ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜಾಪ್ರಭುತ್ವ ಮರುಸ್ಥಾಪನೆಗೆ ನೆರವು ನೀಡಿ: ಜನರ ಮುಂದೆ ಕೈಯೊಡ್ಡಿದ ಕಾಂಗ್ರೆಸ್

|
Google Oneindia Kannada News

ನವದೆಹಲಿ, ಮೇ 25: ಪಕ್ಷ ಸಂಘಟನೆಗೆ ಅಗತ್ಯವಿರುವ ಅನುದಾನದ ಕೊರತೆ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷ, ಪ್ರಜಾಪ್ರಭುತ್ವದ ಉಳಿವಿಗಾಗಿ ನೆರವು ನೀಡಿ ಎಂದು ಜನರ ಬಳಿ ಹೋಗಲಿದೆ.

ಪಕ್ಷವು ಹಣಕಾಸಿನ ಕೊರತೆ ಅನುಭವಿಸುತ್ತಿದೆ ಎಂಬುದನ್ನು ಹೇಳಿಕೊಳ್ಳಲು ಪಕ್ಷ ಮುಜುಗರಪಡಬಾರದು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿಕೆ ನೀಡಿದ ಮರುದಿನವೇ, ದೇಶದ ಅತ್ಯಂತ ಹಳೆಯ ಪಕ್ಷವು ಕ್ರೌಡ್‌ಫಂಡಿಂಗ್‌ಗೆ ಒಲವು ತೋರಿಸಿದೆ.

ಭಾವನಾತ್ಮಕ ಭಾಷಣ ಮಾಡಿದ ಸ್ಪೀಕರ್‌ ರಮೇಶ್ ಕುಮಾರ್ ಭಾವನಾತ್ಮಕ ಭಾಷಣ ಮಾಡಿದ ಸ್ಪೀಕರ್‌ ರಮೇಶ್ ಕುಮಾರ್

'ಕಾಂಗ್ರೆಸ್‌ಗೆ ನಿಮ್ಮ ಬೆಂಬಲ ಮತ್ತು ನೆರವು ಅಗತ್ಯವಿದೆ. ಸಣ್ಣ ಸಣ್ಣ ಕೊಡುಗೆಗಳೊಂದಿಗೆ 70 ವರ್ಷಗಳಿಂದ ಹೆಮ್ಮೆಯಿಂದ ಪಡೆದುಕೊಂಡಿದ್ದ ಪ್ರಜಾಪ್ರಭುತ್ವವನ್ನು ಪುನರ್‌ ಸ್ಥಾಪಿಸಲು ನಮಗೆ ಸಹಾಯ ಮಾಡಿ' ಎಂದು ಪಕ್ಷ ಟ್ವೀಟ್ ಮಾಡಿ ಕೋರಿಕೊಂಡಿದೆ.

ಕಾಂಗ್ರೆಸ್ ಆರ್ಥಿಕ ತೊಂದರೆ ಅನುಭವಿಸುತ್ತಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಮತ್ತು ಅಧಿಕಾರಕ್ಕೆ ಬರುವ ಅದರ ಪ್ರಯತ್ನಕ್ಕೆ ಹಿನ್ನಡೆಯುಂಟು ಮಾಡುತ್ತಿದೆ ಎಂದು ವರದಿಯೊಂದು ಉಲ್ಲೇಖಿಸಿತ್ತು.

Help us restore democray congress goes for crowdfunding

ಇದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ಶಶಿ ತರೂರ್, ಅನುದಾನದ ಕೊರತೆ ಅನುಭವಿಸುತ್ತಿರುವುದನ್ನು ಹೇಳಿಕೊಳ್ಳಲು ನಾವು ಮುಜುಗರ ಪಡಬೇಕಿಲ್ಲ. ಬಿಜೆಪಿಯ ಹಣದ ಚೀಲಗಳನ್ನು ಎದುರಿಸಲು ನಮಗೆ ಸಹಾಯ ಮಾಡುವಂತೆ ಎಲ್ಲ ನಾಗರಿಕರಿಗೆ ಮನವಿ ಮಾಡಬೇಕು ಎಂದು ಹೇಳಿದ್ದರು.

ಪಕ್ಷಕ್ಕೆ ಬರುತ್ತಿದ್ದ ಕಾರ್ಪೊರೇಟ್ ದೇಣಿಗೆ ಬಹುತೇಕ ಇಳಿಕೆಯಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ, ಕಾಂಗ್ರೆಸ್ ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿದೆ. 29 ರಾಜ್ಯಗಳ ಪೈಕಿ 13ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್, ಈಗ ಕೇವಲ 2 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಜತೆಗೆ ಕರ್ನಾಟಕದಲ್ಲಿ ಜೆಡಿಎಸ್ ಜತೆಗಿನ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ಹಿನ್ನಡೆ ಪಕ್ಷದ ದೇಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಇನ್ನೂ ಶಮನವಾಗದ ಡಿ.ಕೆ.ಶಿವಕುಮಾರ್ ಅಸಮಾಧಾನ ಇನ್ನೂ ಶಮನವಾಗದ ಡಿ.ಕೆ.ಶಿವಕುಮಾರ್ ಅಸಮಾಧಾನ

2016-17ರ ಅವಧಿಯಲ್ಲಿ ಕಾಂಗ್ರೆಸ್ ಆದಾಯ 225.36 ಕೋಟಿಯಷ್ಟಿತ್ತು ಎಂದು ಪ್ರಜಾಪ್ರಭುತ್ವ ಸುಧಾರಣೆಗಾಗಿ ಸಂಘಟನೆ (ಎಡಿಆರ್) ಎಂಬ ವಕೀಲರ ಗುಂಪು ನೀಡಿದ ವರದಿ ತಿಳಿಸಿತ್ತು. ಆ ವರ್ಷ ಪಕ್ಷ ಗಳಿಸಿದ್ದಕ್ಕಿಂತಲೂ 100 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದೆ ಎಂದು ಪಕ್ಷ ಸಲ್ಲಿಸಿರುವ ಆದಾಯ ತೆರಿಗೆ ರಿಟರ್ನ್ಸ್ ತಿಳಿಸಿದೆ.

ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರ ಸಭೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರ ಸಭೆ

1,034 ಕೋಟಿಗೂ ಹೆಚ್ಚಿನ ಆದಾಯವಿದೆ ಎಂದು ಘೋಷಿಸಿರಯವ ಬಿಜೆಪಿ, ಭಾರತದಲ್ಲಿನ ಉಳಿದ ಎಲ್ಲ ರಾಷ್ಟ್ರೀಯ ಪಕ್ಷಗಳಿಗಿಂತ ಶ್ರೀಮಂತವಾಗಿದೆ.

ಆಮ್ ಆದ್ಮಿ ಪಕ್ಷವು ಆನ್‌ಲೈನ್‌ನಲ್ಲಿ ಜನರಿಂದ ದೇಣಿಗೆ ಸಂಗ್ರಹಿಸಿತ್ತು. ಅದೇ ಮಾದರಿಯಲ್ಲಿ ಕಾಂಗ್ರೆಸ್, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಮುಂದಾಗಿದೆ.

English summary
Grand old political party of India congress is facing fund crunch. It decided to go for crowdfunding to retain its financial stability.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X