ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರ ಸುದ್ದಿ : ಶನಿವಾರದ ಘಟನಾವಳಿಗಳ ಮೇಲೆ ಪಕ್ಷಿನೋಟ

By Kiran B Hegde
|
Google Oneindia Kannada News

ಬೆಂಗಳೂರು, ಜ. 31: ದೇಶ ಹಾಗೂ ವಿದೇಶಗಳಲ್ಲಿ ಶನಿವಾರ ನಡೆದ ಪ್ರಮುಖ ಘಟನಾವಳಿಗಳ ಚಿತ್ರ ಸಹಿತ ಸಂಕ್ಷಿಪ್ತ ಸುದ್ದಿಗಳನ್ನು ಇಲ್ಲಿ ನೀಡಲಾಗಿದೆ.

ನವದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆ ಹಾಗೂ ಭೋಪಾಲ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಮುಖವಾಗಿವೆ. ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಯುತ್ತಿರುವ ಘರ್ ವಾಪಸಿ ಕಾರ್ಯಕ್ರಮಕ್ಕೆ ಕೋಲ್ಕತಾದಲ್ಲಿ ವಿರೋಧ ವ್ಯಕ್ತವಾಗಿದೆ. ಕ್ರೈಸ್ತರನ್ನು ಬಲವಂತವಾಗಿ ಹಿಂದೂ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಯಿತು.

ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ಬೇಟಿ ಬಚಾವು ಬೇಟಿ ಪಡಾವೋ ಕಾರ್ಯಕ್ರಮದ ನಿಮಿತ್ತ ಪಟಿಯಾಲಾದಲ್ಲಿ ಹೆಣ್ಣು ಮಗು ರಕ್ಷಿಸಿ ಜಾಗೃತಿ ಜಾಥಾ ನಡೆಯಿತು. ಚಿತ್ರ ಸಹಿತ ಸುದ್ದಿಗಳನ್ನು ಇಲ್ಲಿ ಕೆಳಗೆ ನೀಡಲಾಗಿದೆ.

ಜೀವಂತ ಶಿಲಾ ಬಾಲಿಕೆ!

ಜೀವಂತ ಶಿಲಾ ಬಾಲಿಕೆ!

ಕರ್ನಾಟಕದ ಶ್ರವಣಬೆಳಗೊಳದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವದಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಇದರಲ್ಲಿ ಬಾಲಕಿಯೋರ್ವಳು ದೇಹಕ್ಕೆ ಬಣ್ಣ ಹಚ್ಚಿಕೊಂಡು ಬೇಲೂರು ಶಿಲಾಬಾಲಿಕೆಯಂತೆ ನಿಂತಿದ್ದು ಎಲ್ಲರ ಗಮನ ಸೆಳೆಯಿತು.

ವಿವೇಕಾನಂದಮಯ

ವಿವೇಕಾನಂದಮಯ

ಚೆನ್ನೈನ ಮರೀನಾ ಸಮುದ್ರ ತಟದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ನಡಿಗೆಯಲ್ಲಿ ವಿವೇಕಾನಂದ ವೇಷ ಧರಿಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಲ್ ಚಕ್ರ ನೃತ್ಯ

ತಾಲ್ ಚಕ್ರ ನೃತ್ಯ

ಪುಣೆಯಲ್ಲಿ ಕಲಾವಿದೆಯರು ತಾಲ್ ಚಕ್ರ 2015 ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದರು.

ಸದೇಹ ನೃತ್ಯ

ಸದೇಹ ನೃತ್ಯ

ಇರಾನ್ ರಾಜಧಾನಿ ತೆಹ್ರಾನ್ ನಗರದಲ್ಲಿ ಇರಾನಿಯನ್ ಜೋರಾಸ್ಟ್ರಿಯನ್ ಬಾಲಕಿಯರು ಸದೇಹ್ ಹಬ್ಬದಲ್ಲಿ ನೃತ್ಯ ಪ್ರದರ್ಶನ ನೀಡಿದರು.

ನವಜೋಡಿಗಳ ಮತದಾನ

ನವಜೋಡಿಗಳ ಮತದಾನ

ಭೋಪಾಲದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಗಷ್ಟೇ ಮದುವೆಯಾದ ಜೋಡಿಯೊಂದು ಮತದಾನ ಮಾಡಿದರು.

ಆನಂದಮಯ ಜೀವನಕ್ಕೆ ಧ್ಯಾನ

ಆನಂದಮಯ ಜೀವನಕ್ಕೆ ಧ್ಯಾನ

ಹೈದರಾಬಾದ್‌ನ ಎಚ್‌ಐಸಿಸಿಯಲ್ಲಿ ಆಯೋಜಿಸಿದ್ದ 'ಆನಂದಮಯ ಜೀವನಕ್ಕಾಗಿ ಆಂತರಿಕ ಅಭಿವೃದ್ಧಿ' ಮೂರು ದಿನಗಳ ಶಿಬಿರದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಧ್ಯಾನ ಮಗ್ನರಾದರು.

ಲೆಬನಾನ್ ನೃತ್ಯ

ಲೆಬನಾನ್ ನೃತ್ಯ

ಸೂರಜ್‌ಕುಂಡ್‌ದಲ್ಲಿ ಆಯೋಜಿಸಿದ್ದ 29ನೇ ಅಂತಾರಾಷ್ಟ್ರೀಯ ಕರಕುಶಲ ಮೇಳದಲ್ಲಿ ಲೆಬನಾನ್‌ ದೇಶದ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು.

ದುಃಖಿತರನ್ನು ಸಂತೈಸಿದ ಸಚಿವರು

ದುಃಖಿತರನ್ನು ಸಂತೈಸಿದ ಸಚಿವರು

ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೃತರಾದ ಕರ್ನಲ್ ಮುನೀಂದ್ರ ನಾಥ ರಾಯ್ ಅವರ ದುಃಖತಪ್ತ ಕುಟುಂಬದ ಸದಸ್ಯರನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಂತೈಸಿದರು.

ಪ್ರಧಾನಿ ಜೊತೆ ಕಿರಣ್

ಪ್ರಧಾನಿ ಜೊತೆ ಕಿರಣ್

ನವದೆಹಲಿಯಲ್ಲಿ ಆಯೋಜಿಸಿದ್ದ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಜೊತೆ ನರೇಂದ್ರ ಮೋದಿ ಮಾತನಾಡಿದರು.

ಆಪ್ ಪ್ರಣಾಳಿಕೆ

ಆಪ್ ಪ್ರಣಾಳಿಕೆ

ನವದೆಹಲಿ ವಿಧಾನಸಭೆ ಚುನಾವಣೆ ನಿಮಿತ್ತ ಆಮ್ ಆದ್ಮಿ ಪಕ್ಷದ ಮುಖಂಡರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ನೀರಿಗಾಗಿ ಪ್ರಯಾಸ

ನೀರಿಗಾಗಿ ಪ್ರಯಾಸ

ಕಾಶ್ಮೀರದ ಅನಂತನಾಗ್ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯರು ಇಂದಿಗೂ ನೀರಿಗಾಗಿ ದೂರದಿಂದ ನೀರನ್ನು ತಲೆ ಮೇಲೆ ಹೊತ್ತು ತರುತ್ತಿದ್ದಾರೆ.

ಹೆಣ್ಣು ಮಗು ರಕ್ಷಿಸಿ

ಹೆಣ್ಣು ಮಗು ರಕ್ಷಿಸಿ

ಪಟಿಯಾಲಾದಲ್ಲಿ ವಿದ್ಯಾರ್ಥಿಗಳು 'ಹೆಣ್ಣು ಮಗು ರಕ್ಷಿಸಿ' ಜಾಗೃತಿ ರ್ಯಾಲಿ ನಡೆಸಿದರು.

ಇವರು ನಮಗೆ ಮಾದರಿ

ಇವರು ನಮಗೆ ಮಾದರಿ

ಭೋಪಾಲದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 106 ವರ್ಷ ವಯಸ್ಸಿನ ಮಹಿಳೆಯೋರ್ವರು ಮತ ಚಲಾಯಿಸಿದರು.

ಸರ್ಜನ್ ಜನರಲ್ ವೈಸ್ ಅಡ್ಮಿರಲ್

ಸರ್ಜನ್ ಜನರಲ್ ವೈಸ್ ಅಡ್ಮಿರಲ್

ಅಮೆರಿಕದ ಸರ್ಜನ್ ಜನರಲ್ ವೈಸ್ ಅಡ್ಮಿರಲ್ ಆಗಿರುವ ಭಾರತ ಮೂಲದ ವಿವೇಕ್ ಎಚ್. ಮೂರ್ತಿ ಅವರು ವಾಷಿಂಗ್ಟನ್‌ನಲ್ಲಿರುವ ಶ್ವೇತ ಭವನದಲ್ಲಿ ಆಯೋಜಿಸಿದ್ದ ಆರೋಗ್ಯ ಸಂಬಂಧಿ ಕಾರ್ಯಕ್ರಮದಲ್ಲಿ ಬರಾಕ್ ಒಬಾಮ ಎದುರು ಎದ್ದು ನಿಂತಿದ್ದು ಹೀಗೆ.

ಮಾದಕ ದ್ರವ್ಯದಿಂದ ಜೈಲಿನವರೆಗೆ

ಮಾದಕ ದ್ರವ್ಯದಿಂದ ಜೈಲಿನವರೆಗೆ

ಕೊಚ್ಚಿಯಲ್ಲಿ ಮೂವರು ಮಾಡೆಲ್‌ಗಳು ಸೇರಿದಂತೆ ಓರ್ವ ನಿರ್ದೇಶಕನನ್ನು ಮಾದಕದ್ರವ್ಯ ಸೇವನೆ ಆರೋಪದ ಮೇಲೆ ಬಂಧಿಸಲಾಗಿದೆ.

ಚರಸ್ ವಶ

ಚರಸ್ ವಶ

ಲೋಹಿತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಗಿಸುತ್ತಿದ್ದ ಚರಸ್ ಮಾದಕ ಪದಾರ್ಥವನ್ನು ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡರು.

ಚಾರ್ಲಿ ಹೆಬ್ಡೊ ವಿರುದ್ಧ ಪ್ರತಿಭಟನೆ

ಚಾರ್ಲಿ ಹೆಬ್ಡೊ ವಿರುದ್ಧ ಪ್ರತಿಭಟನೆ

ನವದೆಹಲಿಯ ಜಂತರ್ ಮಂತರ್‌ನಲ್ಲಿ ಫ್ರಾನ್ಸ್‌ನ ವ್ಯಂಗ್ಯಚಿತ್ರ ನಿಯತಕಾಲಿಕೆ ಚಾರ್ಲಿ ಹೆಬ್ಡೊ ವಿರುದ್ಧ ಮುಸ್ಲಿಂ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸಿದರು.

ಪಿಎಲ್‌ಎಫ್‌ಐ ಸದಸ್ಯರ ಬಂಧನ

ಪಿಎಲ್‌ಎಫ್‌ಐ ಸದಸ್ಯರ ಬಂಧನ

ಬಿಹಾರದ ರಾಂಚಿಯಲ್ಲಿ ಪಿಎಲ್‌ಎಫ್‌ಐ (People Liberation Front of India) ಸಂಘಟನೆಯ ನಾಲ್ವರು ಸದಸ್ಯರನ್ನು ಬಂಧಿಸಲಾಗಿದೆ.

ಮತಾಂತರಕ್ಕೆ ವಿರೋಧ

ಮತಾಂತರಕ್ಕೆ ವಿರೋಧ

ಕ್ರೈಸ್ತರನ್ನು ಬಲವಂತದಿಂದ ಹಿಂದೂ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ ಎಂದು ಆರೋಪಿಸಿ ಕೋಲ್ಕತಾದ ಕರ್ಮದಂಗಾ ಗ್ರಾಮದಲ್ಲಿ ಬಂಗಿಯಾ ಕ್ರಿಶ್ಚಿಯ ಪರಿಸೆಬಾ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

English summary
Here are many news with pictures happened in India and other countries on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X