ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರ ದೇಶ, ವಿದೇಶದಲ್ಲಿ ನಡೆದದ್ದೇನು? ಚಿತ್ರ ನೋಡಿ

By Kiran B Hegde
|
Google Oneindia Kannada News

ಬೆಂಗಳೂರು, ಫೆ. 11: ಭಾರತ ಹಾಗೂ ಇತರ ದೇಶಗಳಲ್ಲಿ ಬುಧವಾರ ನಡೆದ ಹಲವು ಘಟನಾವಳಿಗಳ ಕುರಿತು ಚಿತ್ರ ಸಹಿತ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ನೀಡಲಾಗಿದೆ.

ದಕ್ಷಿಣ ಕೊರಿಯಾದ ಇಶಿಯಾನ್‌ ನಗರದ ಸೇತುವೆಯೊಂದರ ಮೇಲೆ 100ಕ್ಕೂ ಹೆಚ್ಚು ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿರುವುದು ಜಗತ್ತಿನ ಗಮನ ಸೆಳೆದಿದೆ. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಬುಧವಾರ ರಾಜ್ಯಪಾಲರ ಸಮಾವೇಶ ಆಯೋಜಿಸಲಾಗಿತ್ತು.

ಅಫ್ಜಲ್ ಗುರುನನ್ನು ನೇಣಿಗೇರಿಸಿದ್ದರೂ ಕಾಶ್ಮೀರದಲ್ಲಿ ಜನರಿನ್ನೂ ಬದಲಾಗಿಲ್ಲ. ಅಫ್ಜಲ್ ಗುರು ಸಾವಿನ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದ ಪ್ರತಿಭಟನೆಗೆ ಭಾರೀ ಬೆಂಬಲ ವ್ಯಕ್ತವಾಗಿದೆ.

ಮುಂಬೈನ ಗ್ರಾಮವೊಂದರಲ್ಲಿರುವ ಆಧಾರ್ ಕಾರ್ಡ್ ನೋಂದಣಿ ಕೇಂದ್ರಕ್ಕೆ ಅಮೆರಿಕ ಸಚಿವರು ಭೇಟಿ ನೀಡಿ ಪರಿಶೀಲಿಸಿದರು.

100ಕ್ಕೂ ಹೆಚ್ಚು ವಾಹನಗಳ ಡಿಕ್ಕಿ

100ಕ್ಕೂ ಹೆಚ್ಚು ವಾಹನಗಳ ಡಿಕ್ಕಿ

ದಕ್ಷಿಣ ಕೊರಿಯಾದ ಇಶಿಯಾನ್‌ ನಗರದ ಸೇತುವೆಯೊಂದರ ಮೇಲೆ 100ಕ್ಕೂ ಹೆಚ್ಚು ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, 42ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮಂಜು ಕವಿದ ವಾತಾವರಣ ಇದ್ದದ್ದು ಅಪಘಾತಕ್ಕೆ ಕಾರಣ.

ಚಿನ್ನದ ಮಹಿಳೆಯರು

ಚಿನ್ನದ ಮಹಿಳೆಯರು

ಕೊಚ್ಚಿಯಲ್ಲಿ ನಡೆಯುತ್ತಿರುವ ನ್ಯಾಶನಲ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ತೆಲಂಗಾಣದ ಮಹಿಳಾ ಬ್ಯಾಡ್ಮಿಂಟನ್ ತಂಡ.

ಚಿನ್ನದ ಪುರುಷರು

ಚಿನ್ನದ ಪುರುಷರು

ಕೊಚ್ಚಿಯಲ್ಲಿ ನಡೆಯುತ್ತಿರುವ ನ್ಯಾಶನಲ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಕೇರಳದ ಪುರುಷರ ಬ್ಯಾಡ್ಮಿಂಟನ್ ತಂಡ.

ರಾಜ್ಯಪಾಲರ ಸಮಾವೇಶ

ರಾಜ್ಯಪಾಲರ ಸಮಾವೇಶ

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ರಾಜ್ಯಪಾಲರ ಸಮಾವೇಶದಲ್ಲಿ ಕಂಡುಬಂದ ದೃಶ್ಯ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.

ಅಫ್ಜಲ್‌ ಗುರು ಪರ ಪ್ರತಿಭಟನೆ

ಅಫ್ಜಲ್‌ ಗುರು ಪರ ಪ್ರತಿಭಟನೆ

ಅಫ್ಜಲ್ ಗುರು ಸಾವಿನ ವರ್ಷಾಚರಣೆ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಪ್ರತ್ಯೇಕತಾವಾದಿಗಳು ಕರೆ ನೀಡಿರುವ ಪ್ರತಿಭಟನೆ ಕರೆಯಲ್ಲಿ ಖಾಲಿಯಾಗಿರುವ ಬೀದಿಗಳಲ್ಲಿ ಸೈನಿಕರು ಪಹರೆ ನಡೆಸುತ್ತಿದ್ದಾರೆ.

ಜಾಗೃತಿ ಜಾಥಾ

ಜಾಗೃತಿ ಜಾಥಾ

ದೇಶದಲ್ಲಿ ಲಿಂಗಾನುಪಾತ ಕುಸಿಯುತ್ತಿರುವ ಕಾರಣ ಮಹಾರಾಷ್ಟ್ರದ ನಾಗಪುರದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದ ಬಾಲಕಿಯರು.

ಡ್ರಾಗನ್ ಬ್ಲೇಡ್

ಡ್ರಾಗನ್ ಬ್ಲೇಡ್

ಮಲೇಶಿಯಾದ ಕೌಲಾಲಂಪುರದ ಹೋಟೆಲ್ ಒಂದರಲ್ಲಿ ಜಾಕಿ ಚಾನ್ ಅವರು ತಮ್ಮ ಹೊಸ ಚಿತ್ರ 'ಡ್ರಾಗನ್ ಬ್ಲೇಡ್' ಪ್ರಚಾರ ನಿಮಿತ್ತ ಸುದ್ದಿಗೋಷ್ಠಿ ನಡೆಸಿದರು. ಅವರ ಜೊತೆ ನಟರಾದ ಜಾನ್ ಕ್ಯುಸಾಕ್, ಕೊಯಿ ಸಿ-ವಾನ್, ಆಡ್ರಿಯಾನ್ ಬ್ರಾಡಿ, ಲಿನ್ ಪೆಂಗ್ ಹಾಗೂ ಮಿಕಾ ವಾಂಗ್ ಇದ್ದರು.

ಭಾರೀ ತೆರೆಗೆ ಮುರಿದ ತಡೆಗಟ್ಟು

ಭಾರೀ ತೆರೆಗೆ ಮುರಿದ ತಡೆಗಟ್ಟು

ಲೆಬನಾನ್‌ನ ಬೈರಟ್‌ನಲ್ಲಿ ಮುರಿದು ಬಿದ್ದಿದ್ದ ಸಮುದ್ರದಂಚಿನ ತಡೆಗಟ್ಟುಗಳ ಕಲ್ಲುಗಳನ್ನು ಮುನಿಸಿಪಲ್ ಕೆಲಸಗಾರರು ತೆಗೆದರು. ಭಾರೀ ಬಿರುಗಾಳಿ ಹಾಗೂ ತೆರೆಗೆ ಸಮುದ್ರದಂಚಿನ ತಡೆಗಟ್ಟುಗಳು ಮುರಿದುಬಿದ್ದಿವೆ.

ಅನಿರೀಕ್ಷಿತ ಭೇಟಿ

ಅನಿರೀಕ್ಷಿತ ಭೇಟಿ

ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಕಂದಾಯ ಸಚಿವ ಯಶ್‌ಪಾಲ್ ಆರ್ಯ ಅವರೊಂದಿಗೆ ರುದ್ರಾಪುರದ ಜಿಲ್ಲಾಧಿಕಾರಿ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು.

ದಲಾಯಿ ಲಾಮಾ ನಕ್ಕರು

ದಲಾಯಿ ಲಾಮಾ ನಕ್ಕರು

ಡೆನ್‌ಮಾರ್ಕ್ ಪ್ರವಾಸದಲ್ಲಿರುವ ಬೌದ್ಧರ ಧಾರ್ಮಿಕ ಕುರು ದಲಾಯಿ ಲಾಮಾ ಅವರು ಕೊಪೆಂಹಗೆನ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದಾಗ ಸಂಭ್ರಮ ವ್ಯಕ್ತಪಡಿಸಿದ್ದು ಹೀಗೆ.

ಬೌದ್ಧರ ಪ್ರತಿಭಟನೆ

ಬೌದ್ಧರ ಪ್ರತಿಭಟನೆ

ಮಯನ್ಮಾರ್‍‌ನ ಯೋಗಾಂವ್‌ನಲ್ಲಿ ಬೌದ್ಧ ಸನ್ಯಾಸಿಗಳು ಪ್ರತಿಭಟನೆ ನಡೆಸಿದರು. ರೋಹಿಂಕ್ಯಾ ಅಲ್ಪಸಂಖ್ಯಾತರು ಸಂಪೂರ್ಣ ನಾಗರಿಕತೆ ಪಡೆಯದಿದ್ದರೂ ಮತದಾನ ಮಾಡಲು ಅಲ್ಲಿನ ಸರ್ಕಾರ ಅವಕಾಶ ನೀಡಿದೆ.

ಆಧಾರ್ ನೋಂದಣಿ ಕೇಂದ್ರಕ್ಕೆ ಅಮೆರಿಕ ಸಚಿವ

ಆಧಾರ್ ನೋಂದಣಿ ಕೇಂದ್ರಕ್ಕೆ ಅಮೆರಿಕ ಸಚಿವ

ಅಮೆರಿಕದ ಸಚಿವ ಜಾಕ್ ಲ್ಯೂ ಅವರು ತಮ್ಮ ದೇಶದ ರಾಜಭಾರಿ ರಿಚರ್ಡ್ ವರ್ಮಾ ಅವರೊಂದಿಗೆ ಮುಂಬೈನ ಕೋಳಿ ಗ್ರಾಮದಲ್ಲಿ ಏರ್ಪಡಿಸಿರುವ ಆಧಾರ್ ಕಾರ್ಡ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿದರು.

English summary
Here are the news with pictures happened on Wednesday in India and other countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X