ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 27 ರಿಂದ ಅಸ್ಸಾಂ ಹಾಗೂ ಬೆಂಗಳೂರಿನಲ್ಲಿ ಅಧಿಕ ಮಳೆಯ ಮುನ್ಸೂಚನೆ

|
Google Oneindia Kannada News

ಗುವಾಹಟಿ, ಮೇ 26: ಅಸ್ಸಾಂನ ಕೆಲವು ಭಾಗಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತ ಅಪ್ಪಳಿಸಿ ಅಲ್ಲಿನ ಜನತೆಯ ನಿದ್ದೆಗೆಡಿಸಿತ್ತು.ಇದೀಗ ಅಸ್ಸಾಂನಲ್ಲಿ ಭಾರಿ ಮಳೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ಬರ್ಪೇಟಾ, ಬಾಸ್ಕಾ, ನಾಲ್‌ಬಾರಿ, ಕಮ್ರುಪ್ ಪ್ರದೇಶದಲ್ಲಿ ಮುಂದಿನ 24 ಗಂಟೆಗಳಲ್ಲಿ ಹೆಚ್ಚು ಮಳೆಯಾಗಲಿದೆ.

ಮೇ 30ರವರೆಗೂ ಕರ್ನಾಟಕದಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ ಮೇ 30ರವರೆಗೂ ಕರ್ನಾಟಕದಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಮುಂದಿನ ಮೂರು ದಿನ ಮೋಡಕವಿದ ವಾತಾವರಣ ಮುಂದುವರೆಯಲಿದೆ.ಮಾರ್ಚ್ 27ರಿಂದ ಮೂರುದಿನಗಳ ಕಾಲ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ಎಚ್ಚರಿಕೆಯಿಂದಿರುವಂತೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸ್ ರೆಡ್ಡಿ ಮುನ್ಸೂಚನೆ ನೀಡಿದ್ದಾರೆ.

Heavy Rains Predicted In Parts of Assam And Bengaluru

ಭಾನುವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಧಾರಾಕಾರ ಮಳೆ ಸುರಿದ ಪರಿಣಾಮ ಹಲವೆಡೆ ಮರಗಳು ಧರೆಗುಳಿದಿದ್ದವು. ಲಾಕ್‌ಡೌನ್‌ ಕರ್ಪ್ಯೂ ಇದ್ದ ಪರಿಣಾಮ ಜನಸಂಚಾರ ವಾಹನ ಸಂಚಾರವಿಲ್ಲದೇ ಯಾವುದೇ ದುರ್ಘಟನೆ, ಅನಾಹುತ ಸಂಭವಿಸಿರಲಿಲ್ಲ.

ಅರಬ್ಬಿ ಸಮುದ್ರ, ಬಂಗಾಳಕೊಲ್ಲಿಯ ಮೇಲ್ಮೈ ಸುಳಿಗಾಳಿಯಿಂದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದೆ ಎಂದಿದ್ದಾರೆ.ಆದರೆ ಬುಧವಾರದಿಂದ ಮಳೆ ಹೆಚ್ಚಾಗಿ ಅಬ್ಬರಿಸುವ ಸಾಧ್ಯತೆಯಿದೆ.

ಮರ ಬೀಳುವ, ವಿದ್ಯುತ್ ಕಂಬ ಬೀಳುವ ಸಂಭವವಿದೆ. ಚರಂಡಿ, ರಸ್ತೆ ಗುಂಡಿಯಿಂದ ರಕ್ಷಿಸಿಕೊಳ್ಳುವಂತೆ ಮಳೆಯಲ್ಲಿ ಓಡಾಡದಂತೆ ಎಚ್ಚರಿಕೆಯಿಂದಿರಲು ಹೇಳಿದ್ದಾರೆ.

English summary
Lightning, thunderstorm and moderate spells of rainfall is very likely to affect parts of Bongaigaon, Barpeta, Baksa, Nalbari, Kamrup and Some parts of Bengaluru too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X