ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಪುಟ್ಟ ಮಗುವಿನ ಶಸ್ತ್ರಚಿಕಿತ್ಸೆಗೆ ನಿಮ್ಮ ಸಹಾಯವಿರಲಿ...

Google Oneindia Kannada News

ಹಾಲು ಗಲ್ಲದ ತೊದಲು ನುಡಿಗಳಲ್ಲಿ ಅಪ್ಪ ಅಮ್ಮನನ್ನು ನಗಿಸಬೇಕಿದ್ದ ಈ ಎಳೆಯ ಮಗುವಿನ ನಗುವನ್ನು ಗಂಭೀರವಾದ ಆರೋಗ್ಯ ಸಮಸ್ಯೆ ಕಾಡಲು ಶುರು ಮಾಡಿದೆ. ಈ ಎಂಟು ತಿಂಗಳ ಪುಟ್ಟ ಮಗುವಿನ ಪರಿಸ್ಥಿತಿ ಎಂಥವರಲ್ಲೂ ಮರುಕ ಹುಟ್ಟಿಸುತ್ತದೆ.

ತಮಿಳುನಾಡಿನ ತಿರುವಲ್ಲೂರ್ ಮೂಲದ ಗ್ಲಾಡಿ ಸಾರಾ ಹುಟ್ಟುತ್ತಾ ಆರೋಗ್ಯವಾಗಿಯೇ ಇದ್ದಳು. ಆದರೆ ಐದು ತಿಂಗಳು ಕಳೆದ ನಂತರ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಮೂರು ತಿಂಗಳ ಹಿಂದೆ ಅತಿಯಾದ ಶೀತ ಕಾಡಲು ಶುರುವಾಯಿತು. ಒಂದೆರಡು ದಿನದಲ್ಲಿ ಸರಿಯಾಗಬಹುದು ಎಂದು ಹಾಕಿದ ಅಂದಾಜು ಎಣಿಕೆ ತಪ್ಪಿತ್ತು. ದಿನಗಳೆದಂತೆ ಸಮಸ್ಯೆ ಹೆಚ್ಚಾಗುತ್ತಲೇ ಹೋಯಿತು.

ಹೃದಯದಲ್ಲಿ ಸಮಸ್ಯೆಯಿರುವ ಈ ಪುಟ್ಟ ಮಗುವಿಗೆ ನೆರವಾಗಿ...ಹೃದಯದಲ್ಲಿ ಸಮಸ್ಯೆಯಿರುವ ಈ ಪುಟ್ಟ ಮಗುವಿಗೆ ನೆರವಾಗಿ...

ಮಗುವಿನ ಆರೋಗ್ಯ ಸರಿಯಿಲ್ಲ ಎಂಬುದು ತಂದೆ ತಾಯಿಗೆ ಮನವರಿಕೆಯಾಯಿತು. ಅಲ್ಲಿಗೆ ಮೊದಲ ಬಾರಿ ಅವರು ತಿರುವಲ್ಲೂರ್‌ನಲ್ಲಿ ಸ್ಥಳೀಯ ವೈದ್ಯರನ್ನು ಸಂಪರ್ಕ ಮಾಡಿದರು. ಇದು ಗಂಭೀರ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಿದ ವೈದ್ಯರು ತಿರುವಲ್ಲೂರ್ ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡಿದರು.

Help 8 Months Old Glady Sara Treatment For Congenital Heart Disease

ಅದೇ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಮಗುವನ್ನು ಅಲ್ಲಿ ಪರೀಕ್ಷಿಸಿದ ನಂತರ ಹೃದಯದಲ್ಲಿ ಸಮಸ್ಯೆ ಇರುವುದು ಕಂಡುಬಂತು. ಶಸ್ತ್ರಚಿಕಿತ್ಸೆ ನಡೆಸಲೇಬೇಕೆಂದು ಹೇಳಿದರು. ಅಲ್ಲಿ, ಗ್ಲಾಡಿ ಸಾರಾಳ ಶಸ್ತ್ರಚಿಕಿತ್ಸೆಗೆ ಹಾಗೂ ಹೆಚ್ಚಿನ ಪರಿಶೀಲನೆಗೆ MIOT ಆಸ್ಪತ್ರೆಗೆ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು.

ಆದರೆ ಶಸ್ತ್ರ ಚಿಕಿತ್ಸೆಗೆ ಎಷ್ಟು ಹಣ ಖರ್ಚಾಗುತ್ತದೆ ಎಂಬ ಆತಂಕದಲ್ಲಿಯೇ ತಮ್ಮ ಮಗುವನ್ನು ಕರೆದುಕೊಂಡು ಜೆರೋಲ್ಡ್, ಶೀಬಾ ಆಸ್ಪತ್ರೆ ಮೆಟ್ಟಿಲೇರಿದರು. MIOT ಆಸ್ಪತ್ರೆಯಲ್ಲಿ ಮಗುವನ್ನು ಪರಿಶೀಲಿಸಿ ಶೀಘ್ರವೇ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ತಿಳಿಸಿದ್ದಾರೆ. ಮಗುವಿನ ಹೃದಯದಲ್ಲಿ ರಂಧ್ರವಿದ್ದು, ಈ ರಂಧ್ರ ಮುಚ್ಚಲು VSD Closure ಶಸ್ತ್ರಚಿಕಿತ್ಸೆ ನಡೆಸಬೇಕೆಂದು ತಿಳಿಸಿದ್ದಾರೆ.

Help 8 Months Old Glady Sara Treatment For Congenital Heart Disease

ಟೆಂಪೋ ಚಾಲಕನಾಗಿ ಕೆಲಸ ಮಾಡುತ್ತಿರುವ ಜೆರೋಲ್ಡ್‌ಗೆ ಮಗಳ ಹೃದಯ ಶಸ್ತ್ರಚಿಕಿತ್ಸೆಗೆ ಬೇಕಾಗುವಷ್ಟು ಹಣವಿಲ್ಲ. ಬೇರೆ ಸಾಧ್ಯತೆಯೂ ಅವರ ಕಣ್ಣಿಗೆ ಕಾಣುತ್ತಿಲ್ಲ. ಲಾಕ್‌ಡೌನ್, ಕೊರೊನಾ ಸೋಂಕಿನ ಕಾರಣವಾಗಿ ದಿನನಿತ್ಯದ ಜೀವನವೂ ಕಷ್ಟವಾಗಿದೆ. ಹೀಗಿದ್ದಾಗ ಲಕ್ಷಾಂತರ ಹಣ ತರುವ ಮಾತೆಲ್ಲಿ?

ಹೀಗಾಗಿ ಮಗಳ ಶಸ್ತ್ರಚಿಕಿತ್ಸೆಗೆ ದಾನಿಗಳ ಮೊರೆ ಹೋಗಿದ್ದಾರೆ.

ಶಸ್ತ್ರಚಿಕಿತ್ಸೆಗೆ ಎಷ್ಟು ಖರ್ಚಾಗುತ್ತದೆ: ಶಸ್ತ್ರಚಿಕಿತ್ಸೆ, ಐಸಿಯು, ಆಸ್ಪತ್ರೆ ವಾಸ, ಚಿಕಿತ್ಸಾ ನಂತರದ ತಪಾಸಣೆ, ಔಷಧ ಎಲ್ಲವನ್ನೂ ಒಳಗೊಂಡು ಸುಮಾರು 2,80,000 ರೂ ಖರ್ಚಾಗುವುದಾಗಿ ಆಸ್ಪತ್ರೆ ಆಡಳಿತ ತಿಳಿಸಿದೆ.

Recommended Video

ನ್ಯೂಸ್ ಆ್ಯಂಕರ್ ಗೆ ಗನ್ ಹಿಡಿದು ಹೆದರಿಸಿ ತಾಲಿಬಾನಿಗಳು ಏನ್ ಹೇಳಿಸಿದ್ರು ಗೊತ್ತಾ? | Oneindia Kannada

ಶಸ್ತ್ರಚಿಕಿತ್ಸೆಗೆ ನೆರವಾಗಲು ಹಲವು ದಾನಿಗಳು ಮುಂದಾಗಿದ್ದಾರೆ. ನಿಮ್ಮ ಕೈಲಾದ ಸಹಾಯ ಈ ಪುಟ್ಟ ಜೀವವನ್ನೇ ಉಳಿಸಬಹುದು. ಮತ್ತೆ ಪೋಷಕರ ಮುಖದಲ್ಲಿ ನಗು ಮೂಡಿಸಬಹುದು. ಈ ಮಗುವಿಗೆ ನೀವೂ ನೆರವಾಗಿ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X