ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್, ಕರ್ನಾಟಕ, ಮಹಾರಾಷ್ಟ್ರದಲ್ಲಿ ಮುಂದಿನ 6 ತಾಸಿನಲ್ಲಿ ಭಾರಿ ಮಳೆ ಸಾಧ್ಯತೆ

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 14: ಹೈದರಾಬಾದಿನಲ್ಲಿ 191.8 ಮಿ.ಮೀನಷ್ಟು ಮಳೆಯಾಗಿದೆ. 1903ರ ನಂತರ ಅಕ್ಟೋಬರ್‌ನಲ್ಲಿ ಸುರಿದ ಅತಿ ಹೆಚ್ಚು ಮಳೆ ಇದಾಗಿದೆ.

ಮಧ್ಯಪ್ರದೇಶ, ಮರಾಠವಾಡ, ಕೊಂಕಣ, ಗೋವಾ, ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮುಂದಿನ ಐದು ತಾಸಿನೊಳಗಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಉತ್ತರ ಕರ್ನಾಟಕಕ್ಕೆ ರೆಡ್ ಅಲರ್ಟ್: ಕರಾವಳಿ, ಮಲೆನಾಡಲ್ಲೂ ಮಳೆ ಉತ್ತರ ಕರ್ನಾಟಕಕ್ಕೆ ರೆಡ್ ಅಲರ್ಟ್: ಕರಾವಳಿ, ಮಲೆನಾಡಲ್ಲೂ ಮಳೆ

ತೆಲಂಗಾಣದಲ್ಲಿ ಮಂಗಳವಾರ ಭಾರಿ ಮಳೆ ಸುರಿದಿದೆ. ರಸ್ತೆಗಳು ಜಲಾವೃತವಾಗಿ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು. ಇನ್ನು ಕೆಲವು ಬಡಾವಣೆಗಳಿಗೆ ನೀರು ನುಗ್ಗಿ, ವಾಹನಗಳನ್ನು ತೇಲಿಸಿಕೊಂಡು ಹೋಗಿವೆ.

Heavy Rains Predicted Over Maharashtra Hyderabad And Karnataka

ಕಳೆದ 24 ಗಂಟೆಯೊಳಗೆ ಹೈದರಾಬಾದಿನಲ್ಲಿ 191.8 ಮಿ.ಮೀನಷ್ಟು ಮಳೆಯಾಗಿದೆ. 1903ರ ನಂತರ ಇದೇ ಮೊದಲ ಬಾರಿಗೆ ಇಷ್ಟು ಮಳೆ ಸುರಿದಿದೆ.

ಉತ್ತರ ಆಂಧ್ರಪ್ರದೇಶದ ಕರಾವಳಿಯಲ್ಲಿ ಗಾಳಿಯ ತೀವ್ರತೆ ಹೆಚ್ಚಾಗಿರುವ ಕಾರಣ ಅ.14 ಮತ್ತು 15 ರಂದು ಕರ್ನಾಟಕದ ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿಯಲಿದೆ. ಹೀಗಾಗಿ ಬಾಗಲಕೋಟೆ, ಬೆಳಗಾವಿ, ಬೀದರ್,ಧಾರವಾಡ, ಹಾವೇರಿ, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ ಜಿಲ್ಲೆಗಳಿಗೆ ರೆಡ್‌ ಅಲರ್ಟ್ ಘೋಷಿಸಲಾಗಿದೆ.

ಭಾರಿ ಮಳೆಗೆ ಗೋಡೆ ಕುಸಿದು 2 ತಿಂಗಳ ಕಂದಮ್ಮ ಸೇರಿ 9 ಮಂದಿ ಸಾವು ಭಾರಿ ಮಳೆಗೆ ಗೋಡೆ ಕುಸಿದು 2 ತಿಂಗಳ ಕಂದಮ್ಮ ಸೇರಿ 9 ಮಂದಿ ಸಾವು

ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಅಕ್ಟೋಬರ್ 16 ರಂದು ಮಳೆಯಾಗಲಿದೆ.ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕರಾವಳಿಯ ದ.ಕ, ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದೆ. ಇದರ ಜತೆಗೆ ಹವಾಮಾನ ಇಲಾಖೆ ಕೂಡ ಎರಡು ದಿನಗಳ ಕಾಲ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ.

ಕರಾವಳಿಯಲ್ಲಿ ಅಕ್ಟೋಬರ್‌ 14 ಮತ್ತು 15ರಂದು ಆರೆಂಜ್‌ ಅಲರ್ಟ್‌ ಇರಲಿದೆ. ಅಕ್ಟೋಬರ್‌ ಕೊನೆಯ ತನಕವೂ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹೈದರಾಬಾದಿನಲ್ಲಿ ಕಾಪೌಂಡ್ ಗೋಡೆ ಕುಸಿದು 9 ಮಂದಿ ಸಾವನ್ನಪ್ಪಿದ್ದಾರೆ.

English summary
The India Meteorological Department (IMD) has warned of very heavy to extremely heavy rainfall over Madhya Maharashtra, Marathwada, parts of south Konkan, Goa and north interior Karnataka during the next six hours of Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X