ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಲಿಕಾಪ್ಟರ್ ಪತನ, ವೈಷ್ಣೋದೇವಿ ಭಕ್ತರು ಸೇರಿ 7 ಜನ ಸಾವು

By Mahesh
|
Google Oneindia Kannada News

ಕಟ್ರಾ(ಜಮ್ಮು), ನ.23: ವೈಷ್ಣೋದೇವಿ ದರ್ಶನಕ್ಕೆ ತೆರಳುತ್ತಿದ್ದ ಭಕ್ತರನ್ನು ಕೊಂಡೊಯ್ಯುತ್ತಿದ್ದ ಹಿಮಾಲಯನ್ ಹೆಲಿಕಾಪ್ಟರ್ ಸೋಮವಾರ ಜಮ್ಮುವಿನ ಕಟ್ರಾದಲ್ಲಿ ಪತನಗೊಂಡಿದೆ. ಪ್ರಯಾಣಿಕರು, ಮಹಿಳಾ ಪೈಲಟ್ ಒಬ್ಬರು ಸೇರಿದಂತೆ ಒಟ್ಟು ಏಳು ಜನ ಮೃತಪಟ್ಟಿದ್ದಾರೆ.

ಹಿಮಾಲಯ ಹೆಲಿ ಸರ್ವಿಸ್ ಖಾಸಗಿ ಸಂಸ್ಥೆಯ ಈ ಹೆಲಿಕಾಪ್ಟರ್ ನಲ್ಲಿ ಆರು ಮಂದಿ ಭಕ್ತರು ಪ್ರಯಾಣಿಸುತ್ತಿದ್ದರು. ಸಾಂಚಿಚಾಟ್ ನಿಂದ ರೇಯಾಸಿ ಜಿಲ್ಲೆಯ ಕಟ್ರಾಗೆ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

Helicopter carrying Vaishno Devi Pilgrims crashes 7 Killed Katra

ವಿಪರೀತ ಮಂಜು ಮುಸುಕಿದ ವಾತಾವರಣ, ಪ್ರತಿಕೂಲ ಹವಾಮಾನದ ನಡುವೆ ಹೆಲಿಕಾಪ್ಟರ್ ಸಂಚಾರ ಕಷ್ಟವಾಗಿತ್ತು. ಹೆಲಿಕಾಪ್ಟರ್ ಕೆಳಗೆ ಬಿದ್ದ ನಂತರ ಬೆಂಕಿ ಹೊತ್ತಿಕೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಹೆಲಿಕಾಪ್ಟರ್ ಪೈಲಟ್ ಸುಮಿತ್ರಾ ವಿಜಯನ್ ಸೇರಿದಂತೆ ಏಳು ಮಂದಿ ಸಾವಿಗೀಡಾಗಿದ್ದಾರೆ. ಶವಗಳನ್ನು ಹೊರತೆಗೆಯಲಾಗಿದೆ. ಚಾರ್ ಧಾಮ್ ಯಾತ್ರಾಕ್ಕೂ ಕೂಡಾ ಹೆಲಿಕಾಪ್ಟರ್ ಸೇವೆ ಒದಗಿಸುತ್ತಿರುವ ಹಿಮಾಲಯನ್ ಹೆಲಿ ಸರ್ವೀಸ್ ನ ಪ್ರಕಾರ ಹೆಲಿಕಾಪ್ಟರ್ ನಲ್ಲಿನ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.

Helicopter carrying Vaishno Devi Pilgrims crashes 7 Killed Katra

ಹೆಲಿಕಾಪ್ಟರ್ ಗೆ ಸುಮಿತ್ರಾ ಅವರು ಮುಖ್ಯ ಪೈಲಟ್ ಆಗಿದ್ದರು. ಪ್ರಾಥಮಿಕ ತನಿಖೆಯಿಂದ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬ್ಲಾಕ್ ಬಾಕ್ಸ್ ಪತ್ತೆಯಾದ ನಂತರ ನಿಜವಾದ ಕಾರಣ ತಿಳಿಯಲಿದೆ ಎಂದು ಡಿಐಜಿ ಉಧಂಪುರ್ ರಿಯಾಸಿ ಪ್ರಾಂತ್ಯದ ಸುರೀಂಧರ್ ಗುಪ್ತಾ ಹೇಳಿದ್ದಾರೆ.

ಸಮುದ್ರಮಟ್ಟದಿಂದ ಸುಮಾರು 5300 ಅಡಿ ಎತ್ತರದಲ್ಲಿರುವ ಹಿಮಾಲಯದ ತಪ್ಪಲಿನ ತ್ರಿಕೂಟ ಪರ್ವತದಲ್ಲಿರುವ ಈ ಶಕ್ತಿ ದೇಗುಲಕ್ಕೆ ಟ್ರೆಕ್ ಮಾಡಿಕೊಂಡು ಕೂಡಾ ಹೋಗಬಹುದು. ಅದರೆ, ಸುಮಾರು 8-10 ಕಿ.ಮೀ ದೂರ ನಡೆಯಲು ಆಗದ ಭಕ್ತರು ಹೆಲಿಕಾಪ್ಟರ್ ಸೇವೆಯನ್ನು ಬಯಸುತ್ತಾರೆ. ಇಲ್ಲಿಗೆ ಕಟ್ರಾ ಮುಖ್ಯ ಪಟ್ಟಣವಾಗಿದ್ದು, ಜಮ್ಮುವಿನಿಂದ 50 ಕಿ.ಮೀ ದೂರದಲ್ಲಿದೆ.

ಘಟನೆ ಬಗ್ಗೆ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ, ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

English summary
A helicopter carrying a group of pilgrims bound for Vaishno Devi has crashed in Jammu's Katra, killing six pilgrims and a woman pilot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X