ತನ್ನ ಕನಸಿನಂತೆ ಬದುಕಲು ಬಾಲಕಾರ್ಮಿಕ ಯದುವಿಗೆ ನೆರವು ನೀಡಿ
8 ವರ್ಷದ ಯದು ತಮಿಳುನಾಡಿನ ಕೊಳಗೇರಿ ಹುಡುಗ... ಇದೀಗ ತನ್ನ ಕನಸಿನಂತೆ ಬದುಕುತ್ತಿದ್ದಾನೆ
ಯದು ಹೆಸರಿನ ಹುಡುಗ ತಮಿಳು ನಾಡಿನ ಒಂದು ಕೊಳಗೇರಿ ಪ್ರದೇಶದ ಬಾಲಕ. ಆತನ ತಂದೆ-ತಾಯಿ ದಿನಗೂಲಿ ಮಾಡುವುದರ ಮೂಲಕ ಜೀವನವನ್ನು ನಡೆಸುತ್ತಿದ್ದರು. ಕಾರ್ಮಿಕ ಕೆಲಸದಲ್ಲಿ ಸಾಕಷ್ಟು ವೇತನ ಇಲ್ಲದೆ ಇರುವುದರಿಂದ ಅವರ ನಿತ್ಯದ ಬೇಕು-ಬೇಡಗಳಿಗೆ ಮಾತ್ರ ಸೀಮಿತವಾಗಿತ್ತು. ಯದುವಿಗೆ ಶಾಲೆಗೆ ಹೋಗಬೇಕು ಎನ್ನುವ ಕನಸು ಹಾಗೂ ಆಸಕ್ತಿ ಹೊಂದಿದ್ದರೂ ಸಹ ಮಗನನ್ನು ಶಾಲೆಗೆ ಕಳುಹಿಸಲು ಪಾಲಕರಿಗೆ ಸಾಧ್ಯವಾಗುತ್ತಿರಲಿಲ್ಲ. ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಹೊಂದಿರುವ ಯದು ಮುಂದೊಂದು ದಿನ ಉತ್ತಮ ಕ್ರೀಡಾಪಟು ಆಗಬೇಕು ಎನ್ನುವ ಆಸೆ ಹಾಗೂ ಕನಸನ್ನು ಹೊಂದಿದ್ದನು.
ಯದುಗೆ ಸಹಾಯ ಮಾಡಲು ಇಲ್ಲಿ ಧನ ಸಹಾಯ ಮಾಡಿ
ಯದುವಿನ ತಾಯಿ ಸಮಾಜ ಸೇವಕಿಯೊಬ್ಬರ ಮನೆಕೆಲಸಕ್ಕೆ ಹೋಗುತ್ತಿದ್ದಳು. ಆ ಮನೆ ಒಡತಿಯಾದವರು ಮಕ್ಕಳ ಹಕ್ಕು ಮತ್ತು ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಶಾಲೆಗೆ ಸೇರಿಸುವುದು ಹಾಗೂ ಅಂತಹವರಿಗೆ ಸೂಕ್ತ ನ್ಯಾಯ ಕೊಡಿಸುವಂತಹ ಕೆಲಸ ಮಾಡಿಸುತ್ತಿದ್ದರು. ಅಲ್ಲದೆ ಅಂತಹ ಮಕ್ಕಳಿಗೆ ವಿದ್ಯಾಭ್ಯಾಸ ಹೇಳಿಕೊಡುತ್ತಿದ್ದರು. ಬಹುಬೇಗ ಎಲ್ಲವನ್ನು ಕಲಿಯುವ ಹುಡುಗನಾದ ಯದು ಎಲ್ಲಾ ಸಂಗತಿಯನ್ನು ವೇಗವಾಗಿ ಅರಿತುಕೊಳ್ಳುತ್ತಿದ್ದ. ಹೇಳಿಕೊಟ್ಟ ವಿದ್ಯಾಭ್ಯಾಸಗಳನ್ನು ಬಹುಬೇಗ ಮುಗಿಸುತ್ತಿದ್ದ. ಎಲ್ಲಾ ಮಕ್ಕಳಿಗಿಂತ ಬುದ್ಧಿವಂತ ಹಾಗೂ ಚುರುಕು ಬುದ್ಧಿಯನ್ನು ಹೊಂದಿದ್ದ. ಎಷ್ಟೊಂದು ಬುದ್ಧಿವಂತ ನಿಮ್ಮ ಹುಡುಗ ಎಂದು ಅವನ ತಾಯಿಗೆ ಹೇಳಿದರು. ಜೊತೆಗೆ ಅವನನ್ನು ಶಾಲೆಗೆ ಕಳುಹಿಸುವಂತೆ ಉತ್ತೇಜನ ನೀಡಿದರು. ಆದರೆ ಯದುವಿನ ತಾಯಿ ನಿರುತ್ಸಾಹದಿಂದ ತಮ್ಮ ಅಸಹಾಯಕತೆಯನ್ನು ಹೇಳಿಕೊಂಡರು. ಕುಟುಂಬದಲ್ಲಿ ಸರಿಯಾಗಿ ಹೊತ್ತಿಗೆ ಉಣ್ಣುವಷ್ಟು ಅನುಕೂಲತೆ ನಮ್ಮಲ್ಲಿ ಇಲ್ಲ. ಇನ್ನೂ ಯದುವನ್ನು ಶಾಲೆಗೆ ಹೇಗೆ ಕಳುಹಿಸುವುದು? ಅದು ಕನಸಿನ ಮಾತು ಎಂದು ಹೇಳಿದರು.
ಆದರೆ ನಂತರದ ಅವರ ಪರಿಸ್ಥಿತಿಯು ಸುಧಾರಣೆ ಕಂಡಿತು.
ಒಂದು ದಿನ ಸಮಾಜ ಸೇವಕಿಯಾದ ಅವರು ನಿಮ್ಮ ಮಗುವಿನ ಕನಸಂತೆ ಆತ ಶಿಕ್ಷಣವನ್ನು ಕಲಿಯಲು ಅವಕಾಶ ಮಾಡಿಕೊಡಿ. ಅದಕ್ಕಾಗಿ ನೀವು ಹೆಚ್ಚು ಹಣವನ್ನು ವ್ಯಯಿಸಬೇಕಿಲ್ಲ. ಹತ್ತಿರದ ಸರ್ಕಾರಿ ಶಾಲೆಗೆ ಸೇರಿಸಿ. ಅಲ್ಲಿ ಮಗುವಿಗೆ ಮಧ್ಯಾಹ್ನದ ಊಟ ದೊರೆಯುವುದು. ಮಗುವಿನ ಹೊಟ್ಟೆ ತುಂಬುವುದರ ಜೊತೆಗೆ ಜ್ಞಾನವೂ ವೃದ್ಧಿಯಾಗುವುದು. ಯಾವುದೇ ಖರ್ಚಿಲ್ಲದೆ ಮಗು ಉತ್ತಮ ಆರೋಗ್ಯ, ವಿದ್ಯಾಭ್ಯಾಸ ಹಾಗೂ ಕಲಿಕೆಯನ್ನು ಪಡೆದುಕೊಳ್ಳುವುದು. ಬೇಗ ಶಾಲೆಗೆ ಸೇರಿಸಬೇಕು ಎಂದು ಆಜ್ಞಾಪಿಸಿದರು.
ಇಂದು ಯದು ಶಾಲೆಗೆ ಹೋಗುತ್ತಿದ್ದಾನೆ. ಆಗಲೇ ಮೂರು ವರ್ಷದಿಂದ ಶಾಲೆಗೆ ಹೋಗುತ್ತಿದ್ದ ಈ ಹುಡುಗ ಮೂರನೇ ತರಗತಿಯಲ್ಲಿ ಓದುತ್ತಿದ್ದಾನೆ. ಅವನು ತನ್ನ ಬಾಲ್ಯದ ಜೀವನವನ್ನು ಅತ್ಯಂತ ಖುಷಿಯಿಂದ ಅನುಭವಿಸುತ್ತಿದ್ದಾನೆ. ಅವನ ಕನಸಿನಂತೆ ವಿದ್ಯಾಭ್ಯಾಸ ಹಾಗೂ ಆಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಯದು ಪ್ರತಿ ದಿನ ಅನ್ನಾಮೃತ ಯೋಜನೆಯಡಿಯಲ್ಲಿ ಮಧ್ಯಾಹ್ನದ ಊಟವನ್ನು ಪಡೆದುಕೊಳ್ಳುತ್ತಿದ್ದಾನೆ. ಅನ್ನಾಮೃತ ಯೋಜನೆ ಅಡಿಯಲ್ಲಿ ನೀಡುವ ಮಧ್ಯಾಹ್ನದ ಊಟವು ಅತ್ಯುತ್ತಮವಾಗಿದೆ. ಪೌಷ್ಠಿಕಾಂಶದಿಂದ ಕೂಡಿರುವ ರುಚಿಕರವಾದ ಮಧ್ಯಾಹ್ನದ ಊಟವನ್ನು ನೀಡುತ್ತಾ ಬರುತ್ತಲಿದೆ. ಈ ಯೋಜನೆಯ ಅಡಿಯಲ್ಲಿ ಇಂದು ಸಾವಿರಾರು ಮಕ್ಕಳು ಹಸಿವನ್ನು ನೀಗಿಸಿಕೊಳ್ಳುತ್ತಿದ್ದಾರೆ. ಬಡತನದಲ್ಲಿ ಇರುವ ಅನೇಕ ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದ್ದಾರೆ.
ಬಡ ಮಕ್ಕಳಿಗೆ ಪೋಷಕಾಂಶ ಭರಿತವಾದ ಊಟವನ್ನು ನೀಡುವುದರ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುತ್ತಿರುವ ಯೋಜನೆ ಎಂದರೆ ಅನ್ನಾಮೃತ ಯೋಜನೆ. ಈ ಯೋಜನೆಗೆ ಧನಸಹಾಯ ಮಾಡುವುದರ ಮೂಲಕ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲು ಸಹಾಯ ಮಾಡಿದಂತಾಗುವುದು. ಅಲ್ಲದೆ ಯದುವಿನಂತಹ ಇನ್ನಷ್ಟು ಮಕ್ಕಳು ವಿದ್ಯಾಭ್ಯಾಸ ಪಡೆದುಕೊಳ್ಳಲು ಸಹಾಯವಾಗುವುದು. ಅಲ್ಲದೆ ಮುಂದೊಂದು ದಿನ ತಾನು ಒಳ್ಳೆಯ ಕ್ರೀಡಾಪಟುವಾಗಬೇಕೆನ್ನುವ ಆತನ ಕನಸು ನೆರವೇರಲು ದಯವಿಟ್ಟು ಯದುಗೆ ಸಹಾಯ ಮಾಡಿ