ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಿ, ಇದೆಂಥ ವಿಕೃತ ಮನಸ್ಸು? 'ಒನ್ ಇಂಡಿಯಾ' ಬಯಲಿಗೆಳೆದ ಸತ್ಯಕತೆ!

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ತಿರುವನಂತಪುರಂ, ಜನವರಿ 04: ಜಗತ್ತಿನಲ್ಲಿ ಇಂಥ ವಿಕೃತ ಮನಸ್ಥಿತಿಯವರೂ ಇರುತ್ತಾರಾ ಎಂದು ಕೆಲಕಾಲ ಅಚ್ಚರಿ, ಅಸಹ್ಯ ಹುಟ್ಟುವ ಕತೆಯಿದು. ಕೇರಳದಲ್ಲಿ ಸಕ್ರಿಯವಾಗಿದ್ದ ಟೆಲಿಗ್ರಾಂ ಗ್ರೂಪ್ ವೊಂದು ಮಕ್ಕಳ ಮೇಲೆ ದೌರ್ಜನ್ಯ ಎಸಗುವುದನ್ನೇ ತನ್ನ ಅಜೆಂಡಾವನ್ನಾಗಿ ಮಾಡಿಕೊಂಡಿದ್ದ ಕತೆ!

ಕೇರಳದಲ್ಲಿ ಸುಮಾರು 350 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಶಿಶುಕಾಮಿಗಳ ಟೆಲಿಗ್ರಾಂ ಗ್ರೂಪ್ ನ ಅಡ್ಮಿನ್ ಆಗಿದ್ದ ಶರೀಫ್ ಅಲಿ ಎಂಬುವವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒನ್ ಇಂಡಿಯಾ ತಂಡದ ನಿರಂತರ ಪರಿಶ್ರಮ ಕೊನೆಗೂ ಫಲನೀಡಿದೆ.

ವಿಜಯಪುರ ದಲಿತ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ 4 ಜನರ ಬಂಧನವಿಜಯಪುರ ದಲಿತ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ 4 ಜನರ ಬಂಧನ

ನವೆಂಬರ್ 22 ರಂದು ಆರಂಭವಾಗಿದ್ದ ಈ ಗ್ರೂಪ್ ನಲ್ಲಿ ಶಿಶುಕಾಮಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮಕ್ಕಳ ಮೇಲೆ ದೌರ್ಜನ್ಯ ಮಾಡಿದ ಅನುಭವಗಳನ್ನು ಹಂಚಿಕೊಳ್ಳುವುದಕ್ಕೆ ಮತ್ತು ಅಂಥ ವಿಡಿಯೋ, ಚಿತ್ರಗಳನ್ನು ಹಂಚಿಕೊಳ್ಳುವುದಕ್ಕೆ ಇದೊಂದು ವೇದಿಕೆಯಾಗಿತ್ತು! ಅಷ್ಟೇ ಅಲ್ಲ ಇದೇ ಅಡ್ಮಿನ್, ಲೈಂಗಿಕ ತೃಷೆ ತೀರಿಸಿಕೊಳ್ಳಲು 'ಪತ್ನಿಯರನ್ನು ವಿನಿಮಯ' ಮಾಡಿಕೊಳ್ಳುವ ಮತ್ತೊಂದು ಗುಂಪನ್ನೂ ಆರಂಭಿಸಲು ನಿರ್ಧಸಿದ್ದ! ಸಲಿಂಗ ಕಾಮಿಗಳಿಗಾಗಿ ಗುಂಪನ್ನು ಆಗಲೇ ನಿರ್ಮಿಸಲಾಗಿತ್ತು! ಈ ಎಲ್ಲಾ ಗುಂಪುಗಳೂ ಗೌಪ್ಯತೆಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಶಿಶುಕಾಮಿಗಳ ಟೆಲಿಗ್ರಾಂ ಗ್ರೂಪ್ ಆರಂಭಿಸಿದ್ದ.

ಅತ್ಯಾಚಾರ ಎಸಗಿ, ಚಿತ್ರಹಿಂಸೆ ನೀಡಿ, ವಿಡಿಯೋ ತೆಗೆದ ಪಾಪಿಗಳುಅತ್ಯಾಚಾರ ಎಸಗಿ, ಚಿತ್ರಹಿಂಸೆ ನೀಡಿ, ವಿಡಿಯೋ ತೆಗೆದ ಪಾಪಿಗಳು

ಈ ಗುಂಪಿನಲ್ಲಿ ಚರ್ಚೆಯಾಗುತ್ತಿದ್ದ ಅಸಹ್ಯಕರ ವಿಷಯಗಳು ಯಾವವು, ನಂತರ ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ, ಆರೋಪಿಯನ್ನು ಪತ್ತೆಹಚ್ಚುವಲ್ಲಿ ಒನ್ ಇಂಡಿಯಾ ಪಾತ್ರವೇನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಪುಟ್ಟ ಮಕ್ಕಳ ಮೇಲೆ ಕಾಮದ ಕಣ್ಣು!

ಪುಟ್ಟ ಮಕ್ಕಳ ಮೇಲೆ ಕಾಮದ ಕಣ್ಣು!

ಪುಟ್ಟ ಪುಟ್ಟ ಮಕ್ಕಳನ್ನು ಕಾಮದ ಕಣ್ಣಿಂದ ನೋಡುವುದನ್ನೇ ಕೆಲಸವನ್ನಾಗಿಸಿಕೊಂಡ ಈ ಗುಂಪು ಆರಂಭವಾದಾಗ ಇದ್ದಿದ್ದು ಕೆಲವೇ ಜನ. ಆದರೆ ನಂತರ 350 ಕ್ಕೂ ಹೆಚ್ಚು ಜನ ಈ ಗುಂಪಿಗೆ ಸೇರಿಕೊಂಡರು! ಮಕ್ಕಳ ಮೇಲೆ ದೌರ್ಜನ್ಯ ನಡೆಸುವುದು ಹೇಗೆ? ಅವರನ್ನು ಲೈಂಗಿಕ ತೃಷೆ ತೀರಿಸಿಕೊಳ್ಳಲು ಏನು ಮಾಡಬೇಕು? ಎಂಬಿತ್ಯಾದಿ ಅಸಹ್ಯಕರ ವಿಷಯಗಳ ಬಗ್ಗೆ ಎಲ್ಲಾ ಸದಸ್ಯರೂ ಚರ್ಚೆ ನಡೆಸುತ್ತಿದ್ದರು.

ಮಕ್ಕಳ ಅಶ್ಲೀಲ ವಿಡಿಯೋ, ಚಿತ್ರ

ಮಕ್ಕಳ ಅಶ್ಲೀಲ ವಿಡಿಯೋ, ಚಿತ್ರ

ಈ ಗುಂಪಿನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಮತ್ತು ಚಿತ್ರಗಳನ್ನು ಹಂಚುವುದಕ್ಕೆ ಅವಕಾಶ ನೀಡಲಾಗಿತ್ತು. ಅಷ್ಟೇ ಅಲ್ಲ, ಇಲ್ಲಿನ ಸದಸ್ಯರು ಬಾಲ್ಯದಲ್ಲಿ ತಮಗಾದ ಲೈಂಗಿಕ ಅನುಭವದ ಕುರಿತೂ ಮುಕ್ತವಾಗಿ ಚರ್ಚೆ ನಡೆಸುತ್ತಿದ್ದರು. ರಸ್ತೆಯಲ್ಲಿ, ಮಾಲ್ ಗಳಲ್ಲಿ ಕಾಣುವ ಚಿಕ್ಕ ಚಿಕ್ಕ ಮಕ್ಕಳ ಫೋಟೊ ಕ್ಲಿಕ್ಕಿಸಿ ಈ ಗುಂಪಿನಲ್ಲಿ ಹಾಕಲಾಗುತ್ತಿತ್ತು. ಆ ಗುಂಪಿನಲ್ಲಿರುವ ಸದಸ್ಯರು ತಾವು ಆ ಮಗುವಿನ ಮೇಲೆ ಯಾವ ರೀತಿ ದೌರ್ಜನ್ಯ ನಡೆಸಬಲ್ಲೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಲಾಗುತ್ತಿತ್ತು! ಕಾಮುಕ ಸದಸ್ಯರು ಮನಸ್ಸಿಗೆ ಬಂದಂತೇ ಆ ಪುಟ್ಟ ಮಗುವನ್ನು ವರ್ಣಿಸುತ್ತಿದ್ದರು. ಕಲ್ಪನೆಯಲ್ಲೇ ಆ ಮಗುವಿನ ಮೇಲೆ ಅತ್ಯಾಚಾರ ಮಾಡುತ್ತಿದ್ದರು!

ಸ್ವಂತ ಮಕ್ಕಳ ಮೇಲೂ ಅತ್ಯಾಚಾರ ಮಾಡಲು ಸಲಹೆ!

ಸ್ವಂತ ಮಕ್ಕಳ ಮೇಲೂ ಅತ್ಯಾಚಾರ ಮಾಡಲು ಸಲಹೆ!

ಮನಸ್ಸನ್ನು ಮತ್ತಷ್ಟು ಘಾಸಿಗೊಳಿಸುವ ಸಂಗತಿಯೆಂದರೆ ಈ ಗುಂಪಿನಲ್ಲಿ ಸ್ವಂತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಬಗ್ಗೆಯೂ ಚರ್ಚೆ ನಡೆಯುತ್ತಿತ್ತು! ಸ್ವಂತ ಮಕ್ಕಳ ಮೇಲೆ ತಂದೆ ಲೈಂಗಿಕ ದೌರ್ಜನ್ಯ ನಡೆಸುವುದಾದರೆ 1-3 ವರ್ಷದ ಮಕ್ಕಳನ್ನು ಆಯ್ದುಕೊಳ್ಳಿ. ಏಕೆಂದರೆ ಅವರಿಗೆ ಆ ಪುಟ್ಟ ವಯಸ್ಸಿನಲ್ಲಿ ನಡೆದ ಘಟನೆಗಳು ನೆನಪಿನಲ್ಲುಳಿಯುವುದಿಲ್ಲ ಎಂಬಂಥ ಮೃಗೀಯ ಸಲಹೆಗಳೂ ಗುಂಪಿನಿಂದ ಬರುತ್ತಿತ್ತು!

ಮಲಯಾಳಿ ವಿಡಿಯೋಕ್ಕೆ ಬೇಡಿಕೆ!

ಮಲಯಾಳಿ ವಿಡಿಯೋಕ್ಕೆ ಬೇಡಿಕೆ!

ಈ ಗುಂಪಿನಲ್ಲಿ ಭಾರತೀಯರು, ಅದರಲ್ಲೂ ಮಲಯಾಳಿ ಹೆಣ್ಣು ಮಕ್ಕಳ ವಿಡಿಯೋ ಮತ್ತು ಚಿತ್ರಗಳನ್ನೇ ಶೇರ್ ಮಾಡುವಂತೆ ಬೇಡಿಕೆ ಇಡಲಾಗುತ್ತಿತ್ತು. ಇಬ್ಬರು ಯುವಕರು ಪುಟ್ಟ ಹುಡುಗಿಯ ಮೇಲೆ ಅತ್ಯಾಚಾರ ಎಸಗುತ್ತಿರುವ ವಿಡಿಯೋವನ್ನು ಸಹ ಈ ಗುಂಪಿನಲ್ಲಿ ಹಂಚಲಾಗಿತ್ತು. ಆದರೆ ಸಂತ್ರಸ್ಥೆಯ ಕುರಿತು ಇಂದಿಗೂ ಮಾಹಿತಿ ಲಭ್ಯವಾಗಿಲ್ಲ.

ಗುಂಪಿಗೆ ಸೇರುವವರ ಅರ್ಹತೆ!

ಗುಂಪಿಗೆ ಸೇರುವವರ ಅರ್ಹತೆ!

ಈ ಗುಂಪಿಗೆ ಸೇರುವವರನ್ನು ಕೆಲವು ಅರ್ಹತೆ(!)ಯ ಮೇಲೆ ಆಯ್ಕೆ ಮಾಡಲಾಗುತ್ತಿತ್ತು. ಮೊದಲು ಅವರು ಶಿಶುಕಾಮಿಗಳಾಗಿರಬೇಕು! ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಚಿತ್ರ ಅಥವಾ ವಿಡಿಯೋ, ಮಕ್ಕಳ ಚಿತ್ರಗಳಲ್ಲದೆ ಬೇರೆ ಚಿತ್ರಗಳನ್ನು ಶೇರ್ ಮಾಡುವಂತಿಲ್ಲ. ಮಾಡಿದರೆ ತಕ್ಷಣವೇ ಅವರನ್ನು ಗುಂಪಿನಿಂದ ಹೊರಗಟ್ಟಲಾಗುತ್ತಿತ್ತು. ಗ್ರೂಪ್ ಅಡ್ಮಿನ್ ಅನುಮತಿ ಇಲ್ಲದೆ ಗ್ರೂಪ್ ಲಿಂಕ್ ಅನ್ನು ಯಾರೊಂದಿಗೂ ಶೇರ್ ಮಾಡುವಂತಿಲ್ಲ. ಅಡ್ಮಿನ್ ಅನುಮತಿ ಇಲ್ಲದೆ ಗುಂಪಿನಲ್ಲಿ ಯಾವುದೇ ಚಿತ್ರ ಅಥವಾ ವಿಡಿಯೋ ಶೇರ್ ಮಾಡುವಂತಿಲ್ಲ.

ಒನ್ ಇಂಡಿಯಾ ತಂಡಕ್ಕೆ ಮಾಹಿತಿ

ಒನ್ ಇಂಡಿಯಾ ತಂಡಕ್ಕೆ ಮಾಹಿತಿ

ಈ ಗುಂಪಿನ ಕುರಿತು ವ್ಯಕ್ತಿಯೊಬ್ಬರು ಒನ್ ಇಂಡಿಯಾ ಮಲಯಾಳಿ ತಂಡದ ಸದಸ್ಯರೊಬ್ಬರಿಗೆ ಮಾಹಿತಿ ನೀಡಿದ್ದರು. ಈ ಕುರಿತು ತಕ್ಷಣವೇ ಪೊಲೀಸರಿಗೆ ದೂರು ನೀಡಿ, ಪೊಲೀಸರೊಂದಿಗೆ ಒನ್ ಇಂಡಿಯಾ ತಂಡವೂ ತನಿಖೆ ಆರಂಭಿಸಿತ್ತು. ಉಪಾಯವಾಗಿ ಈ ಗುಂಪಿಗೆ ತಮ್ಮನ್ನೂ ಸೇರಿಸಿಕೊಳ್ಳುವಂತೆ ಮಾಡಿದ ಒನ್ ಇಂಡಿಯಾ ಸದಸ್ಯರೊಬ್ಬರು ಆ ಗುಂಪಿನ ಅಡ್ಮಿನ್ ವಿಶ್ವಾಸಗಳಿಸುವಲ್ಲಿ ಸಫಲರಾದರು. ನಂತರ ಆ ಗುಂಪಿನಲ್ಲಿ ನಡೆಯುವ ಎಲ್ಲಾ ಚರ್ಚೆಗಳನ್ನು ದಾಖಲೆ ಮಾಡಿಡುವುದಕ್ಕೆ ಆರಂಭಿಸಿದರು. ಅಲ್ಲಿನ ಅಶ್ಲೀಲ ಚರ್ಚೆಗಳ ಸ್ಕ್ರೀನ್ ಶಾಟ್ ಕಾಲಕಾಲಕ್ಕೆ ಪೊಲೀಸರಿಗೆ ತಲುಪುವಂತೆ ನೋಡಿಕೊಂಡರು.

ಫೇಸ್ ಬುಕ್ ನಲ್ಲೂ ಚರ್ಚೆ

ಫೇಸ್ ಬುಕ್ ನಲ್ಲೂ ಚರ್ಚೆ

ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಇಂಥದೊಂದು ಗುಂಪು ಕೆಲಸ ಮಾಡುತ್ತಿದೆ ಎಂದು ಇತ್ತೀಚೆಗೆ ಫೇಸ್ ಬುಕ್ ನಲ್ಲೂ ಚರ್ಚೆ ಮಾಡಲಾಗಿತ್ತು. ಆದರೆ ಈ ಕುರಿತು ಹೆಚ್ಚಿನ ದಾಖಲೆಗಳು ಸಿಕ್ಕಿಲ್ಲವಾದ್ದರಿಂದ ಈ ಚರ್ಚೆಯನ್ನು ಅಲ್ಲಿಗೇ ನಿಲ್ಲಿಸಲಾಗಿತ್ತು.

ತನ್ನ ನಂಬರ್ ನೀಡಿದ ಅಡ್ಮಿನ್

ತನ್ನ ನಂಬರ್ ನೀಡಿದ ಅಡ್ಮಿನ್

ಒನ್ ಇಂಡಿಯಾ ಸದಸ್ಯರ ಬಗ್ಗೆ ವಿಶ್ವಾಸ ಮೂಡುತ್ತಿದ್ದಂತೆಯೇ ತಮ್ಮ ಸಂಖ್ಯೆಯನ್ನು ಅಡ್ಮಿನ್ ಶರಿಫ್ ನೀಡಿದ. ಆದರೆ ಎಲ್ಲೋ ಅನುಮಾನದ ಎಳೆ ಕಾಣಿಸಿತೋ ಏನೋ, ಇದ್ದಕ್ಕಿದ್ದಂತೆ ಅಡ್ಮಿನ್ ಆ ಗ್ರೂಪ್ ಅನ್ನೇ ಡಿಲೀಟ್ ಮಾಡಿಬಿಟ್ಟ. ಆದರೇನಂತೆ? ಆತನ ಫೋನ್ ನಂಬರ್ ಮತ್ತು ಚರ್ಚಿಸಿದ ಸ್ಕ್ರೀನ್ ಶಾಟ್ ಗಳಿದ್ದವಲ್ಲ? ಪೊಲೀಸರಿಗೆ ಅಷ್ಟು ಸಾಕಾಯತು. ಸದ್ಯಕ್ಕೆ ಆತನ ಪೊಲೀಸ್ ವಶದಲ್ಲಿದ್ದಾನೆ. ಆತನವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಆ ಗುಂಪಿನಲ್ಲಿದ್ದ ಇನ್ನುಳಿದ 350 ಶಿಶುಕಾಮಿಗಳು ಮಾತ್ರ ಪತ್ತೆಯಾಗಿಲ್ಲ. ತನುಖೆ ನಡೆಯುತ್ತಿದೆ.

English summary
Oneindia exposes a secret telegram group of pedophiles in Kerala. Here is the details about how vulgar discussions on child abuse is recorded by Oneindia team. Finally Oneindia made a wonderful job to get the culprit arrested by Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X