ವ್ಯವಹಾರಗಳಿಗೆ ಆಧಾರ್ ಕಡ್ಡಾಯನೆನಪಿಡಿ, ಈ 10 ವ್ಯವಹಾರಗಳಿಗೆ ಆಧಾರ್ ಕಡ್ಡಾಯ

ಭಾರತೀಯರ ಸಾರ್ವತ್ರಿಕ ಗುರುತಿನ ಚೀಟಿಯಾದ ಆಧಾರ್ ಕಾರ್ಡ್ ಅನ್ನು ಭಾರತ ಸರ್ಕಾರ ಹಲವು ಮಹತ್ವದ ಕೆಲಸಗಳಿಗೆ ಕಡ್ಡಾಯಗೊಳಿಸಿದೆ. ಪ್ರತಿಯೊಬ್ಬ ಭಾರತೀಯ ಪ್ರಜೆಯೂ ವಯಸ್ಸಿನ ಮಿತಿಯಿಲ್ಲದೆ, ಹೊಂದಲೇಬೇಕಾದ ಆಧಾರ್ ಕಾರ್ಡ್ ಗಳಲ್ಲಿ 81 ಲಕ್ಷದಷ್ಟು ಆಧಾರ್ ಕಾರ್ಡ್ ಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ.

ನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿ

ಆಧಾರ್ ವಿಧೇಯಕ 2016 ರ 27 ಮತ್ತು 28 ನೇ ಸೆಕ್ಷನ್ ನಲ್ಲಿ ಉಲ್ಲೇಖಿಸಲಾಗಿರುವ ಕೆಲವು ಕಾರಣಗಳಿಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ನಿಮ್ಮ ಆಧಾರ್ ಕಾರ್ಡ್ ಸಹ ಸ್ಥಗಿತಗೊಂಡಿದೆಯೇ ಎಂಬುದನ್ನು ಪತ್ತೆ ಮಾಡಲು ಹೀಗೆ ಮಾಡಿ.

ಹಂತ-1

ಹಂತ-1

ಆಧಾರ್ ಸ್ಟೇಟಸ್ ಚೆಕ್ ಮಾಡುವುದಕ್ಕೆ ಮೊದಲು ಮಾಡಬೇಕಾದ ಕೆಲಸವೆಂದರೆ ಆಧಾರ್ ವೆಬ್ ಸೈಟ್ ಗೆ ಲಾಗ್ ಇನ್ ಆಗುವುದು. ಈ ಲಿಂಕ್ ಕ್ಲಿಕ್ ಮಾಡಿ, ಲಾಗ್ ಇನ್ ಆಗಿ.

ಹಂತ-2

ಹಂತ-2

ಲಾಗ್ ಆನ್ ಆಗುತ್ತಿದ್ದಂತೆಯೇ ಒಂದು ಪುಟ ಆಧಾರ್ ವೆಬ್ ಸೈಟ್ ನ ಹೋಮ್ ಪೇಜ್ ಕಾಣುತ್ತದೆ. ಅಲ್ಲಿ ಆಧಾರ್ ಸರ್ವಿಸ್ ಟ್ಯಾಬ್ ನಲ್ಲಿ ವೇರಿಫೈ ಆಧಾರ್ ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿ.

ಹಂತ-3

ಹಂತ-3

ವೇರಿಫೈ ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡುತ್ತಿದ್ದಂತೆಯೇ ಹೊಸ ಪುಟ ಕಾಣಿಸಿಕೊಳ್ಳುತ್ತದೆ. ಈ ಪುಟದಲ್ಲಿ ನೀಡಿದ ಸೂಚನೆಯಂತೆ ನಿಮ್ಮ ಆಧಾರ್ ನಂಬರ್ ಉಲ್ಲೇಖಿಸಿ, ಸೆಕ್ಯುರಿಟಿ ಕೋಡ್ ಬರೆಯಿರಿ.

ಹಂತ-4

ಹಂತ-4

ನಿಮ್ಮ ಆಧಾರ್ ನಂಬರ್ ಮತ್ತು ಸೆಕ್ಯುರಿಟಿ ಕೋಡ್ ಬರೆಯುತ್ತಿದ್ದಂತೆಯೇ "aadhaar verification completes" ಎಂಬ ಮೆಸೇಜ್ ಪಅಪ್ ಅಪ್ ಆಗುತ್ತದೆ. ಅದರ ಕೆಳಗೆ ಒಂದು 'ಹಸಿರು ಬಣ್ಣದ ಟಿಕ್ ಮಾರ್ಕ್' ಇದ್ದರೆ ನಿಮ್ಮ ಆಧಾರ್ ನಂಬರ್ ಸ್ಥಗಿತಗೊಂಡಿಲ್ಲವೆಂದರ್ಥ. ಟಿಕ್ ಮಾರ್ಕ್ ಬದಲಾಗಿ ಕೆಂಪು ಬಣ್ಣದ ಗುಣಾಕಾರದ ಚಿನ್ನೆ ಇದ್ದರೆ ನಿಮ್ಮ ಆಧಾರ್ ಕಾರ್ಡ್ ಸ್ಥಗಿತಗೊಂದಿದೆ ಎಂದರ್ಥ.

English summary
Government of India has deactivated almost 81 lakhs aadhaar card due to various reasons. Here is a guidline, how to check your aadhaar status.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X