ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ಮತ್ತು ಉತ್ತರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ, 11 ಸಾವು

|
Google Oneindia Kannada News

ಕಾನ್ಪುರ್ ಮೇ 30: ಕಳೆದ ರಾತ್ರಿ ಎರಡು ಪ್ರತ್ಯೇಕ ರಾಜ್ಯಗಳಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಟ್ಟು 11 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ ಗ್ರಾಮಾಂತರದಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ನಿನ್ನೆ ರಾತ್ರಿ ಇಲ್ಲಿ ಕಾರು ಮತ್ತು ಟ್ರಕ್ ನಡುವೆ ಭಾರಿ ಡಿಕ್ಕಿ ಸಂಭವಿಸಿದ್ದು ಡಿಕ್ಕಿಯ ರಬಸಕ್ಕೆ 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೂಸಾ ನಗರ ಪ್ರದೇಶದಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದ ಬಗ್ಗೆ ಮಾಹಿತಿ ನೀಡಿದ ಕಾನ್ಪುರ್ ದೇಹತ್ ಎಸ್ಪಿ ಸ್ವಪ್ನಿಲ್ ಮಾಮ್ಗೈ, ವೇಗವಾಗಿ ಬಂದ ಕಾರು ಮುಂಭಾಗದಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದು ಐದು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಲಡಾಖ್‌ನಲ್ಲಿ ಸೇನಾ ವಾಹನ ಅಪಘಾತ: ಏಳು ಯೋಧರ ಸಾವುಲಡಾಖ್‌ನಲ್ಲಿ ಸೇನಾ ವಾಹನ ಅಪಘಾತ: ಏಳು ಯೋಧರ ಸಾವು

ಆಂಧ್ರಪ್ರದೇಶದ ಪಲ್ನಾಡಿನಲ್ಲಿ ಮಿನಿವ್ಯಾನ್‌ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ರೆಂಟಚಿಂತಲ ಗ್ರಾಮದಲ್ಲಿ ನಿಂತಿದ್ದ ಮಿನಿವ್ಯಾನ್‌ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಹತ್ತು ಮಂದಿ ಗಾಯಗೊಂಡಿದ್ದಾರೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ ಅಪಘಾತದ ವೇಳೆ ಮಿನಿವ್ಯಾನ್‌ನಲ್ಲಿ 39 ಮಂದಿ ಪ್ರಯಾಣಿಕರಿದ್ದರು. ಈ ಮಿನಿವ್ಯಾನ್ ಶ್ರೀಶೈಲದಿಂದ ಬರುತ್ತಿತ್ತು ಎಂದು ಗುರ್ಜಾಲ ಪೊಲೀಸ್ ಉಪಾಧೀಕ್ಷಕ (ಡಿಎಸ್ಪಿ) ಜಯರಾಮ್ ತಿಳಿಸಿದ್ದಾರೆ.

Heavy road accidents in UP and Andra pradesh, 11 killed

"ಪಲ್ನಾಡು ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಿಂತಿದ್ದ ಮಿನಿವ್ಯಾನ್‌ಗೆ ಟ್ರಕ್ ಡಿಕ್ಕಿ ಹೊಡೆದು ಆರು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 10 ಮಂದಿಗೆ ಗಂಭೀರ ಗಾಯಗಳಾಗಿವೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ರಕ್ಷಣೆ ಕಾರ್ಯಾಚರಣೆಗಳು ನಡೆಸಿದ್ದಾರೆ" ಎಂದು ಡಿಎಸ್ಪಿ ಹೇಳಿದರು. ಗಾಯಾಳುಗಳನ್ನು ಗುರ್ಜಾಲ ಸರ್ಕಾರಿ ಆಸ್ಪತ್ರೆ ಹಾಗೂ ನರಸರಾವ್‌ಪೇಟೆಯ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

(ಒನ್ಇಂಡಿಯಾ ಸುದ್ದಿ)

English summary
A total of 11 people were killed and 10 injured in two separate road accidents in Uttar Pradesh and Andhra Pradesh last night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X