ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಗಳೆದಂತೆ ಹದಗೆಡುತ್ತಿದೆ ಮೋಕ್ಷಿತಾಳ ಹೃದಯ: ಸಹಾಯ ಮಾಡಿ

Google Oneindia Kannada News

ಕಳೆದ ಅಕ್ಟೋಬರ್ 25ರಂದು ನಿಂದ್ರಾ ಮೋಕ್ಷಿತಾ ತನ್ನ ಮೊದಲ ಒಂದು ವರ್ಷ ಪೂರೈಸಿದ್ದಾಳೆ. ಆಕೆ ಕನ್ನಯಾ ಮತ್ತು ಲೀಲಾವತಿ ದಂಪತಿಯ ಮೊದಲ ಮಗು. ತಿರುಪತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಆಕೆಯ ಜನನವಾಯಿತು.

ಆರಂಭದಲ್ಲಿ ಆಕೆ ಚೆನ್ನಾಗಿ ಮತ್ತು ಆರೋಗ್ಯವಂತಳಾಗಿರುವಂತೆ ಕಂಡಿತ್ತು. ಆದರೆ ಐದನೇ ತಿಂಗಳಲ್ಲಿ ಆಕೆಯಲ್ಲಿ ವಿಪರೀತ ಜ್ವರ ಶುರುವಾಯಿತು. ಆಕೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹೃದಯ ಸ್ಥಿತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಆಕೆಯನ್ನು ತಿರುವಳ್ಳೂರಿಗೆ ಕರೆದೊಯ್ದು ಆಕೆಯ ಆರೋಗ್ಯ ಸ್ಥಿತಿಯ ಬಗ್ಗೆ ಸ್ಕ್ಯಾನ್ ಮಾಡಿಸಿ ವರದಿ ತರುವಂತೆ ಸೂಚಿಸಿದರು.

ತಿರುವಳ್ಳೂರು ಸರ್ಕಾರಿ ಆಸ್ಪತ್ರೆಗೆ ಶಿಶು ಹೃದ್ರೋಗ ತಜ್ಞರು ತಿಂಗಳಿಗೆ ಒಮ್ಮೆ ಅಸ್ಪತ್ರೆಗೆ ಭೇಟಿ ನೀಡುವುದರಿಂದ ಅವರ ಬಳಿಯಿಂದ ಅಭಿಪ್ರಾಯ ಪಡೆದುಕೊಳ್ಳಬಹುದು ಎಂದು ಅಲ್ಲಿಗೆ ತೆರಳಲು ಸೂಚಿಸಲಾಗಿತ್ತು. ಬಳಿಕ ಮೋಕ್ಷಿತಾಳಲ್ಲಿ ಸಮಸ್ಯೆ ಏನೆಂದು ಅಲ್ಲಿ ಪತ್ತೆಯಾಯಿತು. ಅದರ ಬೆನ್ನಲ್ಲೇ ಸಾಂಕ್ರಾಮಿಕ ಪಿಡುಗಿನ ಸನ್ನಿವೇಶವೂ ಎದುರಾಯಿತು.

ತ್ವರಿತ ಶಸ್ತ್ರಚಿಕಿತ್ಸೆ ಅಗತ್ಯ

ತ್ವರಿತ ಶಸ್ತ್ರಚಿಕಿತ್ಸೆ ಅಗತ್ಯ

ಅಲ್ಲಿಂದ ಆಕೆಗೆ ಔಷಧಗಳನ್ನು ನೀಡಲಾಗುತ್ತಿದೆ ಮತ್ತು ಆಕೆಯ ಆರೋಗ್ಯ ಹಗದೆಡುತ್ತಿದೆ. ಆಕೆಯ ಶಸ್ತ್ರಚಿಕಿತ್ಸೆಯನ್ನು ಮತ್ತಷ್ಟು ಮುಂದೂಡುವುದು ಸುಲಭವಲ್ಲ.

ಯಾವ ಸಮಸ್ಯೆಗಳಿವೆ?

ಯಾವ ಸಮಸ್ಯೆಗಳಿವೆ?

ಮೋಕ್ಷಿತಾಳಲ್ಲಿ ದೊಡ್ಡ ಪೆರಿಮೆಂಬ್ರನಸ್ ವಿಎಸ್‌ಡಿ, ಬೈಡೈರೆಕ್ಷನಲ್ ಶಂಟ್, ಹೆಚ್ಚುವರಿ ಸ್ನಾಯು ವಿಎಸ್‌ಡಿಗಳು, ಶ್ವಾಸಕೋಶದ ತೀವ್ರತರವಾದ ಅಸಹಜ ಸಂಕುಚಿತ (ಸ್ಟೆನೋಸಿಸ್) ಸ್ಥಿತಿ ಪತ್ತೆಯಾಗಿದೆ.

ಶಸ್ತ್ರಚಿಕಿತ್ಸೆಗಳು

ಶಸ್ತ್ರಚಿಕಿತ್ಸೆಗಳು

ಚಿಕಿತ್ಸೆ- ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ, ಐಸಿಆರ್: ವಿಎಸ್‌ಡಿಗಳು+ ಶ್ವಾಸಕೋಶ ವಾಲ್ವೋಟಮಿ ಚಿಕಿತ್ಸೆಗಳ ಮೂಲಕ ಆಕೆಯ ಆರೋಗ್ಯವನ್ನು ಸರಿಪಡಿಸಬೇಕಿದೆ.

ಚಿಕಿತ್ಸೆಯ ವೆಚ್ಚ

ಚಿಕಿತ್ಸೆಯ ವೆಚ್ಚ

ಅಂದಾಜು ವೆಚ್ಚ- ಶಸ್ತ್ರಚಿಕಿತ್ಸೆ, ಐಸಿಯು ಮತ್ತು ಆಸ್ಪತ್ರೆ ವಾಸ, ಶಸ್ತ್ರಚಿಕಿತ್ಸೆ ಬಳಿಕದ ತಪಾಸಣೆಗಳು ಮತ್ತು ಔಷಧೋಪಚಾರ ಸೇರಿದಂತೆ 2,60,000 ರೂ.


ಕನ್ನಯಾ ಪಡೆದಿರುವುದು ಕೈಗಾರಿಕಾ ತರಬೇತಿಯನ್ನು. ಅವರು ಮೆಷಿನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X