ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌಮ್ಯಜಿತ್ ಜೀವ ಉಳಿಸಲು ಬೇಕಿದೆ 25 ಲಕ್ಷ ರೂ

Google Oneindia Kannada News

ನನ್ನ ಏಳು ವರ್ಷದ ಮಗ ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದು, ಆತನನ್ನು ಬದುಕಿಸಲು ದಯವಿಟ್ಟು ನೆರವಾಗಿ, ದಂಪತಿ ಚಿಕಿತ್ಸೆಗೆ ಹಣವನ್ನು ಹೊಂದಿಸಲು ಕ್ರೌಡ್ ಸೋರ್ಸಿಂಗ್ ಕೆಟ್ಟೊ ಮೂಲಕ ಒಂದು ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ ನನ್ನ ಏಳು ವರ್ಷದ ಮಗ ಮೂರನೇ ಬಾರಿಗೆ ಕ್ಯಾನ್ಸರ್‌ಗೆ ತುತ್ತಾಗಿದ್ದಾನೆ ಯಾವುದೇ ಚಿಕಿತ್ಸಕ ಆಯ್ಕೆಗಳಿಲ್ಲ.

2015ರಲ್ಲಿ ಮೊನಾಲಿಸಾಳ ಜೀವ ಹಠಾತ್ ತಿರುವು ಪಡೆದುಕೊಂಡಿತು. ಆಗ ಸೌಮ್ಯಜಿತ್‌ಗೆ 2 ವರ್ಷ ವಯಸ್ಸು, ಆಗಾಗ ವಾಂತಿಯಾಗುತ್ತಿತ್ತು, ಮೊನಾಲಿಸಾ ಅವಳ ಪತಿ ಶಿಬ್ನಥ್ ಇದು ಗಂಭೀರವಾದ ವಿಷಯವಲ್ಲ ಎಂದು ತಿಳಿದಿದ್ದರು.

ಆದರೆ ಸ್ವಲ್ಪ ದಿನಗಳಲ್ಲಿ ಸೌಮ್ಯಜಿತ್ ರಕ್ತವಾಂತಿಯನ್ನು ಮಾಡಿಕೊಳ್ಳಲು ಆರಂಭಿಸಿದ್ದ, ಅಷ್ಟೇ ಅಲ್ಲದೆ ಆತನ ದೇಹದ ಉಷ್ಣಾಂಶವೂ ಹೆಚ್ಚಾಗಿತ್ತು, ತುಂಬಾ ಜ್ವರವು ಕಾಡುತ್ತಿತ್ತು.

ತನ್ನ ಮಗನ ಕಾಯಿಲೆ ನೋಡಿ ಮೊನಾಲಿಸಾ ಗೊಂದಲಕ್ಕೊಳಗಾಗಿದ್ದಳು. ಇನ್ನು ತಡ ಮಾಡದೆ ಸೌಮ್ಯಜಿತ್‌ನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು, ವೈದ್ಯರು ಕೆಲವು ಚಿಕಿತ್ಸೆಗಳನ್ನು ಮತ್ತು ಕಾರ್ಯ ವಿಧಾನಗಳನ್ನು ಮಾಡಿದರು. ತನ್ನ ಮಗ ಕೆಲವೇ ದಿನಗಳಲ್ಲಿ ಸರಿ ಹೋಗುತ್ತಾನೆ ಎಂದು ಮೊನಾಲಿಸಾ ತಿಳಿದುಕೊಳ್ಳುತ್ತಾಳೆ, ಆದರೆ ಸೌಮ್ಯಜಿತ್ ಆರೋಗ್ಯ ಎಂದಿಗೂ ಸುಧಾರಿಸಲೇ ಇಲ್ಲ.

ಮೊನಾಲಿಸಾ ಹಾಗೂ ಶಿಬ್ನಥ್ ಮಗ ರೋಗದಿಂದ ಬಳಲುತ್ತಿರುವುದನ್ನು ನೋಡಿ ದಿನದಿಂದ ದಿನಕ್ಕೆ ದುರ್ಬಲರಾಗಿದ್ದರು. ಮತ್ತು ಹೆಚ್ಚು ಅಸಹನೆ ಕೂಡ ಇತ್ತು.

ಬೇರೆ ಆಯ್ಕೆಗಳಿರಲಿಲ್ಲ, ಶಿಬ್ನಥ್ ಸೌಮ್ಯಜಿತ್‌ನನ್ನು ಬೇರೊಂದು ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದರು. ಆದರೆ ದುರದೃಷ್ಟವಶಾತ್ ಶೀಘ್ರದಲ್ಲೇ ಪ್ರಪಂಚವೇ ತಲೆಯ ಮೇಲೆ ಬಿದ್ದ ಅನುಭವವಾಗಿತ್ತು. ಸಾಕಷ್ಟು ಪರೀಕ್ಷೆಗಳನ್ನು ಮಾಡಿಸಿದ ಬಳಿಕ ಸೌಮ್ಯಜಿತ್‌ಗೆ 'ಬಿ-ಸೆಲ್ ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲುಕೇಮಿಯಾ' ಎಂದರೆ ಅಪರೂಪದ ರಕ್ತದ ಕ್ಯಾನ್ಸರ್ ಇರುವುದು ತಿಳಿದುಬಂದಿತ್ತು.

ಈ ಸುದ್ದಿ ಕೇಳಿ ಮೊನಾಲಿಸಾಗೆ ಆಘಾತವಾಗಿತ್ತು. ಆಕೆಯ ಹೃದಯ ನುಚ್ಚುನೂರಾದ ಅನುಭವ, ಆಕೆ ಕೇಳಿದ್ದನ್ನು ನಂಬಲು ಸಾಧ್ಯವಾಗಿರಲಿಲ್ಲ.

ಅದೃಷ್ಟವಶಾತ್ ದೇವರ ಅನುಗ್ರಹದಿಂದ, ಸೌಮ್ಯಜಿತ್ ನೋವಿಗೆ ಪರಿಹಾರವಿದೆ ಎಂದು ತಿಳಿದುಬಂದಿತ್ತು, ನಾಲ್ಕು ವರ್ಷದ ಅವಧಿಗೆ ಹಲವು ಕೀಮೋ ಥೆರಪಿಗಳು, ರಕ್ತ ವರ್ಗಾವಣೆ ಮತ್ತು ಪ್ಲಾಸ್ಮಾ ವರ್ಗಾವಣೆಯಿಂದ ಸೌಮ್ಯಜಿತ್ ರಕ್ತ ಕ್ಯಾನ್ಸರ್‌ನಿಂದ ಜಯಗಳಿಸಿದ್ದ.

ದೇವರು ಸೌಮ್ಯಜಿತ್ ಜೀವನದಲ್ಲಿ ದುಃಖವನ್ನೇ ಇಟ್ಟಿದ್ದಾನೆ. 2019ರಲ್ಲಿ ಮತ್ತೆ ಕ್ಯಾನ್ಸರ್ ಮರುಕಳಿಸಿತ್ತು, ಈ ಬಾರಿ ಯುದ್ಧವು ಒಂದು ವರ್ಷದ್ದಾಗಿತ್ತು ಮತ್ತು ಅದು ಸೌಮ್ಯಜಿತ್‌ನ ಸಂತೋಷವನ್ನು ಸಂಪೂರ್ಣವಾಗಿ ಕಸಿದುಕೊಂಡಿತ್ತು.

ಭಾವನಾತ್ಮಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಮೊನಾಲಿಸಾ ಮತ್ತು ಶಿಬ್ನಥ್‌ನನ್ನು ಈ ರೋಗ ಬರಿದುಮಾಡಿತ್ತು. ಮಗನ ಚಿಕಿತ್ಸೆಗಾಗಿ ಭಿಕ್ಷಾಟನೆ ಮಾಡಿ, ಕುಟುಂಬ ಮತ್ತು ಸ್ನೇಹಿತರ ಬಳಿ ಸಾಲ ಪಡೆಯುವ ಮೂಲಕ ಹಣ ಸಂಗ್ರಹಿಸಿದರು.

ಸೌಮ್ಯಜಿತ್ ಚಿಕಿತ್ಸೆಗಾಗಿ ಪಶ್ಚಿಮ ಬಂಗಾಳದಿಂದ ಚೆನ್ನೈಗೆ ಸ್ಥಳಾಂತರಗೊಂಡಿದ್ದಾರೆ.ವರ್ಷಗಟ್ಟಲೆ ಅಪರಿಚಿತ ನಗರದಲ್ಲಿ ಕಾಲ ಕಳೆದ ನಂತರವೂ ಅಲ್ಲಿ ನಿರಂತರ ಹೋರಾಟ ನಡೆಯುತ್ತಿತ್ತು. ಸೌಮ್ಯಜಿತ್ ಆರೋಗ್ಯ ಸುಧಾರಿಸಿ ಮತ್ತು ಕ್ಯಾನ್ಸರ್ ಮುಕ್ತ ಎಂದು ಘೋಷಿಸಲಾಯಿತು. ಆದರೆ ಸೌಮ್ಯಜಿತ್‌ನನ್ನು ಬಿಡಲು ಮಾರಣಾಂತಿಕ ಕಾಯಿಲೆ ಇನ್ನೂ ಸಿದ್ಧವಾಗಿಲ್ಲ ಎಂದು ತೋರುತ್ತದೆ. ಕ್ಯಾನ್ಸರ್ ಮೂರನೇ ಬಾರಿಗೆ ಮರುಕಳಿಸಿತು.

ಈ ಸಮಯದಲ್ಲಿ ವೈದ್ಯರು ಸಮಯೋಚಿತ ಮೂಳೆ ಮಜ್ಜೆಯ ಕಸಿ ಮಾಡುವುದರಿಂದ ಸೌಮ್ಯಜಿತ್ ಅವರ ಜೀವವನ್ನು ಉಳಿಸಬಹುದು ಇಲ್ಲದಿದ್ದರೆ ಅವರು ಕ್ಯಾನ್ಸರ್‌ಗೆ ಬಲಿಯಾಗುತ್ತಾರೆ ಎಂದು ತಿಳಿಸಿದರು. ಮೂಳೆ ಮಜ್ಜೆಯ ಕಸಿಗೆ 25($ 34061.17) ಲಕ್ಷ ವೆಚ್ಚ ತಗುಲಲಿದೆ. ಇಷ್ಟು ಮೊತ್ತದ ಹಣವನ್ನು ಸಂಗ್ರಹಿಸಲು ಶಿಬ್ನಥ್‌ಗೆ ಸಾಧ್ಯವಾಗುತ್ತಿಲ್ಲ.

ಪಶ್ಚಿಮ ಬಂಗಾಳದಲ್ಲಿರುವ ತಮ್ಮ ಊರಿಗೆ ಹಿಂದಿರುಗಿದರು, ಶಿಬ್ನಾಥ್‌ಗೆ ತಿಂಗಳಿಗೆ 3 ಸಾವಿರ ರೂ ಕೂಲಿ ದೊರೆಯುತ್ತಿದೆ.ಆದರೆ ಚೆನ್ನೈನಂತಹ ನಗರದಲ್ಲಿ ನಿರುದ್ಯೋಗಿಯಾಗಿದ್ದನು.

'ಅಮ್ಮಾ ನಾವು ಯಾವಾಗ ಮನೆಗೆ ಹೋಗುತ್ತೇವೆ ಏಳು ವರ್ಷದ ಸೌಮ್ಯಜಿತ್ ತನ್ನ ತಾಯಿಗೆ ಕೇಳಿದ ಪ್ರಶ್ನೆ ಇದು', ಮೊನಾಲಿಸಾ, ಮಗನನ್ನು ತಬ್ಬಿಕೊಂಡು ಆದಷ್ಟು ಬೇಗ ಮಗಾ, ನೀನು ಗುಣಮುಖನಾದ ಬಳಿಕ ನಾವು ಮನೆಗೆ ಹೋಗೋಣ ಎಂದು ಮೊನಾಲಿಸಾ ತನ್ನ ಮಗನ ಕೆನ್ನೆಗೆ ಮುತ್ತನ್ನಿಟ್ಟು ಸಂತೈಸಿದಳು.

ಇದೀಗ ಈ ಬಡ ಕುಟುಂಬಕ್ಕೆ ನಿಮ್ಮಿಂದ ಮಾತ್ರ ಸಹಾಯ ಮಾಡಲು ಸಾಧ್ಯ, 25($ 34061.17) ಲಕ್ಷವನ್ನು ಹೊಂದಿಸಲು ನೀವು ನೆರವಾಗಿ, ಇದರಿಂದ ಅವರ ಪೋಷಕರಿಗೆ ಮಗ ಜೀವಂತವಾಗಿ ಸಿಗುತ್ತಾನೆ, ಮೂಳೆಯ ಕಸಿಯನ್ನೂ ಮಾಡಿಸಬಹುದಾಗಿದೆ.

ದಂಪತಿ ಎಳು ವರ್ಷದ ಸೌಮ್ಯಜಿತ್ ಗಾಗಿ ಹಣ ಸಂಗ್ರಹ ಮಾಡುತ್ತಿದ್ದಾರೆ, ದಂಪತಿ ಜನರ ಮೇಲೆ ನಂಬಿಕೆ ಇಟ್ಟಿದ್ದಾರೆ, ನೀವು ಸಹಾಯ ಮಾಡುವುದರಿಂದ ಅವರ ಜೀವನದಲ್ಲಿ ಬದಲಾವಣೆ ತರಬಹುದು, ಮುಖದಲ್ಲಿ ನಗು ಮೂಡಿಸಬಹುದು, ದೇಣಿಗೆ ಸಂಗ್ರಹದಲ್ಲಿ ಸಹಾಯ ಮಾಡಿ.

ಮಗನನ್ನು ಉಳಿಸಿಕೊಳ್ಳಲು ಕುಟುಂಬಕ್ಕೆ ನೆರವಾಗಿ
ನೀವು ಹೇಗೆ ಸಹಾಯ ಮಾಡಬಹುದು?
ನೀವು ಇಲ್ಲಿ ದಾನ ಮಾಡಬಹುದು
ನೀವು ಸೌಮ್ಯಜಿತ್ ಸುದ್ದಿಯನ್ನು ಫೇಸ್‌ಬುಕ್‌ನಲ್ಲಿ ಹಾಗೂ ವಾಟ್ಸಾಪ್‌ನಲ್ಲಿ ಶೇರ್ ಮಾಡಬಹುದು, ಇದರಿಂದ ಅವರ ಸಮಸ್ಯೆ ಹೆಚ್ಚು ಜನರನ್ನು ತಲುಪಿ ಕುಟುಂಬಕ್ಕೆ ಸಹಾಯವಾಗುತ್ತದೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X