ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ವರ್ಷದ ಪುಟ್ಟ ಬಾಲೆಯ ಹೃದಯ ಶಸ್ತ್ರ ಚಿಕಿತ್ಸೆಗೆ ಸಹಕರಿಸಿ

Google Oneindia Kannada News

2 ವರ್ಷದ ಪುಟ್ಟ ಬಾಲೆ ಬೃಂದಾ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ತುರ್ತು ಶಸ್ತ್ರ ಚಿಕಿತ್ಸೆ ಮಾಡದಿದ್ದರೆ ಮಗುವಿನ ಜೀವಕ್ಕೆ ಅಪಾಯವಿದೆ, ನೆರವಿಗಾಗಿ ಪೋಷಕರು ಮನವಿ ಮಾಡಿದ್ದಾರೆ.

ಬೃಂದಾ ಪೋಷಕರಿಬ್ಬರು ವಿವಿಧ ರೀತಿಯ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಬಳಿ ತಮ್ಮ ಕಾಯಿಲೆಗೆ ಚಿಕಿತ್ಸೆ ಪಡೆಯಲೂ ಕೂಡ ಹಣವಿಲ್ಲ, ಇಂತಹ ಸಂದರ್ಭದಲ್ಲಿ ಮಗುವಿನ ಚಿಕಿತ್ಸೆ ಭರಿಸುವುದು ಕಷ್ಟ ಎಂದು ಅಂಗಲಾಚಿದ್ದಾರೆ.

ಬೃಂದಾ ತಾಯಿ ಸತ್ಯಾ ಸಣ್ಣ ಪ್ರಮಾಣದಲ್ಲಿ ಟೈಲರ್ ಕೆಲಸ ಮಾಡಿಕೊಂಡಿದ್ದಾರೆ, ಇನ್ನು ತಂದೆ ಶಣ್ಮುಗನ್ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.

Help 2 Year Brindha Recover From Heart Problem

ತಾಯಿ ಸತ್ಯಾಗೆ ವಾಕಿಂಗ್ ಸ್ಟಿಕ್ ಇಲ್ಲದೆ ಒಂದು ಹೆಜ್ಜೆಯೂ ಮುಂದಿಡಲು ಸಾಧ್ಯವಿಲ್ಲ, ಮಗುವನ್ನು ಎತ್ತಿಕೊಳ್ಳಲೂ ಆಗುವುದಿಲ್ಲ. ಸತ್ಯ ತನ್ನ ಮಗುವಿನೊಂದಿಗೆ ಆಸ್ಪತ್ರೆಗೆ ಬಂದಿದ್ದಾಗ, ಅಲ್ಲಿಯೇ ತನ್ನ ಮಗುವಿನೊಂದಿಗೆ ಬಂದಿದ್ದ ಮತ್ತೊಬ್ಬ ಮಹಿಳೆಯೊಬ್ಬರು ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಸತ್ಯಾ ಒಮ್ಮೆ ಬಿದ್ದು, ಏಟಾಗಿತ್ತು ಬಳಿಕ ಅದನ್ನು ನಿರ್ಲಕ್ಷಿಸಿದ್ದ ಕಾರಣ ಮೊಣಕಾಲಿಗೆ ಶಾಶ್ವತವಾಗಿ ಊನವಾಗಿತ್ತು. ಹೀಗಾಗಿ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಬೇಕಾಯಿತು.

ಸತ್ಯಾ ಕೂಲಿ ಮಾಡುತ್ತಿದ್ದ ಶಣ್ಮುಗನ್ ಎಂಬುವವರನ್ನು ಮದುವೆಯಾಗಿದ್ದು, ಶಣ್ಮುಗನ್ ಕೂಡ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸ್ವಲ್ಪ ಸಮಯದ ಬಳಿಕ ಸತ್ಯಾ ತನ್ನ ಪೋಷಕರ ಮನೆಗೆ ಹೋಗಿ ನೆಲೆಸಿದ್ದಾಳೆ, ಸತ್ಯಾ ಹಾಗೂ ಶಣ್ಮುಗನ್ ದಂಪತಿಗೆ ಶಿವಾನಿ(7), ಹಂಸಿತಾ(5) ಮಕ್ಕಳಿದ್ದಾರೆ, ಮೂರನೆಯವಳು ಬೃಂದಾ. ಮಕ್ಕಳನ್ನು ಸತ್ಯಾ ಪೋಷಕರೇ ನೋಡಿಕೊಳ್ಳುತ್ತಿದ್ದಾರೆ. ಷಣ್ಮುಗನ್ ಆಗಾಗ ಬಂದು ಹೋಗುತ್ತಿರುತ್ತಾರೆ.

Help 2 Year Brindha Recover From Heart Problem

ಬೃಂದಾ ಹುಟ್ಟುವಾಗಲೇ ಆಕೆಗೆ ಕಾಯಿಲೆಯಿತ್ತು, ಪಕ್ಕೆಲುಬುಗಳು ಶ್ವಾಸಕೋಶ ಹಾಗೂ ಹೃದಯಕ್ಕೆ ಹಿಮ್ಮುಖವಾಗಿ ಬೆಳೆಯುತ್ತಿರುವುದು ಗಮನಕ್ಕೆ ಬಂದಿತ್ತು. ಮೊದಲು ತಿಳಿದಿರಲಿಲ್ಲ, ಕ್ರಮೇಣವಾಗಿ ಇದೊಂದು ಕಾಯಿಲೆ ಎಂಬುದು ಗೊತ್ತಾಗಿತ್ತು.

ಶ್ವಾಸಕೋಶದಲ್ಲಿ ಪೆಕ್ಟಸ್ ಎಕ್ಸ್‌ಕ್ಯಾವೇಟಮ್ ಹಾಗೂ ಹೈಪ್‌ಇನ್‌ಫ್ಲೇಷನ್ ಇದೆ ಎಂಬುದು ತಿಳಿದಿದೆ.

Help 2 Year Brindha Recover From Heart Problem

ಹೀಗಾಗಿ ಮಗುವಿಗೆ ಊಟ ಮಾಡಲು ಸಾಧ್ಯವಾಗುತ್ತಿಲ್ಲ, ಜೀರ್ಣಕ್ರಿಯೆಯೇ ನಡೆಯುತ್ತಿಲ್ಲ, ಇದೀಗ ಆಕೆಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದು, ನೆರವಿಗಾಗಿ ಅಂಗಲಾಚಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X