ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಮಗುವಿನ ಅಪರೂಪದ ಆರೋಗ್ಯ ಸಮಸ್ಯೆಗೆ ನಿಮ್ಮ ನೆರವಷ್ಟೇ ಪರಿಹಾರ...

Google Oneindia Kannada News

ಒಂದು ವರ್ಷದ ಈ ಪುಟ್ಟ ಮಗು ತನುಶ್ರೀ ಹುಟ್ಟಿದಾಗ ಆರೋಗ್ಯವಂತಳಾಗಿಯೇ ಇದ್ದಳು. ಆದರೆ ಆರು ತಿಂಗಳು ಕಳೆಯಿತಷ್ಟೆ. ಸರಾಗವಾಗಿ ಉಸಿರಾಡಲೂ ಆಗದೇ ಮಗುವಿಗೆ ಸಂಕಟ ಎದುರಾಯಿತು. ತುತ್ತು ಆಹಾರ ನುಂಗಲಾಗದೇ ಹೆಣಗುತ್ತಿದ್ದ ಮಗುವನ್ನು ಕಂಡು ತಾಯಿ ರಾಜೇಶ್ವರಿ ಅವರಿಗೂ ದಿಗಿಲಾಗಿತ್ತು.

ಆದರೆ ಈ ಮಗುವಿನ ಹೃದಯಕ್ಕೆ ಇಷ್ಟು ದೊಡ್ಡ ತೊಂದರೆ ಇದೆ ಎಂಬುದನ್ನು ಅವರಿಗೆ ಊಹಿಸಲೂ ಸಾಧ್ಯವಾಗಿರಲಿಲ್ಲ. ಪದೇ ಪದೇ ಮಗು ಉಸಿರುಗಟ್ಟುತ್ತಿದ್ದುದನ್ನು ಕಂಡ ಮಾರಿ ಮುತ್ತನ್ ಹಾಗೂ ರಾಜೇಶ್ವರಿ ದಂಪತಿ ಧರ್ಮಪುರಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋದರು. ಆದರೆ ಮಗುವಿನ ಪರಿಸ್ಥಿತಿ ಸುಧಾರಿಸಲೇ ಇಲ್ಲ. ಇತ್ತ ಇವರ ಆರ್ಥಿಕ ಸ್ಥಿತಿಯೂ ಕುಸಿಯುತ್ತಿತ್ತು.

ಖಾಸಗಿ ವೈದ್ಯರ ಬಳಿ ಅಲೆದು ಅಲೆದು ಸುಸ್ತಾದ ಅವರು ಕೊನೆಗೆ ಬೆಂಗಳೂರಿನ ಹಾದಿ ಹಿಡಿದರು. ಆದರೆ ಇಲ್ಲಿ ಅವರಿಗೆ ಆಘಾತಕಾರಿ ವಿಷಯವೊಂದನ್ನು ವೈದ್ಯರು ಹೇಳಿದರು.

 ಎರಡು ವರ್ಷವಾಗುವುದರ ಒಳಗೆ ಚಿಕಿತ್ಸೆ ನೀಡಬೇಕು

ಎರಡು ವರ್ಷವಾಗುವುದರ ಒಳಗೆ ಚಿಕಿತ್ಸೆ ನೀಡಬೇಕು

ಮಗುವಿನ ಆರೋಗ್ಯ ಸಮಸ್ಯೆ ಕುರಿತು ಬೆಂಗಳೂರಿನ ವೈದ್ಯರ ಬಳಿ ಮಾರಿ ಮುತ್ತನ್ ಹಾಗೂ ರಾಜೇಶ್ವರಿ ದಂಪತಿ ಅಭಿಪ್ರಾಯವನ್ನು ಪಡೆದುಕೊಂಡರು. ಆಗ ಮಗುವಿಗೆ ಹೃದಯದ ಸಮಸ್ಯೆಯಿದ್ದು, ಅವಳಿಗೆ ಎರಡು ವರ್ಷವಾಗುವ ಹೊತ್ತಿಗೆ ಚಿಕಿತ್ಸೆ ಪಡೆಯಲೇಬೇಕು ಎಂದು ವೈದ್ಯರು ಸೂಚಿಸಿದರು. ತನುಶ್ರಿಗೆ ಸದ್ಯ 1.11ವರ್ಷವಾಗಿದ್ದು, ಶೀಘ್ರವೇ ಚಿಕಿತ್ಸೆ ನೀಡಬೇಕಿದೆ.

 ತನುಶ್ರೀಗಿರುವ ಸಮಸ್ಯೆಯೇನು?

ತನುಶ್ರೀಗಿರುವ ಸಮಸ್ಯೆಯೇನು?

ಕೊರೊನಾ ಹಾಗೂ ಲಾಕ್ ಡೌನ್ ಪರಿಣಾಮವಾಗಿ ಪೋಷಕರಿಗೆ ತಕ್ಷಣವೇ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ. ಜೊತೆಗೆ ಚಿಕಿತ್ಸೆಗೆ ಹಣ ಸಂಗ್ರಹಿಸಲೂ ಸಾಧ್ಯವಾಗಿಲ್ಲ. ಈಚೆಗೆ ಧರ್ಮಪುರಿಯಲ್ಲಿನ ಆರೋಗ್ಯ ಶಿಬಿರವೊಂದಕ್ಕೆ ಈ ದಂಪತಿ ಭೇಟಿ ನೀಡಿದ್ದು, ಅಲ್ಲಿ ತನುಶ್ರೀಗೆ ಜನನ ಸಮಯ ಕಾಣಿಸಿಕೊಳ್ಳುವ, ಹೃದಯದ ನಾಲ್ಕು ದೋಷಗಳ ಸಂಯೋಜನೆಯಿಂದ ಉಂಟಾಗುವ ಅಪರೂಪದ ಸಮಸ್ಯೆ (ಫ್ಯಾಲಟ್ ಆಫ್ ಟೆಟ್ರಾಲಜಿ) ಇರುವುದು ಪತ್ತೆಯಾಯಿತು. ಶ್ವಾಸಕೋಶಕ್ಕೆ ರಕ್ತ ಸಂಚಲನೆಯಲ್ಲಿ ತೊಂದರೆ ಉಂಟು ಮಾಡುವ ಲಾರ್ಜ್ ಸಬಾರ್ಟಿಕ್ ವಿಎಸ್ ಡಿ, ಗಂಭೀರ ಹೃದಯ ಸಮಸ್ಯೆ ಎನಿಸಿಕೊಂಡಿರುವ RVOTO (Right ventricle outflow tract) ಇರುವುದಾಗಿಯೂ ತಿಳಿದುಬಂತು.

 ಚಿಕಿತ್ಸೆಗೆ ತಗುಲುವ ವೆಚ್ಚ ಎಷ್ಟು?

ಚಿಕಿತ್ಸೆಗೆ ತಗುಲುವ ವೆಚ್ಚ ಎಷ್ಟು?

ಹೃದಯದ ನಾಲ್ಕು ದೋಷಗಳ ಸಂಯೋಜನೆಯಿಂದ ಉಂಟಾಗುವ ಅಪರೂಪದ ಸಮಸ್ಯೆ (ಫ್ಯಾಲಟ್ ಆಫ್ ಟೆಟ್ರಾಲಜಿ) ದೋಷ ಸರಿಪಡಿಸುವಂಥ ಶಸ್ತ್ರಚಿಕಿತ್ಸೆ ನೀಡಬೇಕಿದೆ. ಶಸ್ತ್ರಚಿಕಿತ್ಸೆ, ಐಸಿಯು, ಆಸ್ಪತ್ರೆ ವಾಸ ಹಾಗೂ ಔಷಧಿಗಳು ಎಲ್ಲವೂ ಸೇರಿ 2,80,000 ರೂ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

 ಕಟ್ಟಡ ಕಾರ್ಮಿಕರಾದ ದಂಪತಿಗೆ ನೆರವಾಗಿ...

ಕಟ್ಟಡ ಕಾರ್ಮಿಕರಾದ ದಂಪತಿಗೆ ನೆರವಾಗಿ...

ಆದರೆ ದಿನಗೂಲಿ ನೌಕರರಾದ ಮಾರಿಮುತ್ತನ್ ಹಾಗೂ ರಾಜೇಶ್ವರಿ ದಂಪತಿಗೆ ಇರುವುದು ಧರ್ಮಪುರಿ ಜಿಲ್ಲೆಯ ಕೋಳಗಂಪಟ್ಟಿ ಎಂಬಲ್ಲಿ. ಅವರಿಗೆ ಇಷ್ಟು ದೊಡ್ಡ ಮಟ್ಟದ ಹಣವನ್ನು ಸಂಪಾದಿಸಲು ಕಷ್ಟವಿದೆ. ಅವರಿಗೆ ಆಸ್ತಿ ಪಾಸ್ತಿಯೂ ಇಲ್ಲದ ಕಾರಣ ದಾನಿಗಳು ನೀಡುವ ಹಣವೇ ಅವರಿಗೆ ತಮ್ಮ ಮಗಳನ್ನು ಉಳಿಸಿಕೊಳ್ಳಲು ಆಧಾರವಾಗಿದೆ. ನಿಮ್ಮ ಸಹಾಯದ ನಿರೀಕ್ಷೆಯಲ್ಲಿದ್ದಾರೆ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X