ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರ ಜಗತ್ತಿನಾದ್ಯಂತ ನಡೆದ ಘಟನಾವಳಿಗಳು

By Kiran B Hegde
|
Google Oneindia Kannada News

ಬೆಂಗಳೂರು, ಫೆ. 14: ಭಾರತ ಹಾಗೂ ವಿದೇಶಗಳಲ್ಲಿ ಶನಿವಾರ ನಡೆಯುತ್ತಿರುವ ಹಲವು ಘಟನಾವಳಿಗಳ ಚಿತ್ರ ಸಹಿತ ಸುದ್ದಿಯನ್ನು ಇಲ್ಲಿ ನೀಡಲಾಗಿದೆ.

ನವದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ವಿಶ್ವ ಪುಸ್ತಕ ಮೇಳ ಆರಂಭವಾಗಿದೆ. ಈ ಸಂದರ್ಭದಲ್ಲಿ ಕಲಾವಿದರು ನರ್ತಿಸಿದರು. ಜನರಲ್ ಇಲೆಕ್ಟ್ರಿಕಲ್ಸ್ (ಜಿಇ) ಬಹುಮಾದರಿ ಉತ್ಪಾದನಾ ಸೌಲಭ್ಯವನ್ನು ಪುಣೆ ಹತ್ತಿರದ ಚಕನ್‌ನಲ್ಲಿ ಉದ್ಘಾಟಿಸಲಾಯಿತು.

ಮುಂಬೈನಲ್ಲಿ ಲಿಟ್‌ಫೆಸ್ಟ್ ಸಾಹಿತ್ಯೋತ್ಸವ ನಡೆಯುತ್ತಿದೆ. ಮಯನ್ಮಾರ್‌ನ ವಿರೋಧ ಪಕ್ಷದ ನಾಯಕಿ ಆಂಗ್ ಸಾನ್ ಸು ಕ್ಯಿ ಅವರು ನಟ್ ಮೌಕ್ ಪಟ್ಟಣದಲ್ಲಿ ಆಯೋಜಿಸಿದ್ದ ತಮ್ಮ ತಂದೆ ದಿ. ಆಂಗ್ ಸಾನ್ ಅವರ 100ನೇ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದರು. ಭೋಪಾಲ್‌ನಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಬಿಸಿ ಗಾಳಿ ಬಲೂನ್ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದೆ. ಇನ್ನಷ್ಟು ಸುದ್ದಿಗಳಿಗಾಗಿ ಕೆಳಗೆ ಕ್ಲಿಕ್ ಮಾಡಿ.

ಪ್ರಮಾಣ ವಚನ

ಪ್ರಮಾಣ ವಚನ

ನವದೆಹಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಅವರು ರಾಮ್ ಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ನೃತ್ಯ ಪ್ರದರ್ಶನ

ನೃತ್ಯ ಪ್ರದರ್ಶನ

ನವದೆಹಲಿಯಲ್ಲಿ ಆರಂಭವಾದ ವಿಶ್ವ ಪುಸ್ತಕ ಮೇಳದ ಉದ್ಘಾಟನೆ ಸಮಾರಂಭದಲ್ಲಿ ಕಲಾವಿದರು ನೃತ್ಯ ಪ್ರದರ್ಶಿಸಿದರು.

ಪುಸ್ತಕ ಪ್ರಿಯೆ

ಪುಸ್ತಕ ಪ್ರಿಯೆ

ನವದೆಹಲಿಯಲ್ಲಿ ಆರಂಭವಾದ ವಿಶ್ವ ಪುಸ್ತಕ ಮೇಳದಲ್ಲಿ ಬಾಲಕಿಯೋರ್ವಳು ಪುಸ್ತಕ ಓದುತ್ತಿರುವ ಆಕರ್ಷಕ ಭಂಗಿ.

ಮೋದಿ ಭಾಷಣದ ಪರಿ

ಮೋದಿ ಭಾಷಣದ ಪರಿ

ಜನರಲ್ ಇಲೆಕ್ಟ್ರಿಕಲ್ಸ್ (ಜಿಇ) ಬಹುಮಾದರಿ ಉತ್ಪಾದನಾ ಸೌಲಭ್ಯವನ್ನು ಪುಣೆ ಹತ್ತಿರದ ಚಕನ್‌ನಲ್ಲಿ ಉದ್ಘಾಟಿಸಿದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ ರೀತಿ.

ಸತ್ಕಾರ

ಸತ್ಕಾರ

ಮುಂಬೈನಲ್ಲಿ ಆರಂಭವಾಗಿರುವ ಲಿಟ್‌ಫೆಸ್ಟ್ ಸಾಹಿತ್ಯೋತ್ಸವದಲ್ಲಿ ಗುಜರಾತಿ ಕವಿ ಸಿತಾಂಶು ಯಶ್ಚಂದ್ರ ಮೆಹತಾ ಅವರನ್ನು ನಟಿ ನಂದಿತಾ ದಾಸ್ ಸತ್ಕರಿಸಿದರು.

ಶಂಖನಾದ

ಶಂಖನಾದ

ನ್ಯೂ ಜಿಲ್ಯಾಂಡ್‌ನ ಕ್ರಿಸ್ಚರ್ಚ್‌ನಲ್ಲಿ ಕ್ರಿಕೆಟ್ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಮೂರಿ ಎಂಬುವರು ಶಂಖ ಊದಿದರು.

ಸೂಕಿ ಬೆಂಬಲಿಗರು

ಸೂಕಿ ಬೆಂಬಲಿಗರು

ಮಯನ್ಮಾರ್‌ನ ವಿರೋಧ ಪಕ್ಷದ ನಾಯಕಿ ಆಂಗ್ ಸಾನ್ ಸು ಕ್ಯಿ ಅವರು ನಟ್ ಮೌಕ್ ಪಟ್ಟಣದಲ್ಲಿ ಆಯೋಜಿಸಿದ್ದ ತಮ್ಮ ತಂದೆ ದಿ. ಆಂಗ್ ಸಾನ್ ಅವರ 100ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ ತೆರಳುವಾಗ ಬೆಂಬಲಿಗರತ್ತ ಕೈ ಬೀಸಿದರು.

ಉತ್ಪಾದನಾ ಸೌಲಭ್ಯ ಉದ್ಘಾಟನೆ

ಉತ್ಪಾದನಾ ಸೌಲಭ್ಯ ಉದ್ಘಾಟನೆ

ಪುಣೆ ಸಮೀಪದ ಚಕನ್‌ನಲ್ಲಿ ಜನರಲ್ ಇಲೆಕ್ಟ್ರಿಕ್ಸ್‌ (ಜಿಇ) ನ ಬಹು ಮಾದರಿಯ ಉತ್ಪಾದನಾ ಸೌಲಭ್ಯವನ್ನು ನರೇಂದ್ರ ಮೋದಿ ಉದ್ಘಾಟಿಸಿದರು.

ಬಿಸಿ ಗಾಳಿ ಬಲೂನ್ ಆನಂದ

ಬಿಸಿ ಗಾಳಿ ಬಲೂನ್ ಆನಂದ

ಭೋಪಾಲ್‌ನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಬಿಸಿ ಗಾಳಿ ಬಲೂನ್ ಪ್ರದರ್ಶನದಲ್ಲಿ ಭಾಗವಹಿಸಿದ್ದ ಜನರು ಆನಂದಿಸುತ್ತಿರುವುದು.

ನ್ಯಾಯಾಲಯಕ್ಕೆ ದೇವಮಾನವ

ನ್ಯಾಯಾಲಯಕ್ಕೆ ದೇವಮಾನವ

ಲೈಂಗಿಕ ಹಗರಣ ಆರೋಪ ಎದುರಿಸುತ್ತಿರುವ ವಿವಾದಿತ ದೇವಮಾನವ ಆಸಾರಾಂ ಬಾಪು ಅವರನ್ನು ಜೋಧ್‌ಪುರದಲ್ಲಿರುವ ಸೆಶನ್ಸ್ ಕೋರ್ಟ್‌ಗೆ ಶುಕ್ರವಾರ ಹಾಜರುಪಡಿಸಲಾಯಿತು.

ಮುಘಲ್ ಉದ್ಯಾನದಲ್ಲಿ ರಾಷ್ಟ್ರಪತಿ

ಮುಘಲ್ ಉದ್ಯಾನದಲ್ಲಿ ರಾಷ್ಟ್ರಪತಿ

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲಾದ ಮುಘಲ್ ಗಾರ್ಡನ್‌ನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕುಳಿತು ಆನಂದಿಸಿದರು.

ನ್ಯಾಯಾಲಯಕ್ಕೆ ಹಾಜರು

ನ್ಯಾಯಾಲಯಕ್ಕೆ ಹಾಜರು

ಜಪಾನಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಆರೋಪಿಯೋರ್ವನನ್ನು ಜೈಪುರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಮತದಾರರು

ಮತದಾರರು

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಉಪ ಚುನಾವಣೆಯಲ್ಲಿ ಮತದಾರರು ಮತಹಾಕಲು ಬಂದ ದೃಶ್ಯ.

ಕಲಾ ಪ್ರದರ್ಶನ

ಕಲಾ ಪ್ರದರ್ಶನ

ಸೂರಜ್‌ಕುಂಡ್‌ನಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಕೌಶಲ್ಯ ಮೇಳದಲ್ಲಿ ಓಡಿಶಾ ಮೂಲದ ಕಲಾವಿದರು ಪ್ರದರ್ಶನ ನೀಡಿದರು.

ಸೇನಾ ಗೌರವ

ಸೇನಾ ಗೌರವ

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಧ್ರುವ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಮೇಜರ್ ತಾಹಿರ್ ಹುಸೇನ್ ಅವರಿಗೆ ಶುಕ್ರವಾರ ಸೇನಾ ಗೌರವ ಸಲ್ಲಿಸಲಾಯಿತು.

ಸೇನಾ ಗೌರವ

ಸೇನಾ ಗೌರವ

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಧ್ರುವ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಲೆಫ್ಟಿನೆಂಟ್ ಕರ್ನಲ್ ರಾಜೇಶ್ ಗುಲಾಟಿ ಅವರಿಗೆ ಶುಕ್ರವಾರ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಗೌರವ ಸಲ್ಲಿಸಿದರು.

English summary
Here are the news with pictures happened on 14th February in India and all over the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X