ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶ, ವಿದೇಶಗಳ ಹಲವು ಸುದ್ದಿ ಚಿತ್ರ ಸಹಿತ ನೋಡಿ

By Kiran B Hegde
|
Google Oneindia Kannada News

ಬೆಂಗಳೂರು, ಫೆ. 19: ಭಾರತ ಹಾಗೂ ವಿದೇಶಗಳಲ್ಲಿ ನಡೆದ ಹಲವು ಪ್ರಮುಖ ಸುದ್ದಿಗಳ ಸಾರಾಂಶವನ್ನು ಚಿತ್ರ ಸಹಿತ ಇಲ್ಲಿ ನೀಡಲಾಗಿದೆ.

ಬೆಂಗಳೂರಿನ ಐಐಎಸ್‌ಸಿ ವಿದ್ಯಾರ್ಥಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ಮಧ್ಯಪ್ರದೇಶ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.

ನವದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗಾಜಿಯಾಬಾದ್‌ನಲ್ಲಿರುವ ಕೌಶಂಬಿ ಕಚೇರಿಯಲ್ಲಿ ನಡೆಸಿದ ಜನತಾ ದರ್ಬಾರ್‌ನಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಅಲಹಾಬಾದ್ ಐಐಟಿಯಲ್ಲಿ ವಿದ್ಯಾರ್ಥಿನಿಯೋರ್ವಳಿಗೆ ಹಂದಿ ಜ್ವರ ಕಾಣಿಸಿಕೊಂಡ ಕಾರಣ ವಿದ್ಯಾರ್ಥಿಗಳು ಮಾಸ್ಕ್ ತೊಟ್ಟು ಅಧ್ಯಯನ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂದಿರುವ ಕೊಡುಗೆಗಳನ್ನು ಸೂರತ್‌ನಲ್ಲಿ ಹರಾಜಿಗಿಡಲಾಗಿದೆ. ಇದರಲ್ಲಿ ಒಬಾಮ ಭಾರತಕ್ಕೆ ಬಂದಾಗ ಮೋದಿ ಧರಿಸಿದ್ದ ದುಬಾರಿ ಸೂಟ್ ಕೂಡ ಸೇರಿದೆ. ತಮಿಳುನಾಡಿನ ಗುಡಾಲೂರು ಪಟ್ಟಣ ಸಮೀಪದ ಪಟ್ಟವಯಲ್ ಗ್ರಾಮದಲ್ಲಿ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲಾಗಿದೆ.

ಐಐಎಸ್‌ಸಿಯಲ್ಲಿ ಮೋದಿ

ಐಐಎಸ್‌ಸಿಯಲ್ಲಿ ಮೋದಿ

ಬೆಂಗಳೂರಿನ ಐಐಎಸ್‌ಸಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾಗ ಅಲ್ಲಿನ ವೈಜ್ಞಾನಿಕ ವಸ್ತುಗಳನ್ನು ವೀಕ್ಷಿಸಿದ್ದರು.

ಪ್ರಧಾನಿ ಜೊತೆ ವಿದ್ಯಾರ್ಥಿಗಳು

ಪ್ರಧಾನಿ ಜೊತೆ ವಿದ್ಯಾರ್ಥಿಗಳು

ಬೆಂಗಳೂರಿನ ಐಐಎಸ್‌ಸಿ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಫೋಟೊ ತೆಗೆಸಿಕೊಂಡಿದ್ದು ಹೀಗೆ.

ವಿದ್ಯಾರ್ಥಿಗಳ ಜೊತೆ ಸಂವಾದ

ವಿದ್ಯಾರ್ಥಿಗಳ ಜೊತೆ ಸಂವಾದ

ಬೆಂಗಳೂರಿನ ಐಐಎಸ್‌ಸಿ ವಿದ್ಯಾರ್ಥಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು.

ಅಶ್ರುವಾಯು ಪ್ರಯೋಗ

ಅಶ್ರುವಾಯು ಪ್ರಯೋಗ

ಮಧ್ಯಪ್ರದೇಶ ಸರ್ಕಾರ ನಡೆಸಿದೆ ಎನ್ನಲಾದ ವೃತ್ತಿಪರ ಪರೀಕ್ಷೆ ಮಂಡಳಿ ಹಗರಣ ಹಾಗೂ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಭೂ ಸ್ವಾಧೀನ ಕಾಯ್ದೆಯ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.

ಜನರತ್ತ ಕೈ ಬೀಸಿದ ಕೇಜ್ರಿವಾಲ್

ಜನರತ್ತ ಕೈ ಬೀಸಿದ ಕೇಜ್ರಿವಾಲ್

ನವದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮ ಪತ್ನಿ ಸುನೀತಾ ಕೇಜ್ರಿವಾಲ್ ಜೊತೆ ಬೆಳಗಿನ ವಾಕಿಂಗ್ ನಡೆಸಿದಾಗ ಜನರತ್ತ ಕೈ ಬೀಸಿ ನಗೆ ಚೆಲ್ಲಿದರು.

ಜನರೊಂದಿಗೆ ಸಂವಾದ

ಜನರೊಂದಿಗೆ ಸಂವಾದ

ನವದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗಾಜಿಯಾಬಾದ್‌ನಲ್ಲಿರುವ ಕೌಶಂಬಿ ಕಚೇರಿಯಲ್ಲಿ ನಡೆಸಿದ ಜನತಾ ದರ್ಬಾರ್‌ನಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.

ಗಾಲ್ಫ್ ಸಿಖ್

ಗಾಲ್ಫ್ ಸಿಖ್

ಫ್ಲೈಯಿಂಗ್ ಸಿಖ್ ಎಂದೇ ಖ್ಯಾತಿ ಪಡೆದಿರುವ ಮಿಖಾ ಸಿಂಗ್ ಅವರು ನವದೆಹಲಿಯಲ್ಲಿ ಆಯೋಜಿಸಿರುವ ಇಂಡಿಯನ್ ಒಪನ್ ಸ್ಪರ್ಧೆಯಲ್ಲಿ ಗಾಲ್ಫ್ ಹಿಡಿದುನಿಂತಿದ್ದು ಹೀಗೆ.

ಹಂದಿ ಜ್ವರ ಭೀತಿ

ಹಂದಿ ಜ್ವರ ಭೀತಿ

ಅಲಹಾಬಾದ್ ಐಐಟಿಯಲ್ಲಿ ವಿದ್ಯಾರ್ಥಿನಿಯೋರ್ವಳಿಗೆ ಹಂದಿ ಜ್ವರ ಕಾಣಿಸಿಕೊಂಡ ಕಾರಣ ವಿದ್ಯಾರ್ಥಿಗಳು ಮಾಸ್ಕ್ ತೊಟ್ಟು ಅಧ್ಯಯನ ನಡೆಸಿದರು.

ಕೊಡುಗೆಗಳ ಹರಾಜು

ಕೊಡುಗೆಗಳ ಹರಾಜು

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂದಿರುವ ಕೊಡುಗೆಗಳನ್ನು ಸೂರತ್‌ನಲ್ಲಿ ಹರಾಜಿಗಿಡಲಾಗಿದೆ. ಇದರಲ್ಲಿ ಒಬಾಮ ಭಾರತಕ್ಕೆ ಬಂದಾಗ ಮೋದಿ ಧರಿಸಿದ್ದ ದುಬಾರಿ ಸೂಟ್ ಕೂಡ ಸೇರಿದೆ.

ಕೊಡುಗೆಗಳ ಹರಾಜು

ಕೊಡುಗೆಗಳ ಹರಾಜು

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂದಿರುವ ಕೊಡುಗೆಗಳನ್ನು ಸೂರತ್‌ನಲ್ಲಿ ಹರಾಜಿಗಿಡಲಾಗಿದೆ. ಇದರಲ್ಲಿ ಒಬಾಮ ಭಾರತಕ್ಕೆ ಬಂದಾಗ ಮೋದಿ ಧರಿಸಿದ್ದ ದುಬಾರಿ ಸೂಟ್ ಕೂಡ ಸೇರಿದೆ.

ಮನೀಶಾ ಯಜ್ಞ

ಮನೀಶಾ ಯಜ್ಞ

ಬಾಲಿವುಡ್ ನಟಿ ಮನೀಶಾ ಕೋಯಿರಾಲಾ ಅವರು ಕಾವಿ ಧರಿಸಿ ಸಾಧ್ವಿಗಳ ಜೊತೆ ಹರಿದ್ವಾರದಲ್ಲಿ ಯಜ್ಞ, ಯಾಗ ನಡೆಸಿದರು. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಮನೀಶಾ ಈಚೆಗಷ್ಟೇ ಗುಣಮುಖರಾಗಿದ್ದಾರೆ.

17 ವರ್ಷದ ಪೋರ ಪ್ರಾಂಶುಪಾಲ!

17 ವರ್ಷದ ಪೋರ ಪ್ರಾಂಶುಪಾಲ!

ಕ್ಯಾನ್ಸರ್‌ನಿಂದ ಬಳಲುತ್ತಿರುವ 17 ವರ್ಷ ವಯಸ್ಸಿನ ಹೇಮಂತ್ ಲೋಹಾರ್ ಅವರ ಆಸೆಯಂತೆ ಉದಯಪುರದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಒಂದು ದಿನದ ಮಟ್ಟಿಗೆ ಪ್ರಾಂಶುಪಾಲರಾಗಿ ಮಾಡಲಾಯಿತು.

ಸೋನಾಕ್ಷಿ ಸಿನ್ಹಾ ಪ್ರಚಾರ

ಸೋನಾಕ್ಷಿ ಸಿನ್ಹಾ ಪ್ರಚಾರ

ಮುಂಬೈನಲ್ಲಿ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಕಾಣಿಸಿಕೊಂಡಿದ್ದು ಹೀಗೆ.

ರಾಷ್ಟಪತಿ ಜೊತೆ ಧಾರ್ಮಿಕ ಮುಖಂಡರು

ರಾಷ್ಟಪತಿ ಜೊತೆ ಧಾರ್ಮಿಕ ಮುಖಂಡರು

ಯೂನಿವರ್ಸಲ್ ಸಿರಿಯನ್ ಆರ್ಥೊಡಾಕ್ಸ್ ಚರ್ಚ್‌ನ ಧಾರ್ಮಿಕ ಮುಖಂಡರಾದ ಎಚ್ಎಚ್ ಮೊರಾನ್ ಮೊರ್ ಇಗ್ನೇಶಿಯಸ್ ಅಫ್ರೆಮ್ II ಅವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿದರು.

ಅತ್ಯಾಚಾರ ಆರೋಪಿಗಳು

ಅತ್ಯಾಚಾರ ಆರೋಪಿಗಳು

ರೋಹ್ಟಕ್‌ನಲ್ಲಿ ನೇಪಾಳಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಗೈದು ಹತ್ಯೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿರುವ ಎಂಟು ಜನರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ನರಭಕ್ಷಕ ಹುಲಿ ಸೆರೆ

ನರಭಕ್ಷಕ ಹುಲಿ ಸೆರೆ

ತಮಿಳುನಾಡಿನ ಗುಡಾಲೂರು ಪಟ್ಟಣ ಸಮೀಪದ ಪಟ್ಟವಯಲ್ ಗ್ರಾಮದಲ್ಲಿ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲಾಗಿದೆ.

ಹಿಮ ಮಳೆ

ಹಿಮ ಮಳೆ

ಟರ್ಕಿಯ ಇಸ್ತಾನ್‌ಬುಲ್ ನಗರದಲ್ಲಿ ಭಾರೀ ಹಿಮ ಮಳೆಯಾಗುತ್ತಿದೆ. ನಗರದಲ್ಲಿ ಬೀಸಿದ ಭಾರೀ ಮಾರುತವು 60 ಸೆಂಟಿ ಮೀಟರ್‌ಗಳಷ್ಟು ಹಿಮವನ್ನು ನಗರದಲ್ಲಿ ಎಸೆದಿದೆ.

English summary
Here are the pictures of important news happened in India and other nations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X